ವಿಶಾಖಪಟ್ಟಣಂ:ಪೊಲೀಸ್ ಕಿರುಕುಳ ಎಂದು ಆರೋಪಿಸಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿರುವ ಸಂತ್ರಸ್ತರ ಸಂಬಂಧಿಕರ ಮನೆಗೆ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಅಮ್ಝಾನ್​ ಬಾಷಾ ಮತ್ತು ಸಂಸದ ಪೊಚಾ ಬ್ರಹ್ಮಾನಂದ ರೆಡ್ಡಿ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಕರ್ನೂಲ್​ ಜಿಲ್ಲೆಯ ನಂದ್ಯಾಲ್​ ಪಟ್ಟಣದ ಬಳಿ ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿತ್ತು. ಇದೇ ಪ್ರಕರಣದಲ್ಲಿ ಭಾನುವಾರ ವೃತ್ತ ನಿರೀಕ್ಷಕ ಸೋಮಶೇಖರ್​ ರೆಡ್ಡಿ ಮತ್ತು ಹೆಡ್​ ಕಾನ್ಸ್​ಟೇಬಲ್​ ಗಂಗಾಧರ್​ ಎಂಬುವರನ್ನು ಬಂಧಿಸಲಾಗಿದೆ. ಮೃತ ಕುಟುಂಬಸ್ಥರಾದ ಶೇಖ್​ ಅಬ್ದುಲ್​ ಸಲಾಂ (45), ಪತ್ನಿ ನೂರ್​ಜಹಾನ್​ (43), ಮಗ ದಾದಾ ಖಲಂದರ್​ (9) ಮತ್ತು ಮಗಳು ಸಲ್ಮಾ (14)ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂಬ ಆರೋಪದ ಮೇಲೆ ಪೇದೆಗಳನ್ನು ಬಂಧಿಸಲಾಗಿದೆ. ಇಡೀ ಕುಟುಂಬವು ಕಳೆದ ಬುಧವಾರ ಆತ್ಮಹತ್ಯೆಗೆ ಶರಣಾಗಿತ್ತು.
ಆತುರದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಬ್ದುಲ್​ ಸಲಾಂ ಸ್ವತಃ ವಿಡಿಯೋ ರೆಕಾರ್ಡ್​ ಮಾಡಿ ಪೊಲೀಸ್​ ದೌರ್ಜನ್ಯ ಬಗ್ಗೆ ವಿವರಿಸಿದ್ದರು. ಪೊಲೀಸರು ನೀಡುತ್ತಿರುವ ಕಿರುಕುಳವನ್ನು ತಡೆಯಲಾಗದು ಎಂದು ಅಳಲು ತೋಡಿಕೊಂಡಿದ್ದರು. ಬಳಿಕ ಮೊಬೈಲ್​ ಫೋನ್​ ಅನ್ನು ಅವರ ಮನೆಯಲ್ಲಿಯೇ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಳಿಕ ಮೊಬೈಲ್​ ಫೋನ್​ ಮೃತರ ಸಂಬಂಧಿಕರ ಕೈಗೆ ಸಿಕ್ಕಿತ್ತು. ಇದರ ಜತೆಗೆ ವಿಡಿಯೋ ಜಾಲತಾಣದಲ್ಲೂ ವೈರಲ್​ ಆಗಿತ್ತು.
ಇದನ್ನೂ ಓದಿ:ಶಿರಾ ಬೈಎಲೆಕ್ಷನ್: ಮತಎಣಿಕೆ ಕೇಂದ್ರದ ಮುಂದೆ ಪಕ್ಷೇತರ ಅಭ್ಯರ್ಥಿಯಿಂದ ಪ್ರತಿಭಟನೆ
ನಾಂದ್ಯಾಲ್​ ಪಟ್ಟಣ ಪೊಲೀಸರು ಸುಳ್ಳು ಪ್ರಕರಣವೊಂದರಲ್ಲಿ ನಮನ್ನು ಸಿಲುಕಿಸಿದ್ದಾರೆ. ನಮಗೆ ಯಾರೊಬ್ಬರ ನೆರವು ಸಹ ಸಿಗುತ್ತಿಲ್ಲ. ಹೀಗಾಗಿ ನಾವು ನಮ್ಮ ಜೀವನಕ್ಕೆ ಅಂತ್ಯವಾಡುತ್ತಿದ್ದೇವೆ ಎಂದು ಕುಟುಂಬ ನೋವು ತೋಡಿಕೊಂಡಿತ್ತು.
ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಂದು ಮುಖ್ಯಮಂತ್ರಿ ವೈಎಸ್​ ಜಗನ್​ಮೋಹನ್​ ರೆಡ್ಡಿ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್​ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇಬ್ಬರು ಹಿರಿಯ ಐಪಿಎಸ್​ ಅಧಿಕಾರಿಗಳಾದ ಇನ್ಸ್​ಪೆಕ್ಟರ್​ ಜನರಲ್​ ಆಫ್​ ಪೊಲೀಸ್​ ಶಂಖ ಬ್ರಟಾ ಬಾಗ್ಚಿ ಮತ್ತು ಗುಂಟೂರು ಎಎಸ್​ಪಿ ಆರೀಫ್​ ಹಫೀಜ್​ ತನಿಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ವೃತ್ತ ನಿರೀಕ್ಷಕ ಸೋಮಶೇಖರ್​ ರೆಡ್ಡಿ ಮತ್ತು ಹೆಡ್​ ಕಾನ್ಸ್​ಟೇಬಲ್​ ಗಂಗಾಧರ್​ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹಾಗೂ ಬೇಕೆಂತಲೇ ಕಿರುಕುಳ ನೀಡಿದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅನೇಕ ಮುಸ್ಲಿಂ ಸಂಘಟನೆಗಳು ಸಹ ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.(ಏಜೆನ್ಸೀಸ್​)
Live: ಯಾರಿಗೆ ಬಿ’ಹಾರ’?; ಇಲ್ಲಿದೆ ಮತ ಎಣಿಕೆಯ ಚಿತ್ರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eighteen =
Remember me
