ತ್ರಿಸ್ಸೂರ್​:ಸೆಕ್ಸ್​ ಚಾಟ್​ ಆ್ಯಪ್​ನಲ್ಲಿ ಪತ್ನಿಯ ಬೆತ್ತಲೆ ಫೋಟೋಗಳನ್ನು ಶೇರ್​​ ಮಾಡುತ್ತಿದ್ದ ದುಷ್ಟ ಪತಿಯನ್ನು ಕೇರಳದ ಎರುಮಪೆಟ್ಟಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನ್ನು ಸೆಬಿ (33) ಎಂದು ಗುರುತಿಸಲಾಗಿದೆ. ಈತ ಮಂದಂಪರಂಬು ಮೂಲದವನು. ಎರುಮಪೆಟ್ಟಿ ಠಾಣೆಯ ಸಬ್​ ಇನ್ಸ್​ಪೆಕ್ಟರ್ ಟಿ.ಸಿ. ಅನುರಾಜ್​ ಎಂಬುವರು ಆರೋಪಿ ಸೆಬಿಯನ್ನು ಬಂಧಿಸಿದ್ದಾರೆ. ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸಿರುವ ಆರೋಪ ಸಹ ಸೆಬಿಯ ಮೇಲಿದೆ.
ಆರೋಪಿ ಸೆಬಿ ಎರಡೂವರೆ ವರ್ಷಗಳ ಹಿಂದೆ ಪಲಕ್ಕಾಡ್ ಮೂಲದ ಮಹಿಳೆಯನ್ನು ವಿವಾಹವಾಗಿದ್ದರು. ಆರ್ಥಿಕವಾಗಿ ಸ್ಥಿತಿವಂತರಲ್ಲದ ಪತ್ನಿಯ ಕುಟುಂಬದಿಂದ ಹತ್ತು ಸವರನ್​ ಚಿನ್ನವನ್ನು ವರದಕ್ಷಿಣೆಯಾಗಿ ಸ್ವೀಕರಿಸಿದ್ದರು. ಇದಾದ ಬಳಿಕ ಹೆಚ್ಚಿನ ವರದಕ್ಷಿಣೆಗಾಗಿ ಸೆಬಿ ಮತ್ತು ಆತನ ಕುಟುಂಬದವರು ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದರು. ಬಲವಂತವಾಗಿ ಮದ್ಯ ಕುಡಿಸಿ, ಪತ್ನಿಯನ್ನು ಸೆಬಿ ಹಿಂಸಿಸುತ್ತಿದ್ದ. ಈ ಬಗ್ಗೆ ಮನೆಯವರಿಗೆ ಹೇಳಿ ಯಾಕೆ ಅವರನ್ನು ಚಿಂತೆಗೀಡುಮಾಡಬೇಕು ಅಂತ ತಾನೇ ನೋವು ಅನುಭವಿಸುತ್ತಿದ್ದಳು. ಇದರ ನಡುವೆ ಆಕೆಯ ಬೆತ್ತಲೆ ಫೋಟೋಗಳನ್ನು ಸೆರೆಹಿಡಿದು ಸ್ಲೀಜಿ ಆಪ್‌ನಲ್ಲಿ ಆರೋಪಿ ಪತಿ ಶೇರ್ ಮಾಡಿದ್ದಾನೆ.
ಇದನ್ನೂ ಓದಿ:ಅಮಾಯಕ ಯುವತಿಯರಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಪೂಜೆ ಮಾಡಿದ್ದಲ್ಲದೆ ಅಸಭ್ಯ ವರ್ತನೆ: 12 ಮಂದಿ ಬಂಧನ
ಪೊಲೀಸರು ಆರೋಪಿ ಸೆಬಿ ಫೋನ್​ ಅನ್ನು ಪರಿಶೀಲಿಸಿದಾಗ ಪತ್ನಿಯರ ನಗ್ನ ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವ ಆ್ಯಪ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಎಂದು ಕಂಡುಬಂದಿದೆ. ಪತ್ನಿಯರನ್ನು ಪರಿಚಯಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಈ ಅಪ್ಲಿಕೇಶನ್ ಅನ್ನು ಬಳಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುನ್ನಂಕುಲಂ ಸಹಾಯಕ ಆಯುಕ್ತ ಟಿ.ಎಸ್. ಶಿನೋಜ್ ನೇತೃತ್ವದ ತಂಡ ತನಿಖೆ ಆರಂಭಿಸಿದೆ.(ಏಜೆನ್ಸೀಸ್​)
ಮುಸ್ಲಿಂ ಸಮುದಾಯಕ್ಕೆ ಡಿಸಿಎಂ, ಗೃಹಖಾತೆ ನೀಡಬೇಕು; ಕರ್ನಾಟಕ ಮುಸ್ಲಿಂ ಸಂಘದಿಂದ ಒತ್ತಾಯ

VIDEO|ರಾಘವ್ ಛಡ್ಡಾ ಜತೆ ಲಿಪ್ ಲಾಕ್ ಮಾಡಿದ ಪರಿಣೀತಿ ಚೋಪ್ರಾ

ವಾಟ್ಸ್​ಆ್ಯಪ್​ನಲ್ಲಿ ಇನ್ನು ನಿಮ್ಮ ಖಾಸಗಿ ಚಾಟಿಂಗ್ ಸುರಕ್ಷಿತ! ಹೇಗೆ ಬಳಸೋದು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four + 3 =
Remember me
