ನವದೆಹಲಿ: ಗುಜರಾತ್​ ಗಲಭೆ ಸಂದರ್ಭ ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬಸ್ಥರ ಕೊಲೆ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಬಿಲ್ಕಿಸ್​ ಬಾನು ಬುಧವಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ವಿಚಾರಣೆಗೆ ಎತ್ತಿಕೊಳ್ಳುವ ಬಗ್ಗೆ ಕೋರ್ಟ್​ ಪರಿಶೀಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್​ ಅರ್ಜಿದಾರರಿಗೆ ತಿಳಿಸಿದ್ದಾರೆ.ಹಳೆಯ ನೀತಿಯೊಂದರ ಆಧಾರದಲ್ಲಿ ಗುಜರಾತ್​ ಸರ್ಕಾರ ಈ ವರ್ಷ ಆಗಸ್ಟ್​ 15ರಂದು ತಪ್ಪಿತಸ್ಥರನ್ನು ಬಿಡುಗಡೆ ಮಾಡಿತ್ತು. ಇದು ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಡುಗಡೆಯಾದವರನ್ನು ಸಂಸ್ಥೆಯೊಂದು ಹೂಹಾರ ಹಾಕಿ ಸ್ವಾಗತಿಸಿ ಸಿಹಿ ವಿತರಿಸಿ ಸಂಭ್ರಮಿಸಿದ ದೃಶ್ಯಗಳು ವಿವಾದ ಸೃಷ್ಟಿಸಿತ್ತು.
ಕೇಂದ್ರ ಸರ್ಕಾರ ತ್ವರಿತವಾಗಿ ನೀಡಿದ್ದ ಅನುಮೋದನೆ ಹಾಗೂ ಅಪರಾಧಿಗಳ “ಉತ್ತಮ ವರ್ತನೆ’ ಆಧಾರದಲ್ಲಿ ಅವರನ್ನು ಬಿಡುಗಡೆ ಮಾಡಿದ್ದನ್ನು ಗುಜರಾತ್​ ಸರ್ಕಾರ ಸಮರ್ಥಿಸಿ ಕೊಂಡಿದೆ. 1992ರ ಕ್ಷಮಾದಾನ ನೀತಿ ಅನ್ವಯ, ಒಬ್ಬ ಅರ್ಜಿದಾರ ಶಿತನನ್ನು ಬಿಡುಗಡೆ ಮಾಡುವುದನ್ನು ಪರಿಶೀಲಿಸಬಹುದೆಂದು ಸುಪ್ರೀಂ ಕೋರ್ಟ್​ ತೀರ್ಪು ನೀಡಿತ್ತು. ಆದರೆ ರಾಜ್ಯ ಸರ್ಕಾರ ಜೀವಾವಧಿ ಶಿೆ ಅನುಭವಿಸುತ್ತಿದ್ದ ಎಲ್ಲ 11 ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು.
ಬಿಲ್ಕಿಸ್​ ವಾದ ಏನು?ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿದ್ದು ಶಿತರ ಬಿಡುಗಡೆ ವಿಚಾರದಲ್ಲಿ ಅಲ್ಲಿನ ಸರ್ಕಾರ ನಿರ್ಧಾರ ಕೈಗೊಳ್ಳಬೇಕೇ ಹೊರತು ಗುಜರಾತ್​ ರಾಜ್ಯ ಸರ್ಕಾರವಲ್ಲ ಎಂದು ಅರ್ಜಿಯಲ್ಲಿ ಬಿಲ್ಕಿಸ್​ ಬಾನು ಹೇಳಿದ್ದಾರೆ. ಸಾಮೂಹಿಕ ಅತ್ಯಾಚಾರ ನಡೆದಾಗ ಬಿಲ್ಕಿಸ್​ಗೆ 21 ವರ್ಷ ವಾಗಿತ್ತು. ಅವರ ಮೂರು ವರ್ಷದ ಪುತ್ರಿ ಸಹಿತ ಕುಟುಂಬದ 9 ಜನರನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
