ಬೆಂಗಳೂರು:ಯುವಜನರಿಗೆ ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡಲು ಉತ್ತಮ ಅವಕಾಶ ಒದಗಿಬಂದಿದೆ. ಸೇನೆಯಲ್ಲಿ ಜೂನಿಯರ್ ಕಮಿಶನ್ಡ್ ಅಧಿಕಾರಿ ಮತ್ತು ಕಮಿಶನ್ಡ್ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಕರ್ನಾಟಕ ವಾರ್ತಾ ಇಲಾಖೆ ವಿವರಗಳನ್ನು ಪ್ರಕಟಿಸಿದೆ.
ಹದಿನೇಳೂವರೆ ವರ್ಷದಿಂದ 23 ವರ್ಷ ವಯೋಮಾನದವರಿಗೆ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ –
1) 12ನೇ ತರಗತಿ ಅಥವಾ ವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಗ್ಲಿಷ್​ ವಿಷಯದ ಇಂಟರ್​ಮೀಡಿಯೇಟ್ ಪರೀಕ್ಷೆಯಲ್ಲಿ ಒಟ್ಟು ಶೇ.50 ಮತ್ತು ಪ್ರತಿ ವಿಷಯದಲ್ಲಿ ಶೇ.40 ಅಂಕ ಗಳಿಸಿ ಉತ್ತೀರ್ಣರಾಗಿರುವವರು ಸೋಲ್ಜರ್​ ಟೆಕ್​ ಎನ್​ ಎ(ಎಎಂಸಿ) ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ:‘ಅಪ್ಪು’ ಬದುಕಿದ ಪ್ರತಿ ವಸಂತಕ್ಕೂ ಒಂದೊಂದು ಗಿಡ ನೆಟ್ಟು ಶ್ರದ್ಧಾಂಜಲಿ
2) 12ನೇ ತರಗತಿ ಅಥವಾ ವಾಣಿಜ್ಯ ಅಥವಾ ವಿಜ್ಞಾನ ವಿಷಯದಲ್ಲಿ ಒಟ್ಟು ಶೇ.60 ಅಂಕ ಗಳಿಸಿ ಮತ್ತು ಪ್ರತಿ ವಿಷಯದಲ್ಲಿ ಶೇ.50 ಅಂಕ ಗಳಿಸಿ ಉತ್ತೀರ್ಣರಾಗಿರುವವರು ಸೋಲ್ಜರ್ ಕ್ಲರ್ಕ್​/ಸ್ಟೋರ್​ ಕೀಪರ್​ ಟೆಕ್ನಿಕಲ್​ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹತ್ತೊಂಭತ್ತರಿಂದ 25 ವರ್ಷ ವಯೋಮಾನದವರು – 12 ನೇ ತರಗತಿ ಅಥವಾ ಡಿ.ಫಾರ್ಮದಲ್ಲಿ ಶೇ.55 ಅಂಕದೊಂದಿಗೆ ಉತ್ತೀರ್ಣರಾಗಿದ್ದು ರಾಜ್ಯ ಫಾರ್ಮಸಿ ಕೌನ್ಸಿಲ್​ನಲ್ಲಿ ನೋಂದಣಿ ಪಡೆದಿದ್ದಲ್ಲಿ, ಅಥವಾ ಶೇ.50 ಅಂಕಗಳೊಂದಿಗೆ ಬಿ.ಫಾರ್ಮದಲ್ಲಿ ಉತ್ತೀರ್ಣರಾಗಿದ್ದಲ್ಲಿ ಸಿಪಾಯಿ ಫಾರ್ಮ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ಸೇನೆಗೆ ಸೇರ್ಪಡೆಯಾಗಲು ಇದೊಂದು ಉತ್ತಮ ಅವಕಾಶ. ಜೂನಿಯರ್ ಕಮಿಶನ್ಡ್ ಅಧಿಕಾರಿ, ಕಮಿಶನ್ಡ್ ಅಧಿಕಾರಿ ಸೇರಿದಂತೆ ವಿವಿಧ ಸೇನಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ದೇಶಸೇವೆಗೆ ಮುಂದಾಗಿ.#IndianArmy@CMofKarnataka@rajnathsingh@adgpipic.twitter.com/VsiGScvtJW
— DIPR Karnataka (@KarnatakaVarthe)October 30, 2021

ಹೆಚ್ಚಿನ ವಿವರಗಳಿಗೆ www.joinindianarmy.nic.in ಲಿಂಕ್​ಅನ್ನು ಕ್ಲಿಕ್ಕಿಸಿ.
ಮರಳಿ ಮನೆ ತಲುಪಿದ ಆರ್ಯನ್​ ಖಾನ್​; ಶಾರುಖ್​ ಅಭಿಮಾನಿಗಳ ಹರ್ಷೋತ್ಸವ

ಛೇ, ಇದೆಂಥಾ ಶಾಲೆ?! ಚೇಷ್ಟೆ ಮಾಡಿದ ವಿದ್ಯಾರ್ಥಿಯನ್ನು ನೇತಾಡಿಸಿ ಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 18 =
Remember me
