ಲಖನೌ:ಆಗ್ರಾದಲ್ಲಿರುವ ಪ್ರಖ್ಯಾತ ತಾಜ್​ಮಹಲ್​ನ 20 ಕೊಠಡಿಗಳ ಬಾಗಿಲು ತೆರೆದು ಅಲ್ಲಿ ಹಿಂದು ದೇವರ ಪ್ರತಿಮೆಗಳಿವೆ ಎಂಬುದನ್ನು ದೃಢೀಕರಿಸುವುದಕ್ಕೆ ಪುರಾತತ್ತ$$$್ವ ಸರ್ವೇಕ್ಷಣಾಲಯ(ಎಎಸ್​ಐ)ಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅಲಹಾಬಾದ್​ ಹೈಕೋರ್ಟ್​ನ ಲಖನೌ ಪೀಠದಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಬಿಜೆಪಿಯ ಅಯೋಧ್ಯೆ ಜಿಲ್ಲೆಯ ಮಾಧ್ಯಮ ಉಸ್ತುವಾರಿ ಡಾ. ರಜನೀಶ್​ ಸಿಂಗ್​ ಅರ್ಜಿ ಸಲ್ಲಿಸಿದವರು. ಇವರ ಪರವಾಗಿ ರುದ್ರ ವಿಕ್ರಮ ಸಿಂಗ್​ ವಕಾಲತ್ತು ನಿರ್ವಹಿಸುತ್ತಿದ್ದಾರೆ. ಈ ಅರ್ಜಿ ಇನ್ನೂ ವಿಚಾರಣೆಗೆ ಬಂದಿಲ್ಲ. ತಾಜ್​ಮಹಲ್​ ಕುರಿತ ವಿವಾದಗಳು ಹಳೆಯವು. ತಾಜ್​ಮಹಲ್​ನಲ್ಲಿ 20 ಕೊಠಡಿಗಳಿಗೆ ಬೀಗ ಹಾಕಿ ಇರಿಸಲಾಗಿದೆ. ಅದಕ್ಕೆ ಯಾರಿಗೂ ಪ್ರವೇಶ ಇಲ್ಲ. ಅಲ್ಲಿ ಹಿಂದು ದೇವರ ವಿಗ್ರಹಗಳು, ಹಳೆಯ ಶಾಸನಗಳು ಇವೆ ಎಂದು ಹೇಳಲಾಗುತ್ತಿದೆ. ಇದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಇದಕ್ಕಾಗಿ ಎಎಸ್​ಐಗೆ ನಿರ್ದೇಶನ ನೀಡಬೇಕು ಎಂಬುದು ಡಾ.ಸಿಂಗ್​ ಅವರ ಆಗ್ರಹ.
ಅನುಮಾನ ಹೆಚ್ಚಿಸಿದ ಆರ್​ಟಿಐ ಮಾಹಿತಿ:ತಾಜ್​ಮಹಲ್​ನ 20 ಕೊಠಡಿಗಳಿಗೆ ಸಂಬಂಧಿಸಿ ಮಾಹಿತಿ ಕೋರಿ ಸಲ್ಲಿಸಿದ್ದ ಆರ್​ಟಿಐ ಅರ್ಜಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ತಾಜ್​ಮಹಲ್​ನ 20 ಕೊಠಡಿಗಳಿಗೆ ಬೀಗ ಹಾಕಲಾಗಿದೆ ಯಾಕೆ ಎಂದು ಕೇಳಲಾಗಿತ್ತು. ಇದಕ್ಕೆ ಕೇಂದ್ರ ಸಂಸತಿ ಸಚಿವಾಲಯವು ದೆಹಲಿಯ ಸೆಂಟ್ರಲ್​ ಇನ್​ಾಮೇರ್ಷನ್​ ಕಮಿಷನ್​ಗೆ ನೀಡಿದ ಮಾಹಿತಿ ಪ್ರಕಾರ, ಸುರಕ್ಷತೆ ದೃಷ್ಟಿಯಿಂದ ಕೊಠಡಿಗಳಿಗೆ ಬೀಗ ಹಾಕಲಾಗಿದೆ ಎಂದಷ್ಟೇ ಇದೆ. 2020ರಿಂದ ಆರ್​ಟಿಐ ಮೂಲಕ ಮಾಹಿತಿ ಹೊರತೆಗೆಯಲು ಪ್ರಯತ್ನಿಸುತ್ತಿದ್ದೇನೆ. ಸರ್ಕಾರದ ಮಾಹಿತಿ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಸಿಂಗ್​ ಹೇಳಿದ್ದಾರೆ. ಆರ್​ಟಿಐ ಮೂಲಕವೇ ಮತ್ತೆ ಅರ್ಜಿ ಸಲ್ಲಿಸಿ ಕೊಠಡಿಗಳ ಒಳಗೆ ಏನಿದೆ? ಅವುಗಳನ್ನು ಲಾಕ್​ ಮಾಡಿರುವುದು ಯಾಕೆ? ಎಂಬ ಪ್ರಶ್ನೆ ಕೇಳಿ ಮಾಹಿತಿ ಕೋರಲಾಗಿತ್ತು. ಆದರೆ, ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೈಕೋರ್ಟ್​ ಮೆಟ್ಟಿಲೇರಬೇಕಾಗಿ ಬಂದಿದೆ ಎಂದು ಸಿಂಗ್​ ಹೇಳಿದ್ದಾರೆ.
ವಿವಾದಗಳಿಗೆ ಇತಿಶ್ರೀ ಹೇಳಲು ಮನವಿಅನೇಕ ಕಥೆಗಳು, ಹೇಳಿಕೆಗಳು ತಾಜ್​ಮಹಲ್​ ಕುರಿತ ವಿವಾದಕ್ಕೆ ಇನ್ನಷ್ಟು ವ್ಯಾಜ್ಯ ಸುರಿಯುತ್ತವೆ. ಇವುಗಳಿಗೆ ತಡೆ ಹಾಕಬೇಕಾದರೆ, ಅಲ್ಲಿನ ಕೊಠಡಿಗಳ ಬೀಗ ತೆರೆದು ಪರಿಶೀಲನೆಗೆ ಒಳಪಡಿಸಬೇಕು. ಭಾರತದ ಪುರಾತತ್ತ$$$್ವ ಸರ್ವೇಕ್ಷಣಾಲಯ ಈ ಕೆಲಸ ಮಾಡಬೇಕು. ಇದಕ್ಕಾಗಿಯೇ ಕೋರ್ಟ್​ ಮೊರೆ ಹೋಗಲಾಗಿದೆ ಎಂದು ಡಾ.ಸಿಂಗ್​ ಹೇಳಿದ್ದಾರೆ.
ತೇಜೋ ಮಹಾಲಯತಾಜ್​ಮಹಲ್​ ಮೂಲದಲ್ಲಿ ಶಿವ ದೇವಾಲಯವೇ ಆಗಿತ್ತು ಎಂಬುದನ್ನು ಪ್ರತಿಪಾದಿಸುವುದಕ್ಕೆ 2015ರಲ್ಲಿ ಆರು ವಕೀಲರು ಪ್ರಕರಣ ದಾಖಲಿಸಿದ್ದರು. 2017ರಲ್ಲಿ ಬಿಜೆಪಿ ನಾಯಕ ವಿನಯ್​ ಕಟಿಯಾರ್​ ಇದನ್ನು ಮತ್ತೆ ಪ್ರತಿಪಾದಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರಲ್ಲಿ ತಾಜ್​ಮಹಲ್​ಗೆ ಭೇಟಿ ನೀಡುವಂತೆ ಮನವಿ ಮಾಡಿದ್ದರು. ಅಲ್ಲಿ ಹಿಂದು ದೇವಾಲಯದ ಚಿಹ್ನೆಗಳಿವೆ. ಅವುಗಳನ್ನು ಪರಿಶೀಲಿಸಬೇಕು ಎಂದು ಯೋಗಿ ಅವರನ್ನು ಕೇಳಿಕೊಂಡಿದ್ದರು. ಕರ್ನಾಟಕದ ಬಿಜೆಪಿ ನಾಯಕ ಅನಂತ ಕುಮಾರ್​ ಹೆಗಡೆ ಕೂಡ 2019ರ ಜನವರಿಯಲ್ಲಿ, ತಾಜ್​ಮಹಲ್​ ಕಟ್ಟಿಸಿದ್ದು ಷಹಜಹಾನ್​ ಅಲ್ಲ. ರಾಜಾ ಜಯಸಿಂಹನಿಂದ ಷಹಜಹಾನ್​ ವಶಪಡಿಸಿಕೊಂಡದ್ದು ಎಂದು ಹೇಳಿದ್ದರು.
ಜ್ಞಾನವಾಪಿ ಮಸೀದಿ ಸಮೀಪ ಸ್ವಸ್ತಿಕಜ್ಞಾನವಾಪಿ ಮಸೀದಿಯ ಸಮೀೆ ಕಾರ್ಯಕ್ಕೆ ಶನಿವಾರ ತಡೆ ನೀಡಲಾಗಿದೆ. ಸಮೀೆ ನಡೆಸುತ್ತಿದ್ದ ವೇಳೆ ಮಸೀದಿ ಸಮೀಪವೇ ಪುರಾತನವಾದ ಎರಡು ಸ್ವಸ್ತಿಕಗಳು ಪತ್ತೆಯಾಗಿ ದ್ದವು ಎಂದು ಸಮೀೆಯ ವಿಡಿಯೋ ಚಿತ್ರೀಕರಿಸುತ್ತಿದ್ದವರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಜ್ಞಾನವಾಪಿ ಮಸೀದಿಯು ಜ್ಞಾನವಾಪಿ ಶೃಂಗಾರ ಗೌರಿ ಸಂಕೀರ್ಣದಲ್ಲೇ ಇದ್ದು, ಇದರ ಆವರಣದಲ್ಲೇ ಸ್ವಸ್ತಿಕಗಳು ಪತ್ತೆಯಾಗಿವೆ. ಮುಸ್ಲಿಮರು ಪ್ರತಿಭಟನೆ ನಡೆಸಿದ್ದರಿಂದಾಗಿ ವಕೀಲರ ತಂಡಕ್ಕೆ ಮಸೀದಿ ಒಳಗೆ ಪ್ರವೇಶಿಸುವುದು ಸಾಧ್ಯವಾಗಿಲ್ಲ. ದೆಹಲಿ ಮೂಲದ ರಾಖಿ ಸಿಂಗ್​, ಲಕ್ಷಿ$್ಮ ದೇವಿ, ಸೀತಾ ಸಾಹು ಮತ್ತು ಇತರೆ ಮಹಿಳೆಯರು ಜ್ಞಾನವಾಪಿ ಮಸೀದಿಯ ಹೊರ ಭಾಗದ ಗೋಡೆಯಲ್ಲಿರುವ ದೇವರ ಪೂಜೆಗೆ ಅವಕಾಶ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಾರಾಣಸಿ ಜಿಲ್ಲಾ ಕೋರ್ಟ್​ ಆದೇಶ ಪ್ರಕಾರ ಸಮೀೆ ನಡೆಸಲಾಗುತ್ತಿದೆ.
ಕೇಸ್​ ಹಿಂಪಡೆದ ವಿವಿಎಸ್​ಎಸ್​ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ಮಂದಿರ ಕೇಸ್​ ಸಂಬಂಧಿಸಿ ನಿತ್ಯ ದೇವರ ದರ್ಶನಕ್ಕೆ ಅವಕಾಶ ಕೋರಿ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿರುವುದಾಗಿ ವಿಶ್ವ ವೇದಿಕ್​ ಸನಾತನ್​ ಸಂ (ವಿವಿಎಸ್​ಎಸ್​) ಭಾನುವಾರ ಘೋಷಿಸಿದೆ. ಸಂದ ಮುಖ್ಯಸ್ಥ ಜಿತೇಂದ್ರ ಸಿಂಗ್​ ಬೈಸೆನ್​ ಈ ವಿಚಾರ ಪ್ರಸ್ತಾಪಿಸಿದ್ದು, ತನ್ನ ಸಂಬಂಧಿ ರಾಖಿ ಸಿಂಗ್​ ಕೇಸ್​ನಿಂದ ಹಿಂದೆ ಸರಿಯಲಿದ್ದಾರೆ ಎಂದಷ್ಟೇ ತಿಳಿಸಿದ್ದಾರೆ. ಯಾಕೆ ಏನು ಎಂಬಿತ್ಯಾದಿ ವಿವರಗಳನ್ನು ನೀಡಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
