ಉತ್ತರ ಪ್ರದೇಶ:ಮದುವೆಯಾಗಿ 22 ವರ್ಷ ಕಳೆದರೂ ಒಂದು ಬಾರಿಯ ಹೆಂಡತಿಯ ತವರು ಮನೆಯಲ್ಲಿ ನಡೆಯುವ ಸಂಭ್ರಮದ ಹೋಳಿ ಹಬ್ಬಕ್ಕೆ ಹೋಗಲು ಸಾಧ್ಯವಾಗಿಲ್ಲ. ಈ ಬಾರಿ ದಂಪತಿಗಳಾಗಿ ತವರು ಮನೆಗೆ ಹೋಗಬೇಕೆಂದು ಪತ್ನಿ ಬಯಸಿದ್ದಾಳೆ. ಹೀಗಾಗಿ ನನಗೆ 10 ದಿನ ರಜೆ ನೀಡಬೇಕೆಂದು ಇನ್ಸ್​ಪೆಕ್ಟರ್ ಒಬ್ಬರು ಎಸ್​ಪಿಗೆ ಪತ್ರ ಬರೆದಿದ್ದಾರೆ. ಇನ್ಸ್ ಪೆಕ್ಟರ್ ಮನವಿಗೆ ಸ್ಪಂದಿಸಿರುವ ಎಸ್​ಪಿ 10 ದಿನ ಸಾಧ್ಯವಿಲ್ಲ ಎಂದು ಹೇಳಿ 5 ದಿನ ರಜೆ ನೀಡಿದ್ದಾರೆ.
ಇದೀಗ ಇನ್ಸ್​ಪೆಕ್ಟರ್ ರಜೆ ಕೋರಿ ಎಸ್​ಪಿಗೆ ನೀಡಿರುವ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ನಡೆದಿರುವ ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿರುವ ಫತೇಘರ್‌ ಎಂಬಲ್ಲಿ. ಇಲ್ಲಿನ ಪೊಲೀಸ್ ಲೈನ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಅಶೋಕ್ ಕುಮಾರ್ ಹೋಳಿ ರಜೆ ನೀಡುವಂತೆ ಪತ್ರ ಬರೆದವರು. ಎಸ್​ಪಿ ಅಶೋಕ್ ಮೀನಾ ಅವರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯಲ್ಲಿ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್, ಮದುವೆಯಾಗಿ 22 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಒಂದು ಬಾರಿಯೂ ಹೆಂಡತಿಯೊಂದಿಗೆ ಹೋಳಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದರಿಂದ ಪತ್ನಿ ತುಂಬಾ ಕೋಪಗೊಂಡಿದ್ದು, ಈ ವರ್ಷ ಹೋಳಿ ಹಬ್ಬದಂದು ಪತ್ನಿ ತನ್ನ ತಾಯಿಯ ಮನೆಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದಾಳೆ. ಈ ಕಾರಣಕ್ಕಾಗಿ ಹೋಳಿ ರಜೆಯ ಅವಶ್ಯಕತೆಯಿದೆ. ದಯವಿಟ್ಟು 10 ದಿನಗಳ ರಜೆ ನೀಡಿ ಎಂದು ಬರೆದುಕೊಂಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
