ಹೈದರಾಬಾದ್​:ಭ್ರಷ್ಟಾಚಾರ ಪ್ರಕರಣದಿಂದ ಪತಿಯನ್ನು ರಕ್ಷಿಸಲು ಕಳಂಕಿತ ಅಧಿಕಾರಿಯ ಪತ್ನಿಯೊಬ್ಬಳು ಸಾಕ್ಷ್ಯಾಧಾರ ನಾಶ ಮಾಡಲು ಯತ್ನಿಸಿರುವ ಪ್ರಕರಣವನ್ನು ಆಂಧ್ರ ಪ್ರದೇಶದ ಎಸಿಬಿ ಅಧಿಕಾರಿಗಳು ಭೇದಿಸಿದ್ದಾರೆ.
ವಿಶಾಖಪಟ್ಟಣಂ ಜಿಲ್ಲೆಯ ದೇವರಪಲ್ಲೇಯಲ್ಲಿ ಎಸಿಬಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುವಾಗ ಪ್ರಕರಣ ಬೆಳಕಿಗೆ ಬಂದಿದೆ. ಪತಿಯನ್ನು ರಕ್ಷಿಸಲು 500 ಮುಖಬೆಲೆಯ ನೋಟುಗಳನ್ನು ಸುಡಲು ಯತ್ನಿಸಿದ ಭ್ರಷ್ಟ ಸರ್ಕಾರಿ ಅಧಿಕಾರಿ ಎಂ. ರಮೇಶ್​ ಕುಮಾರ್​ ಪತ್ನಿ ಎಂ ವಸಂತ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ರಮೇಶ್​, ದೇವರಪಲ್ಲೆಯ ಠಾಣೆಯಲ್ಲಿ ಅರಣ್ಯಾಧಿಕಾರಿಯಾಗಿದ್ದಾರೆ. ದೂರುದಾರ ಬಿ. ಶ್ರೀನು ಪ್ರಕಾರ ದೇವರಪಲ್ಲೆ ಮಂಡಲದ ಸಮ್ಮಿದಿ ಗ್ರಾಮದಲ್ಲಿ ಶ್ರೀನು ಕೆಲ ತೇಗದ ಮರಗಳನ್ನು ಖರೀದಿಸಿದ್ದರಂತೆ. ಬಳಿಕ ಮರಗಳನ್ನು ಕತ್ತಿರಿಸಿ, ಸಾಗಿಸಬೇಕೆನ್ನುವಷ್ಟರಲ್ಲಿ ಈ ವಿಚಾರ ರಮೇಶ್​ಗೆ ತಿಳಿದಿದೆ. ಆವಾಗ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಶ್ರೀನುಗೆ ಬೆದರಿಕೆ ಹಾಕಿದ್ದಾರೆ. ಏನು ಮಾಡದಿರಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಲು ದೇವಸ್ಥಾನಕ್ಕೆ ಬಂದಿಳಿದ ಒಂದೇ ಕುಟುಂಬದ ಮೂವರು ದಾರುಣ ಸಾವು..!
ಈ ವಿಚಾರವನ್ನು ಶ್ರೀನು ಎಸಿಬಿ ಅಧಿಕಾರಿಗಳಿಗೆ ತಿಳಿಸಿದಾಗ ದೂರು ದಾಖಲಿಸಿಕೊಂಡ ಅಧಿಕಾರಿಗಳು ರಮೇಶ್​ರನ್ನು ರೆಡ್​ಹ್ಯಾಂಡ್​ ಆಗಿ ಹಿಡಿಯಲು ಖೆಡ್ಡಾ ತೋಡಿದ್ದರು. ಅದರಂತೆ ಡಿಎಸ್​ಪಿ ಕೆ ರಂಗರಾಜು ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿಗೆ ಸಿದ್ಧವಾಗಿತ್ತು. ಬುಧವಾರ ಸಂಜೆ ಲಂಚ ಸ್ವೀಕರಿಸುವಾಗ ರಮೇಶ್​​ರನ್ನು ನೇರವಾಗಿ ಎಸಿಬಿ ಅಧಿಕಾರಿಗಳು ಹಿಡಿದಿದ್ದಾರೆ. ಇದೇ ವೇಳೆ ರಮೇಶ್​ ಹಣವನ್ನು ತನ್ನ ಪತ್ನಿ ಕೈಯಲ್ಲಿ ನೀಡಿದ್ದ. ಆಕೆ ಸಾಕ್ಷಿ ನಾಶ ಮಾಡಲು ಹಣವನ್ನು ಸುಡುವಾಗ ಸಿಕ್ಕಿಬಿದ್ದಾರೆ.
ಅರ್ಧ ಬೆಂದಿದ್ದ ನೋಟುಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿರುವ ಅಧಿಕಾರಿಗಳು ಕಳಂಕಿತ ಅಧಿಕಾರಿ ರಮೇಶ್​ರನ್ನು ಬಂಧಿಸಿದ್ದಾರೆ. ರಮೇಶ್​ ಪತ್ನಿಯ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​​)
ಹಾಥರಸ್‌ ಕೇಸ್‌: ಎಫ್‌ಐಆರ್‌ ಇಲ್ಲ, ಸರ್ಕಾರದ ಪ್ರಶ್ನೆಗೆ ಉತ್ತರವೂ ಇಲ್ಲ… ತನಿಖೆಗೆ ಒಪ್ಪುತ್ತಿಲ್ಲವೆ ಸಿಬಿಐ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × 2 =
Remember me
