ವಿಜಯವಾಡ:ಅಧಿಕಾರ ದುರ್ಬಳಕೆ ಪ್ರಕರಣಗಳು ನಮ್ಮ ದೇಶದಲ್ಲಿ ಹೊಸದೇನಲ್ಲ. ಒಬ್ಬರ ಅಧಿಕಾರವನ್ನು ಇಡೀ ಕುಟುಂಬ ದುರ್ಬಳಕೆ ಮಾಡಿಕೊಳ್ಳುವ ಸಾಕಷ್ಟು ಘಟನೆಗಳನ್ನು ಕಂಡಿದ್ದೇವೆ. ಅಂಥದ್ದೇ ಮತ್ತೊಂದು ಘಟನೆ ಇದೀಗ ಆಂಧ್ರ ಪ್ರದೇಶದಲ್ಲಿ ವರದಿಯಾಗಿದೆ.
ಆಂಧ್ರದ ಉಪಮುಖ್ಯಮಂತ್ರಿ ಮಗನೊಬ್ಬ ತನ್ನ ಸ್ನೇಹಿತರ ಜತೆಗೂಡಿ ವೇಗದ ಕಾರು ಚಾಲನೆ ಮಾಡಿದ್ದಲ್ಲದೆ, ಕಾರು ತಡೆದ ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ವಿಶಾಖಪಟ್ಟಣದ ಬೀಚ್​ ರಸ್ತೆಯಲ್ಲಿ ನಡೆದಿದೆ.
ಇದನ್ನೂ ಓದಿ:ಚೆನ್ನಾಗ್ ಓದು ಎಂದು ಮನೇಲಿ ಹೇಳಿದ್ದಕ್ಕೆ ಏನ್​ ಮಾಡ್ದ ನೋಡಿ ಈ ಪೋರ!
ಡಿಸಿಎಂ ಧರ್ಮನಾ ಕೃಷ್ಣದಾಸ್​ ಪುತ್ರ ರಾಮ್​ ಭರತ್​ ತಮ್ಮ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ. ರಾಮ್​ ಸ್ನೇಹಿತರು ಕಾರು ತಡೆದ ಪೇದೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅದೇ ಸಮಯದಲ್ಲಿ ರಾಮ್​ ಕಾರಿನಲ್ಲಿದ್ದರು ಎಂದು ತಿಳಿದುಬಂದಿದೆ. ಹಲ್ಲೆ ಮಾಡಿರುವವರ ವಿರುದ್ಧ ಸಂತ್ರಸ್ತ ಪೇದೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಡಿಸಿಎಂ ಧರ್ಮನಾ ಗಮನಕ್ಕೂ ಬಂದಿದೆ. ಇದೀಗ ಯಾವುದೇ ಪ್ರಕರಣವನ್ನು ದಾಖಲಿಸದೇ ಸಂಧಾನದ ಮೂಲಕ ಪ್ರಕರಣವನ್ನು ಪೊಲೀಸರು ಇತ್ಯರ್ಥ ಪಡಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿ:ಸ್ಯಾಂಡಲ್​ವುಡ್​ಗೆ ಟಿಕ್​ಟಾಕ್​ ಸ್ಟಾರ್​ ಸೋನು ಶ್ರೀನಿವಾಸ ಗೌಡ ಎಂಟ್ರಿ! ಅದ್ವಿತಿ ಶೆಟ್ಟಿ, ಧರ್ಮ ಕೀರ್ತಿರಾಜ್​ ಜತೆ ಸ್ಕ್ರೀನ್​ ಶೇರ್​
ಹೆಂಡತಿಯ ಕಾಟ ತಾಳಲಾರದೆ ಮಗನೊಂದಿಗೆ ಬಾವಿಗೆ ಹಾರಿದ ಪತಿ! ಮಲತಾಯಿ ಧೋರಣೆಗೆ ಬಾಲಕ ಬಲಿ

VIDEO| ಹಸಿವು ನೀಗಿಸಿದ ಮಹಿಳೆಗೆ ಬೀದಿ ನಾಯಿಯ ಕಣ್ಣೀರಿನ ಕೃತಜ್ಞತೆ: ಕಣ್ಣಂಚಲಿ ನೀರು ತರಿಸುವ ವೈರಲ್​ ವಿಡಿಯೋ!

ಟಿಂಡರ್​ನಲ್ಲಿ ಪರಿಚಯವಾದ ಯುವತಿಯನ್ನು ರೇಪ್​ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
