ವಿಜಯವಾಡ:ಕರೊನಾ ಲಸಿಕೆ ತೆಗೆದುಕೊಂಡ ಬಳಿಕ ಮೃತಪಟ್ಟ ಸ್ವಯಂಸೇವಕಿಯ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆಂಧ್ರ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಲಲಿತಾ (28) ಮೃತ ಸ್ವಯಂ ಸೇವಕಿ. ಈಕೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಮಂಡಲದ ನಿವಾಸಿ. ಭಾನುವಾರ ಇತರೆ ಎಂಟು ಮಂದಿಯೊಂದಿಗೆ ಲಲಿತಾ ಸಹ ಕರೊನಾ ಲಸಿಕೆ ಪಡೆದಿದ್ದಳು. ಲಸಿಕೆ ಪಡೆದ ಅಷ್ಟೂ ಮಂದಿಗೂ ತಲೆ ನೋವು ಮತ್ತು ಜ್ವರದಂತಹ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು.
ಇದನ್ನೂ ಓದಿರಿ:ಬಾಗಿಲು ತೆರೆದು ಮನೆಗೆ ಎಂಟ್ರಿ ಕೊಟ್ಟ ವ್ಯಾಘ್ರನಿಂದ ಕೇರಳ ನಿವಾಸಿ ಬಚಾವ್​ ಆಗಿದ್ದೇ ರೋಚಕ..!
ಆದರೆ, ಲಲಿತಾರ ಪರಿಸ್ಥತಿ ಮಾತ್ರ ತುಂಬಾ ಗಂಭೀರವಾಗಿತ್ತು. ಇದಾದ ಬಳಿಕ ಮಾತ್ರೆಯನ್ನು ತೆಗೆದುಕೊಂಡಿದ್ದ ಆಕೆ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ, ಸ್ವಲ್ಪ ಸಮಯದ ಬಳಿಕ ಲಲಿತಾ ಮೃತಪಟ್ಟರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಆಕೆಯ ಮೃತದೇಹವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆಂದು ದಾಖಲಿಸಿದ್ದಾರೆ.
ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಹಾಗೂ ಪಲಾಸಾ ಮಂಡಲದ ಶಾಸಕರಾಗಿರುವ ಡಾ.ಸಿದಿರಿ ಅಪ್ಪಲರಾಜು ಆಸ್ಪತ್ರೆಗೆ ಭೇಟಿ ಮಾಹಿತಿ ಮಾಹಿತಿಯನ್ನು ಪಡೆದು, ಲಲಿತಾ ಕುಟುಂಬದ ಜತೆ ಮಾತನಾಡಿದ್ದರು. ಅಲ್ಲದೆ, ಸರ್ಕಾರದಿಂದ ಹಣದ ನೆರವು ನೀಡುವುದಾಗಿಯು ಭರವಸೆ ನೀಡಿದ್ದರು.
ಇದನ್ನೂ ಓದಿರಿ:ಅಮ್ಮನ ಆಸ್ತಿ ತೆಗೆದುಕೊಂಡು ಬಾ ಎಂದು ಅಕ್ಕನಿಗೆ ಗಂಡ ಪೀಡಿಸುತ್ತಿದ್ದಾನೆ- ಅವಳಿಗೂ ಪಾಲು ಇದೆಯಾ?
ಇದೀಗ ಸಿಎಂ ಜಗನ್​ ನೇತೃತ್ವದ ಸರ್ಕಾರ ಲಲಿತಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಿದೆ. ಲಲಿತಾಗೆ ಮದುವೆಯಾಗಿ ಓರ್ವ ಗಂಡು ಮಗನಿದ್ದಾನೆ.(ಏಜೆನ್ಸೀಸ್​)
ಸಿಎಎ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ: ಸಾಮಾಜಿಕ ಕಾರ್ಯಕರ್ತನಿಗೆ ಜಾಮೀನು ನೀಡದ ಸುಪ್ರೀಂಕೋರ್ಟ್​

ಈ ಲೇಡಿ ಪೊಲೀಸ್​ ಓಡದಿದ್ದರೆ ಆತನ ಪ್ರಾಣವೇ ಹೋಗ್ತಿತ್ತು! ವಿಡಿಯೋ ನೋಡಿ…

ಸೆಕ್ಸ್​ ಡಾಲ್​ ಮದ್ವೆಯಾಗಿರುವ ಬಾಡಿಬಿಲ್ಡರ್​ನಿಂದ ಮತ್ತೊಂದು ವಿಚಿತ್ರ ನಿರ್ಧಾರ..!​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
