ನವದೆಹಲಿ:ಲಡಾಖ್​ ಉದ್ವಿಗ್ನತೆ ಹಿನ್ನೆಲೆಯಲ್ಲಿ ಭಾರತ ಚೀನಾ ಮೂಲದ 59 ಆ್ಯಪ್​ಗಳನ್ನು ನಿರ್ಬಂಧಿಸಿದೆ. ಚೀನಾ ವಿರುದ್ಧ ಸರ್ಕಾರ ಕೈಗೊಂಡಿರುವ ಒಂದು ಸಣ್ಣ ಕ್ರಮದಂತೆಯೂ, ಚೀನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಉದ್ದೇಶ ಇರುವಂತೆ ತೋರಬಹುದು. ಆದರೆ, ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ವಾಸ್ತವದಲ್ಲಿ ಇದರ ಹಿಂದೆ ಭಾರಿ ಉದ್ದೇಶವೇ ಅಡಗಿದೆ. ರಾಜಕೀಯ ಮತ್ತು ಮಿಲಿಟರಿ ಬಳಕೆಗಾಗಿ ಮಾಹಿತಿಯನ್ನು ಕಳವು ಮಾಡದಂತೆ ತಡೆಯುವುದು ಇದರ ಉದ್ದೇಶವಾಗಿದೆ.
ಚೀನಾ ಕಮ್ಯುನಿಸ್ಟ್​ ಪಾರ್ಟಿ ಇದೀಗ ಮಿಲಿಟರಿ-ಸಿವಿಲಿಯನ್​ ಫ್ಯೂಷನ್​ ಎಂಬ ಹೊಸ ತಂತ್ರ ರೂಪಿಸಿಕೊಂಡಿದೆ. ಇದರ ಪ್ರಕಾರ ಭಾರತದ ಬಹುಮುಖೀಯ ನಾಗರಿಕ ಮೂಲಸೌಕರ್ಯಗಳನ್ನು ಹೊಕ್ಕು ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಾರತಕ್ಕೆ ಹಿನ್ನೆಡೆ ಉಂಟು ಮಾಡುವ ದುರುದ್ದೇಶವನ್ನು ಹೊಂದಿದೆ. ಅದರ ಈ ತಂತ್ರಗಾರಿಕೆಯನ್ನು ವಿಫಲಗೊಳಿಸಲು ಆ್ಯಪ್​ಗಳನ್ನು ನಿರ್ಬಂಧಿಸುವ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು.
ಇದನ್ನೂ ಓದಿ:ಬ್ಯಾನ್​ ಮಾಡಲು ಭಾರತದ ಉತ್ಪನ್ನಗಳೇ ಇಲ್ಲ, ಚೀನಾದ ಲೇವಡಿಗೆ ಆನಂದ್​ ಮಹೀಂದ್ರಾ ಕೊಟ್ಟ ಉತ್ತರವೇನು?
ಚೀನಾದ ತಂತ್ರಗಾರಿಕೆಯ ಪ್ರಕಾರ ಟಿಕ್​ಟಾಕ್​ ಮತ್ತು ಯುಸಿ ಬ್ರೌಸರ್​ ಅನ್ನು ಬಳಸಿಕೊಂಡು ಭಾರಿ ಪ್ರಮಾಣದ ಮಾಹಿತಿಯನ್ನು ಕಲೆ ಹಾಕಿ, ಅದನ್ನು ರಾಜಕೀಯ ಮತ್ತು ಮಿಲಿಟರಿ ಉದ್ದೇಶಗಳಿಗೆ ಬಳಸುವುದು ಚೀನಾದ ಹುನ್ನಾರವಾಗಿತ್ತು. ಉದಾಹರಣೆಗೆ ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯನ್ನು ಟಿಕ್​ಟಾಕ್​ನ ಬಾಟ್​ಗಳು ಕದ್ದಿದ್ದವು. ಇದು ಭಾರತದ ಪಾಲಿಗೆ ಎಚ್ಚರಿಕೆಯ ಕರೆಗಂಟೆಯಾಗಿತ್ತು.
ಏನಿದು ಮಿಲಿಟರಿ-ಸಿವಿಲಿಯನ್​ ಫ್ಯೂಷನ್​:ಮಾವೋ ಅವಧಿಯಿಂದಲೂ ಚೀನಾ ಮಿಲಿಟರಿ-ಸಿವಿಲಿಯನ್​ ಫ್ಯೂಷನ್​ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಆದರೆ, ಕ್ಸಿ ಜಿನ್​ಪಿಂಗ್​ ಅಧ್ಯಕ್ಷರಾದ ಬಳಿಕ ಈ ಕಾರ್ಯಕ್ರಮ ಮೊತ್ತೊಂದು ಹಂತಕ್ಕೆ ಹೋಗಿದೆ. ಇದರ ಪ್ರಕಾರ ನಾಗರಿಕ ತಂತ್ರಜ್ಞಾನಗಳು, ಶಿಕ್ಷಣ, ಮನರಂಜನೆ ಮತ್ತು ಸಂಶೋಧನಾ ಕ್ಷೇತ್ರಗಳೆಲ್ಲವನ್ನೂ ಭದ್ರತೆ ಮತ್ತು ಮಿಲಿಟರಿ ವಲಯಕ್ಕೆ ತಂದು ಅನ್ವೇಷಣೆಯಲ್ಲಿ ತೊಡಗುವುದು, ಪೀಪಲ್ಸ್​ ಲಿಬರೇಷನ್​ ಆರ್ಮಿಗಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಚೀನಾದ ರಾಷ್ಟ್ರೀಯ ಭದ್ರತೆಯ ಕಾರ್ಯಸೂಚಿಯನ್ನು ಮುಂದುವರಿಸುವುದು ಆಗಿದೆ.
₹705 ಕೋಟಿ ಗುಳುಂ ಆರೋಪ: ಸಿಬಿಐ ಬಲೆಗೆ ಜಿವಿಕೆ ಒಡೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − three =
Remember me
