ನವದೆಹಲಿ:ಇತ್ತೀಚೆಗಷ್ಟೇ ಖರೀದಿಸಿ, ವಾಯುಪಡೆಯ ಸೇವೆಗೆ ಸೇರ್ಪಡೆಗೊಳಿಸಲಾಗಿದ್ದ ಯುದ್ಧಹೆಲಿಕಾಪ್ಟರ್​ ಒಂದು ಪಂಜಾಬ್​ನ ಹೋಷಿಯಾರ್​ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್​ನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿರುವುದಾಗಿ ವಾಯುಪಡೆ ಮೂಲಗಳು ತಿಳಿಸಿವೆ.
ಅಮೆರಿಕದಿಂದ ಖರೀದಿಸಲಾಗಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಚ್ಚಹೊಸ ಅಪಾಚೆ ಯುದ್ಧಹೆಲಿಕಾಪ್ಟರ್​ನ ತುರ್ತು ಭೂಸ್ಪರ್ಶ ಹಲವು ಆತಂಕ ಮತ್ತು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ವಾಯುಪಡೆ, ಏಪ್ರಿಲ್​ 17ರಂದು ಅಪಾಚೆ ಯುದ್ಧಹೆಲಿಕಾಪ್ಟರ್​ ಪಠಾಣ್​ಕೋಟ್​ ವಾಯುನೆಲೆಯಿಂದ ಹಾರಾಟ ಆರಂಭಿಸಿತ್ತು. ಒಂದು ಗಂಟೆಗೂ ಹೆಚ್ಚು ಅವಧಿಯ ಹಾರಾಟದ ಬಳಿಕ ಕೆಲವೊಂದು ತಾಂತ್ರಿಕ ದೋಷ ಕಂಡುಬಂದಿತು. ಹಾಗಾಗಿ, ಮುನ್ನೆಚ್ಚರಿಕೆಯ ಕ್ರಮವಾಗಿ ಪಂಜಾಬ್​ನ ಹೋಷಿಯಾರ್​ಪುರದ ಇಂಡೋರಾ ಎಂಬ ಗ್ರಾಮದಲ್ಲಿ ಅದನ್ನು ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಈ ವಿಷಯದಲ್ಲಿ ಹೆಲಿಕಾಪ್ಟರ್​ನ ಕ್ಯಾಪ್ಟನ್​ ಹೆಚ್ಚು ಜಾಣತನ ತೋರಿದ್ದಾರೆ. ಹೆಲಿಕಾಪ್ಟರ್​ನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಆಸ್ತಿಪಾಸ್ತಿಗೆ ಯಾವುದೇ ನಷ್ಟವಾಗಿಲ್ಲ. ತಾಂತ್ರಿಕ ದೋಷವನ್ನು ಸರಿಪಡಿಸಿದ ಬಳಿಕ ಅದನ್ನು ವಾಯುನೆಲೆಗೆ ಮರಳಿ ಕೊಂಡೊಯ್ಯಲಾಗುವುದು ಎಂದು ಹೇಳಿದೆ.
ಭಾರತ 22 ಅಪಾಚೆ ಹೆಲಿಕಾಪ್ಟರ್​ಗಳ ಖರೀದಿಗೆ ಅಮೆರಿಕದೊಂದಿಗೆ 2015ರಲ್ಲಿ 1.1 ಶತಕೋಟಿ ಡಾಲರ್​ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಈ ಹೆಲಿಕಾಪ್ಟರ್​ಗಳ ಎರಡು ಪ್ರತ್ಯೇಕ ಸ್ಕ್ವಾಡ್ರನ್​ಗಳನ್ನು ರಚಿಸಿರುವ ವಾಯಪಡೆ ಒಂದು ಸ್ಕ್ವಾಡ್ರನ್​ ಅನ್ನು ಪಠಾಣ್​ಕೋಟ್​ ವಾಯುನೆಲೆಯಲ್ಲೂ ಮತ್ತೊಂದನ್ನು ಜೋಹ್ರಾಟ್​ ವಾಯುನೆಲೆಯಲ್ಲೂ ನೆಲೆಗೊಳಿಸಲು ನಿರ್ಧರಿಸಿದೆ.
ಈ ಹೆಲಿಕಾಪ್ಟರ್​ಗಳಿಗೆ ಹೆಲ್​ಫೈರ್​ ಕ್ಷಿಪಣಿಗಳನ್ನು ಅಳವಡಿಸಬಹುದಾಗಿದ್ದು, ಒಂದು ನಿಮಿಷದಲ್ಲಿ 128 ಟಾರ್ಗೆಟ್​ಗಳನ್ನು ಗುರುತಿಸಿ, ಅವುಗಳಲ್ಲಿ ಹೆಚ್ಚು ಅಪಾಯಕಾರಿಯಾದ ಟಾರ್ಗೆಟ್​ ಅನ್ನು ಗಮನಿಸಿ, ಕ್ಷಿಪಣಿಗಳನ್ನು ಸಿಡಿಸಬಹುದಾಗಿದೆ.
ಯುಪಿಎಸ್​ಸಿ ನಾಗರಿಕ ಸೇವೆ ಪ್ರಿಲಿಮ್ಸ್​ ಪರೀಕ್ಷೆ ದಿನಾಂಕ ಪರಿಷ್ಕರಣೆ ಆಗಿಲ್ಲ, ಮೇ 31ಕ್ಕೆ ನಡೆಯಲಿವೆ ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − three =
Remember me
