ನವದೆಹಲಿ:ನ್ಯಾಷನಲ್​ ಆಪ್ಟಿಟ್ಯೂಡ್​ ಟೆಸ್ಟ್​ ಇನ್​ ಆರ್ಕಿಟೆಕ್ಚರ್​ (ಎನ್​ಎಟಿಎ) ಪರೀಕ್ಷಾ ದಿನಾಂಕವನ್ನು ಈಗಾಗಲೇ ಮುಂದೂಡಿದೆ. ಜತೆಗೆ, ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದ್ದು, ಏಪ್ರಿಲ್​ 15ರವರೆಗೆ ಅವಕಾಶ ಕಲ್ಪಿಸಿದೆ.
ಈ ಮೊದಲು ಮಾರ್ಚ್​ 16 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಸದ್ಯ ಇನ್ನೂ ನಾಲ್ಕು ದಿನ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಇಮೇಜ್​ ಅಪ್​ಲೋಡ್​ ಹಾಗೂ ಶುಲ್ಕ ಪಾವತಿ ಮಾಡಲು ಏಪ್ರಿಲ್​ 19 ಕೊನೆಯ ದಿನವಾಗಿದೆ.
ಏಪ್ರಿಲ್ 22ರಂದು ದೃಢೀಕೃತ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದು. ಏಪ್ರಿಲ್​ 20ರಿಂದ 22ರವರೆಗೆ ಅರ್ಜಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಪರೀಕ್ಷೆ ಆಯೋಜಿಸುವ ಕೌನ್ಸಿಲ್​ ಆಫ್​ ಆರ್ಕಿಟೆಕ್ಚರ್​ (ಸಿಒಎ) ಸಂಸ್ಥೆ ಮಾಹಿತಿ ನೀಡಿದೆ.
ಪರೀಕ್ಷೆ ದಿನಾಂಕ ನಿಗದಿಯಾದ ಬಳಿಕ ಅದಕ್ಕೂ ಕೆಲ ದಿನಗಳ ಮುಂಚೆ ಪ್ರವೇಶಪತ್ರಗಳನ್ನು ಡೌನ್​ಲೋಡ್​ ಮಾಡಿಕೊಳ್ಳಲು ಸೂಚನೆ ನೀಡಲಾಗುತ್ತದೆ ಎಂದು ಸಿಒಎ ಹೇಳಿದೆ.
ವರ್ಷದಲ್ಲಿ ಎರಡು ಬಾರಿ ನಾಟಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೊದಲ ಆವೃತ್ತಿಯನ್ನು ಇದೇ ತಿಂಗಳ 19ರಂದು ನಡೆಸಲು ಉದ್ದೇಶಿಸಲಾಗಿತ್ತು. ಇನ್ನು ಎರಡನೇ ಆವೃತ್ತಿಯನ್ನು ಜೂನ್​ 14ರಂದು ನಡೆಸಲು ನಿಗದಿ ಮಾಡಲಾಗಿದೆ. ಮೊದಲ ಆವೃತ್ತಿ ವಿಳಂಬ ಕಾರಣದಿಂದ ಎರಡನೇ ಆವೃತ್ತಿ ಪರೀಕ್ಷೆ ಕೂಡ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.
ಸೂಪರ್​ ಸ್ಪ್ರೆಡರ್​ಗಳಿಗೆ ಧಾರ್ಮಿಕ ಸಭೆಯ ನಂಟು: ಮಲೇಷ್ಯಾಗೂ ಕಾಡಿದೆ ತಬ್ಲಿಘಿ ಜಮಾತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
