ನವದೆಹಲಿ:ದೇಶದಲ್ಲಿ ಜೂನ್​ ತಿಂಗಳಲ್ಲಿ ನೇಮಕಾತಿ ಪ್ರಮಾಣದಲ್ಲಿ ಕೋವಿಡ್​ ಪೂರ್ವದ ಮಟ್ಟಕ್ಕಿಂತ ಸುಮಾರು ಶೇಕಡ 42ರಷ್ಟು ಏರಿಕೆಯಾಗಿದೆ ಎಂದು ಲಿಂಕ್ಡ್​ಇನ್​ನ ಲೇಬರ್​ ಮಾರ್ಕೆಟ್​ ವರದಿ ಹೇಳಿದೆ. ಕೋವಿಡ್​ ಎರಡನೇ ಅಲೆಯ ತೀವ್ರತೆಯಿಂದಾಗಿ ಏಪ್ರಿಲ್​ನಲ್ಲಿ ಉದ್ಯೋಗ ಪ್ರಮಾಣದಲ್ಲಿ ತೀವ್ರ ಕುಸಿತವಾಗಿತ್ತು. ಮೇ ಅಂತ್ಯದಲ್ಲಿ ನೇಮಕಾತಿ ಪ್ರಮಾಣ ಶೇಕಡ 35 ಹಾಗೂ ಜೂನ್​ ಅಂತ್ಯದಲ್ಲಿ ಶೇಕಡ 42 ಚೇತರಿಕೆ ಕಂಡಿದೆ. ನೇಮಕಾತಿ ಮೇಲಿನ ತಾತ್ಕಾಲಿಕ ನಿರ್ಬಂಧವನ್ನು (ಪೆಂಟ್​ಅಪ್​ ಹೈರಿಂಗ್​) ತೆಗೆದು ಹಾಕಿದ್ದೇ ಈ ಏರಿಕೆಗೆ ಕಾರಣವಾಗಿರಬಹುದು ಎಂದು ವರದಿ ಅಭಿಪ್ರಾಯ ಪಟ್ಟಿದೆ. ಕರೊನಾ ಸಾಂಕ್ರಾಮಿಕತೆ ಕಾರಣ 2020ರಲ್ಲಿ ನೇಮಕಾತಿಯನ್ನ ಕಂಪನಿಗಳು ತಾತ್ಕಾಲಿಕವಾಗಿ ತಡೆ ಹಿಡಿದಿದ್ದವು.
12 ತಿಂಗಳ ಹಿಂದಿನ ಅವಧಿಗೆ ಹೋಲಿಸಿದರೆ ಉದ್ಯೋಗಕ್ಕಾಗಿ ಸ್ಪರ್ಧೆ ಕಡಿಮೆಯಾಗಿದೆ. ಆದರೆ ಉದ್ಯೋಗಾಕಾಂಗಳು ಅಜಿರ್ ಸಲ್ಲಿಸುವ ತೀವ್ರತೆ ಮಾತ್ರ ಕಡಿಮೆಯಾಗಿಲ್ಲ. 2020ರಲ್ಲಿ, ಜಾಗತಿಕ ಕರೊನಾ ಲಾಕ್​ಡೌನ್​ನ ಉತ್ತುಂಗದ ವೇಳೆ ಪ್ರತಿ ಹುದ್ದೆಗೆ ದುಪ್ಪಟ್ಟು ಅಜಿರ್ಗಳು ಬರುತ್ತಿದ್ದವು. ಕಳೆದ ವರ್ಷ ಶೇ. 1.2ರಷ್ಟು ಇತ್ತು. ಇದು ಮಾರುಕಟ್ಟೆಯಲ್ಲಿ ಉದ್ಯೋಗ ಲಭ್ಯತೆ ಪ್ರಮಾಣ ಹೆಚ್ಚಿರುವುದರ ಸೂಚನೆಯಾಗಿದೆ. ಅಲ್ಲದೆ ಕಾಮಿರ್ಕರು ಹೆಚ್ಚು ಸಕ್ರಿಯವಾಗಿ ಕೆಲಸವನ್ನು ಹುಡುಕುತ್ತಿದ್ದಾರೆ ಎಂದಾಗಿದೆ. ಇಂಥ ಸನ್ನಿವೇಶದಲ್ಲಿ ತಮ್ಮ ಉದ್ಯೋಗ ಕೌಶಲ ಹೆಚ್ಚಿಸಿಕೊಂಡ ವೃತ್ತಿಪರರಿಗೆ ಉತ್ತಮ ಅವಕಾಶಗಳು ಲಭಿಸುವ ಅವಕಾಶ ವ್ಯಾಪಕವಾಗಿದೆ ಎಂದು ವರದಿ ಹೇಳಿದೆ.
ಜನರೇಷನ್​ ಝಡ್​ಗೆ ಹೆಚ್ಚಿನ ಅವಕಾಶ2018 ಜನವರಿಯಿಂದ 2021 ಜೂನ್​ ನಡುವೆ ಕೆಲಸಕ್ಕೆ ಸೇರಿದವರಲ್ಲಿ ಜನರೇಷನ್​ ಝಡ್​ (1990ರ ದಶಕದ ಮಧ್ಯಭಾಗ&2010 ಜನ್ಮ ವರ್ಷವಾಗಿರುವವರು) ಪಾಲು 4.2ರಷ್ಟು ಹೆಚ್ಚಿದೆ ಎಂಬುದರತ್ತ ವರದಿ ಗಮನ ಸೆಳೆದಿದೆ. ಮೂಲಭೂತ ಅಥವಾ ಅನ್ವಯಿಕ ಡಿಜಿಟಲ್​ ಕೌಶಲ ಮಾತ್ರ ಇರುವ ಜನರಿಗೆ ಹೋಲಿಸಿದರೆ, ಸ್ಟಾ್​ವೇರ್​ ಅಥವಾ ಹಾರ್ಡ್​ವೇರ್​ ಕೌಶಲ ಅಥವಾ ಭಾರಿ ಡಿಜಿಟಲ್​ ಕೌಶಲ ಇರುವ ಜನರೇಷನ್​ ಝಡ್​ನವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವ ಸಂಭಾವ್ಯತೆ 1.3ರಿಂದ 1.5ರಷ್ಟು ಪಟ್ಟು ಹೆಚ್ಚಿದೆ. ಉದ್ಯೋಗ ಹುಡುಕುವವರು ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ.
ಗೂಗಲ್​ ವೇತನ ಕಡಿತಕರೊನಾ ಸಾಂಕ್ರಾಮಿಕತೆಯಿಂದಾಗಿ ವರ್ಕ್​ ್ರಂ ಹೋಮ್​ ಪ್ರವೃತ್ತಿ ಹೆಚ್ಚಾಗಿದ್ದು ಇದಕ್ಕೆ ಪ್ರೋತ್ಸಾಹ ನೀಡದಿರಲು ತಂತ್ರಜ್ಞಾನ ದಿಗ್ಗಜ ಗೂಗಲ್​ ನಿರ್ಧರಿಸಿದಂತಿದೆ. ಕಾಯಂ ಆಗಿ ಮನೆಯಿಂದಲೇ ಕೆಲಸ ಮಾಡಲು ಬಯಸುವ ಉದ್ಯೋಗಿಗಳ ವೇತನವನ್ನು ಗರಿಷ್ಠ ಶೇಕಡ 25ರ ವರೆಗೆ ಕಡಿತ ಮಾಡಲು ಗೂಗಲ್​ ಮುಂದಾಗಿದೆ. ಉದ್ಯೋಗಿಗಳ ವಾಸ್ತವ್ಯ ಸ್ಥಳದ ಆಧಾರದಲ್ಲಿ ಸಾಮಾನ್ಯವಾಗಿ ವೇತನ ನಿಗದಿಪಡಿಸಲಾಗುತ್ತದೆ. ಅದೇ ನಿಯಮವನ್ನು ಮನೆಯಿಂದಲೇ ಕೆಲಸ ಮಾಡುವವರಿಗೆ ಅನ್ವಯಿಸಿ ವೇತನ ಕಡಿತದ ಲೆಕ್ಕಾಚಾರ ಹಾಕಲಾಗುವುದೆಂದು ಗೂಗಲ್​ ತಿಳಿಸಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × 1 =
Remember me
