ಬೆಂಗಳೂರು:ಮೊನ್ನೆಮೊನ್ನೆಯಷ್ಟೇ ಯಾರೋ ಎಲಾನ್ ಮಸ್ಕ್ ಹೆಸರಿನಲ್ಲೇ ಟ್ವಿಟರ್​ ಖಾತೆ ತೆರೆದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ಕೆಲವು ದಿನಗಳ ಹಿಂದ ಕಂಗನಾ ರಣಾವತ್ ಹೆಸರಿನಲ್ಲೂ ಒಂದು ಖಾತೆ ತೆರೆದು ಆಕೆ ಮತ್ತೆ ಟ್ವಿಟರ್​ಗೆ ಮರಳಿದಂತೆ ಬಿಂಬಿಸಲಾಗಿತ್ತು. ಮಾತ್ರವಲ್ಲ ಸ್ಯಾಂಡಲ್​ವುಡ್​ನಲ್ಲೂ ಯಾರೋ ಅಭಿಷೇಕ್ ಅಂಬರೀಷ್ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದಿದ್ದು, ಅದು ಸುಮಲತಾ ಅಂಬರೀಷ್ ಗಮನಕ್ಕೆ ಬಂದು, ಆಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.
ಇವು ಕೆಲವು ಉದಾಹರಣೆಗಳಷ್ಟೇ.. ಹೀಗೆ ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಟ್ವಿಟರ್​ ಖಾತೆ ತೆರೆದು ಟ್ವೀಟ್ ಮಾಡುತ್ತಿರುವ ಪ್ರಕರಣಗಳು ಹಲವಾರಿವೆ. ಆದರೆ ಇನ್ನುಮುಂದೆ ಅಂಥ ಖಾತೆಗಳು ಶಾಶ್ವತವಾಗಿ ಅಮಾನತುಗೊಳ್ಳಲಿವೆ ಎಂಬುದನ್ನು ಟ್ವಿಟರ್​ ಮುಖ್ಯಸ್ಥ ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಮಗನ ಪರವಾಗಿ ಹೀಗೊಂದು ಮನವಿ ಮಾಡಿಕೊಂಡ್ರು ಸುಮಲತಾ ಅಂಬರೀಷ್​..
ಯಾವುದೇ ಟ್ವಿಟರ್​ ಹ್ಯಾಂಡಲ್ ಮೂಲಕ ಇನ್ನೊಬ್ಬರ ಸೋಗಿನಲ್ಲಿ ಟ್ವೀಟ್ ಮಾಡುತ್ತಿದ್ದರೆ ಮತ್ತು ಇನ್ನೊಬ್ಬರ ಹೆಸರಿನಲ್ಲಿ ಖಾತೆ ತೆರೆದಿದ್ದರೂ ‘ಪರೋಡಿ’ ಖಾತೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿರದಿದ್ದರೆ ಅಂಥ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
Going forward, any Twitter handles engaging in impersonation without clearly specifying “parody” will be permanently suspended— Elon Musk (@elonmusk)November 6, 2022
Going forward, any Twitter handles engaging in impersonation without clearly specifying “parody” will be permanently suspended

ಹೋಟೆಲ್ ಕಾರ್ಮಿಕನಿಗೆ 55 ಕೋಟಿ ರೂಪಾಯಿ ಜಾಕ್​ಪಾಟ್​!
ರಾತ್ರಿ ಮನೆಯಲ್ಲಿದ್ದ ವಿವಾಹಿತೆ, ಬೆಳಗ್ಗೆ ಪಕ್ಕದ ತೋಟದಲ್ಲಿ ಶವವಾಗಿ ಪತ್ತೆ!; ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದ ಆತನೇ ಆರೋಪಿ
ಪರೀಕ್ಷೆಗೆಂದು ಬ್ಲಡ್ ಡ್ರಾ ಮಾಡುತ್ತಿದ್ದಾಗಲೇ ನವಜಾತ ಶಿಶು ಸಾವು!; ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ-ಆಕ್ರೋಶ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
