ವಿಜಯವಾಡ:ಆಂಧ್ರ ಪ್ರದೇಶದ ಅಂಗೋಲ್​ ಜಿಲ್ಲೆಯ ಇಂಜಿನಿಯರ್​ ವಿದ್ಯಾರ್ಥಿನಿ ತೇಜಸ್ವಿನಿ (20) ಆತ್ಮಹತ್ಯೆ ಪ್ರಕರಣ ಇದೀಗ ಭಾರಿ ಚರ್ಚೆ ಹುಟ್ಟುಹಾಕಿದ್ದು, ವಿದ್ಯಾರ್ಥಿ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಶುಲ್ಕ ಭರಿಸುವಂತೆ ವಿದ್ಯಾರ್ಥಿನಿಯ ಮೇಲೆ ಭಾರಿ ಒತ್ತಡ ಹಾಕಿದ್ದರಿಂದಲೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಸಂಘಟನೆಗಳು ಆರೋಪ ಮಾಡಿವೆ.
ತೇಜಸ್ವಿನಿ ಅಂಗೋಲ್​ನ ಕ್ಯುಐಎಸ್​ ಇಂಜಿನಿಯರ್ ಮತ್ತು ಟೆಕ್ನಾಲಜಿ​ ಕಾಲೇಜಿನ ದ್ವಿತೀಯ ವರ್ಷದ ಬಿಟೆಕ್​ ವಿದ್ಯಾರ್ಥಿನಿ. ಅಂಗೋಲನ್​ ಗೊಡುಗುಪಾಳ್ಯಂ ಮೂಲದವಳು. ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆಯ ಆತ್ಮಹತ್ಯೆಗೆ ಕಾಲೇಜು ಆಡಳಿತ ಮಂಡಳಿಯೇ ಕಾರಣ ಎಂದು ಕ್ಯುಐಎಸ್ ಕಾಲೇಜಿನ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿರಿ:ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಅಷ್ಟು ಒಳ್ಳೆಯವ ನಾನು- ಆದ್ರೆ ಹೆಂಡ್ತಿಗೆ ಕೋಪ… ಪ್ಲೀಸ್​ ಪರಿಹಾರ ಹೇಳಿ..
ತೇಜಸ್ವಿನಿ ಅವರು ಕಾಪು ಬಲಿಜಾ ಸಮುದಾಯಕ್ಕೆ ಸೇರಿದವಳು. ಹೀಗಾಗಿ ಸರ್ಕಾರದ ಶುಲ್ಕ ಮರುಪಾವತಿ ಯೋಜನೆ ಅಡಿಯ ಫಲಾನುಭವಿಯಾಗಿದ್ದಳು. ಕಳೆದ ವರ್ಷ ಶುಲ್ಕ ಮರುಪಾವತಿಯನ್ನು ಸರ್ಕಾರ ನೇರವಾಗಿ ಕಾಲೇಜಿಗೆ ಭರಿಸಿತ್ತು. ಆದರೆ, ಸಿಎಂ ಜಗನ್​ ಸರ್ಕಾರ 2020ರ ಆಗಸ್ಟ್​ನಲ್ಲಿ ಇದೇ ಯೋಜನೆಯನ್ನು ಜಗನನ್ನ ವಿದ್ಯಾ ದೀವಿನಾ ಹೆಸರಿನಲ್ಲಿ ಹೊಸದಾಗಿ ಮರು ಪರಿಚಯಿಸಿ, ಹಣವು ವಿದ್ಯಾರ್ಥಿಗಳ ತಂದೆ-ತಾಯಿ ಖಾತೆಗೆ ವರ್ಷದಲ್ಲಿ ನಾಲ್ಕು ಕಂತುಗಳಲ್ಲಿ ಪಾವತಿಯಾಗುತ್ತದೆ ಎಂದು ಹೇಳಿದ್ದರು ಎಂದು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಪ್ರಕಾಶಂ ಜಿಲ್ಲೆಯ ಕಾರ್ಯದರ್ಶಿ ವಿನೋದ್​ ತಿಳಿಸಿದರು.
ಸರ್ಕಾರ ಸಮಿತಿಯೊಂದನ್ನು ರಚಿಸಿ ಕಾಲೇಜುಗಳ ಗ್ರೇಡ್​ ಆಧಾರದ ಮೇಲೆ ಶುಲ್ಕ ಮರುಪಾವತಿ ಹಣವನ್ನು ನಿಗದಿಪಡಿಸಿತು. ಕ್ಯುಐಎಸ್​ ಕಾಲೇಜಿಗೆ ಸರ್ಕಾರ ವರ್ಷಕ್ಕೆ 36 ಸಾವಿರ ರೂ. ನಿಗದಿ ಮಾಡಿತು. ಆದರೆ, ಆಡಳಿತ ಮಂಡಳಿ ಇದನ್ನು ಪ್ರಶ್ನಿಸಿ ಹೆಚ್ಚಿನ ಶುಲ್ಕಕ್ಕೆ ಬೇಡಿಕೆ ಸಲ್ಲಿಸಿ ಕೋರ್ಟ್​ ಮೆಟ್ಟಿಲೇರಿತ್ತು. ಇದೀಗ ಪ್ರಕರಣ ಕೋರ್ಟ್​ನಲ್ಲಿದೆ ಎಂದು ವಿನೋದ್​ ಹೇಳಿದರು.
ಕಾಲೇಜು ಆಡಳಿತ ಮಂಡಳಿ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡಿತು. ಈ ವಿಚಾರದಲ್ಲಿ ಸಾಕಷ್ಟು ಕಿರುಕುಳ ನೀಡಿದೆ. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ವಿನೋದ್​ ಆಪಾದಿಸಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಆರೋಪಗಳನ್ನು ನಿರಾಕರಿಸಿದ್ದು, ತೇಜಸ್ವಿನ ಸಾವಿಗೆ ಶುಲ್ಕ ಬಾಕಿ ಉಳಿದಿರುವುದೇ ಕಾರಣವಲ್ಲ ಎಂದಿದೆ.
ಇದನ್ನೂ ಓದಿರಿ:ಇದಪ್ಪಾ ಅದೃಷ್ಟ! ಫೇಸ್​ಬುಕ್​ ಫ್ರೆಂಡ್ ಭೇಟಿಗೆ ಕೇರಳಕ್ಕೆ ಹೋದ ಮಂಡ್ಯ ಯುವಕ ರಾತ್ರೋರಾತ್ರಿ ಕೋಟ್ಯಧಿಪತಿ
ಇದೇ ವೇಳೆ ಟಿಡಿಪಿ (ತೆಲುಗು ದೇಶಂ ಪಾರ್ಟಿ) ಮುಖ್ಯಸ್ಥ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಸರ್ಕಾರ ಶುಲ್ಕ ಮರುಪಾವತಿ ವಿಳಂಬವೇ ಯುವತಿ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ತೇಜಸ್ವಿನಿ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.(ಏಜೆನ್ಸೀಸ್​)
ఒంగోలులో బీటెక్ చదువుతున్న విద్యార్థిని తేజస్విని కళాశాల ఫీజు కట్టలేక ఆత్మహత్య చేసుకున్నదన్న వార్త మనసును కలచివేసింది. అత్యంత దురదృష్టకరమైన విషయం ఇది. తల్లిదండ్రులకు చదివించే స్తొమత లేదన్నప్పుడు ప్రభుత్వం ఏం చేస్తోంది? ఫీజు రీఇంబర్స్ మెంటు ఏమైంది?(1/2)pic.twitter.com/Lyo1FSY4uM
— N Chandrababu Naidu (@ncbn)February 6, 2021

ವಿಧಾನಪರಿಷತ್​ಗೆ ಹೊಸ ಚೇರ್ಮನ್ ಬಸವರಾಜ ಹೊರಟ್ಟಿ! ಕಾಂಗ್ರೆಸ್​ ಫುಲ್​ ಸೈಲೆಂಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + seventeen =
Remember me
