ನವದೆಹಲಿ:ಅನಾರೋಗ್ಯದ ಲಕ್ಷಣಗಳಿರುವವರು ರೈಲು ಸಂಚಾರ ಮಾಡಬೇಡಿ ಎಂದು ರೈಲ್ವೆ ಇಲಾಖೆ ಆದೇಶಿಸಿದೆ.ಲಾಕ್​ಡೌನ್​​​ನಿಂದಾಗಿ ದೇಶದ ವಿವಿಧೆಡೆ ಸಿಲುಕಿರುವ ವಲಸಿಗರನ್ನು ಮರಳಿ ತಮ್ಮ ಊರುಗಳಿಗೆ ಕಳುಹಿಸಲು ಭಾರತೀಯ ರೈಲ್ವೆ ದೇಶಾದ್ಯಂತ ಪ್ರತಿದಿನ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಆದರೆ ರೈಲು ಪ್ರಯಾಣ ಮಾಡುತ್ತಿರುವ ಕೆಲವರಲ್ಲಿ ಕೋವಿಡ್- 19 ಸಾಂಕ್ರಾಮಿಕ ರೋಗದ ಅವಧಿಯಲ್ಲಿಯೇ ಅನಾರೋಗ್ಯದ ಲಕ್ಷಣಗಳು ಕಂಡುಬಂದಿದ್ದರೂ ತಮ್ಮ ಊರು ತಲುಪಬೇಕೆಂಬ ಆತುರದಲ್ಲಿ ರೈಲು ಸಂಚಾರ ಮಾಡುತ್ತಿದ್ದಾರೆ. ಮೊದಲೇ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಿದ್ದಾಗ್ಯೂ ಪ್ರಯಾಣ ಮುಂದುವರಿಸಿದಾಗ ದುರದೃಷ್ಟವಶಾತ್ ಕೆಲವು ಸಾವು ಸಂಭವಿಸಿದ ಘಟನೆಗಳೂ ನಡೆದಿವೆ.
ಇದನ್ನೂ ಓದಿ :ವಲಸೆ ಕಾರ್ವಿುಕರ ಹೊಣೆ ರಾಜ್ಯಗಳದ್ದು: ಸುಪ್ರೀಂಕೋರ್ಟ್ ಮಹತ್ವದ ಆದೇಶ
ದುರ್ಬಲ ಆರೋಗ್ಯ ಹೊಂದಿದವರನ್ನು ಕೋವಿಡ್- 19 ನಿಂದ ಪಾರು ಮಾಡುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಒಂದು ಆದೇಶ ಹೊರಡಿಸಿದೆ. ಸಹ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು (ಉದಾ: ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಕ್ಯಾನ್ಸರ್, ರೋಗನಿರೋಧಕ ಶಕ್ತಿಯ ಕೊರತೆಯ ಪರಿಸ್ಥಿತಿ ಇರುವವರು), ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತೀರ ಅಗತ್ಯ ಸಂದರ್ಭ ಹೊರತುಪಡಿಸಿ ರೈಲ್ವೆ ಪ್ರಯಾಣ ಮಾಡಬಾರದು ಎಂದು ರೈಲ್ವೆ ಸಚಿವಾಲಯ ಮನವಿ ಮಾಡಿದೆ.ದೇಶದ ನಾಗರಿಕರಿಗೆ ರೈಲ್ವೆ ಸೇವೆ ದೊರೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಪರಿವಾರ್ 24*7 ಕಾರ್ಯನಿರ್ವಹಿಸುತ್ತಿದೆ. ಆದರೆ ಪ್ರಯಾಣಿಕರ ಸುರಕ್ಷತೆ ನಮ್ಮ ಅತಿದೊಡ್ಡ ಕಾಳಜಿಯಾಗಿದೆ, ಆದ್ದರಿಂದ ಈ ವಿಷಯದಲ್ಲಿ ಇಲಾಖೆ ಎಲ್ಲ ನಾಗರಿಕರ ಸಹಕಾರ ಕೋರುತ್ತಿದ್ದು, ಯಾವುದೇ ತೊಂದರೆ ಅಥವಾ ತುರ್ತು ಸಂದರ್ಭದಲ್ಲಿ ರೈಲ್ವೆ ಪರಿವಾರ್​ ಅನ್ನು ಸಂಪರ್ಕಿಸಬೇಕೆಂದು (ಸಹಾಯವಾಣಿ ಸಂಖ್ಯೆ- 139 ಮತ್ತು 138) ಭಾರತೀಯ ರೈಲ್ವೆ ತಿಳಿಸಿದೆ.
ಕೋವಿಡ್-19 ಆರೈಕೆ ಕೇಂದ್ರಗಳಿಗೆ ವೈದ್ಯರನ್ನು ನಿಯೋಜಿಸಲಿದೆ ಭಾರತೀಯ ರೈಲ್ವೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − eight =
Remember me
