ನವದೆಹಲಿ : ಭಾರತದಲ್ಲಿ 269 ವೈದ್ಯರು ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸಾವಪ್ಪಿದ್ದಾರೆ ಎಂದು ನಿನ್ನೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​(ಐಎಂಎ) ಹೇಳಿತ್ತು. ಅತ್ಯಧಿಕ ಸಂಖ್ಯೆಯಲ್ಲಿ, 78 ವೈದ್ಯರ ಸಾವು ಸಂಭವಿಸಿರುವುದು ಬಿಹಾರದಲ್ಲಾದರೆ, ಉತ್ತರ ಪ್ರದೇಶದಲ್ಲಿ 37 ಮತ್ತು ದೆಹಲಿಯಲ್ಲಿ 29 ವೈದ್ಯರು ಕರೊನಾಗೆ ಬಲಿಯಾಗಿದ್ದಾರೆ ಎಂದು ಐಎಂಎ ತಿಳಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಅಪೋಲೋ ಹಾಸ್ಪಿಟಲ್ಸ್​ ಗುಂಪಿನ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕಿ (ಜೆಎಂಡಿ) ಡಾ. ಸಂಗೀತಾ ರೆಡ್ಡಿ ಅವರು, ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಕರೊನಾ ಲಸಿಕೆ ಪಡೆಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.
This is indeed very sad & while I mourn the loss I would like to share IMP data -Out of 3600 Dr Nurses &#healthcareworkers#vaccinatedwith 2 doses@HospitalsApolloDelhi ONLY 2.6% got infected with mild#COVID19& NO death! I appeal 🙏#Vaccination&#Safetyprotocols save liveshttps://t.co/VTQB9PFa2D
— Dr. Sangita Reddy (@drsangitareddy)May 18, 2021

ದೆಹಲಿಯ ಅಪೋಲೋ ಆಸ್ಪತ್ರೆಗಳಲ್ಲಿ ಎರಡೂ ಡೋಸ್​ ಕರೊನಾ ಲಸಿಕೆ ಪಡೆದ 3,600 ವೈದ್ಯರು, ನರ್ಸ್​ಗಳು ಮತ್ತು ಆರೋಗ್ಯ ಸೇವಾಕರ್ತರಲ್ಲಿ ಕೇವಲ ಶೇ 2.6 ರಷ್ಟು ಮಂದಿಗೆ ಕರೊನಾ ಸೋಂಕು ತಗುಲಿತು. ಅವರೆಲ್ಲರಿಗೂ ಮೆದು ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಒಂದೂ ಸಾವು ಸಂಭವಿಸಿಲ್ಲ ಎಂದು ಡಾ. ರೆಡ್ಡಿ ತಿಳಿಸಿದ್ದಾರೆ. ಲಸಿಕೆ ಪಡೆಯುವುದು ಮತ್ತು ಸುರಕ್ಷತೆಯ ಪ್ರೊಟೋಕಾಲ್​ಗಳನ್ನು ಪಾಲಿಸುವುದು ಪ್ರಾಣಗಳನ್ನು ಉಳಿಸುತ್ತದೆ ಎಂದಿದ್ದಾರೆ.(ಏಜೆನ್ಸೀಸ್)
VIDEO | ಸಂಗೀತ ನುಡಿಸುವ ಘೇಂಡಾಮೃಗ ನೋಡಿದ್ದೀರಾ ? ಇದೋ ಇಲ್ಲಿದೆ…

ಚಿಂಕಾರ ಜಿಂಕೆ ಬೇಟೆಯಾಡುತ್ತಿದ್ದ ಇಬ್ಬರ ಬಂಧನ

ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 12 =
Remember me
