ಮಣಿಕರಣ್/ಬೆಂಗಳೂರು:ದಿವಂಗತ ನಟ ಪುನೀತ್ ರಾಜ್​​ಕುಮಾರ್​​ ಸ್ಮರಣಾರ್ಥ ಅವರ ಅಭಿಮಾನಿಗಳು ನಿತ್ಯ ಯಾವುದಾದರೂ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ. ಜಗತ್ತಿನ ಮೂಲೆಮೂಲೆಯಲ್ಲೂ ಪುನೀತ್​​ರ ಮರಣದಿಂದ ಮರಗಿರುವ ಹೃದಯಗಳು ಬೇರೆ ಬೇರೆ ರೀತಿ ತಮ್ಮ ಅಭಿಮಾನವನ್ನು ಸಾಬೀತುಪಡಿಸುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ ಮಾಡಲಿರುವ ಯಾತ್ರೆಯ ಬಗ್ಗೆ ನೆಟ್ಟಿಗರು ಸಿಕ್ಕಾಪಟ್ಟೆ ಮಾತಾಡಿಕೊಳ್ಳುತ್ತಿದ್ದಾರೆ.ಅಪ್ಪು ಅಭಿಮಾನಿಯಾದ ಚಾರಣಕಾರ ಗುರುಪ್ರಕಾಶ್ ಪುನೀತ್​​​ಗೆಂದು 2700 ಕಿಲೋ.ಮೀಟರ್ ಸೈಕಲ್ ಯಾತ್ರೆ ಮಾಡಲಿದ್ದಾರೆ.
ಹೌದು, ಹಿಮಾಚಲ ಪ್ರದೇಶದ ಮಣಿಕರಣ್​ದಿಂದ ಆರಂಭಿಸಿ ಕರ್ನಾಟಕದ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯವರೆಗೆ ‘ಮೌಂಟ್​ನೇರ್ ಗುರುಪ್ರಕಾಶ್’ರ ಅಭಿಮಾನದ ಬೈಸಿಕಲ್ ಯಾತ್ರೆ ನಡೆಯಲಿದೆ. ಈ ಅಪರೂಪದ ಯಾತ್ರೆ ಡಿ.10 ರಂದು ಆರಂಭವಾಗಲಿದೆ. ಇದರ ಬಗ್ಗೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬರೆದುಕೊಂಡಿದ್ದು, ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಭಾರತ-ಪಾಕಿಸ್ತಾನ ಯುದ್ಧಕ್ಕೆ 50 ವರ್ಷ: ಬಳ್ಳಾರಿಯಲ್ಲಿ ಡಿ.11ಕ್ಕೆ ಸ್ವರ್ಣಿಮ ವಿಜಯೋತ್ಸವ
ಇನ್ನು, ಅಪ್ಪು ಸಮಾಧಿ ತಲುಪಿದ ನಂತರ ಉಳಿದ ಆಭಿಮಾನಿಗಳ ಹಾಗೆ ಇವರು ಸಹ ತಮ್ಮ ನೇತ್ರದಾನಕ್ಕೆ ಸಹಿ ಹಾಕಲಿದ್ದಾರೆ. ತಮ್ಮ ಈ ಅಭಿಮಾನದ ಯಾತ್ರೆಗೆ ಮತ್ತು ನೇತ್ರದಾನದ ಜಾಗೃತಿಗೆ ಅಪ್ಪು ಅಭಿಮಾನಿಗಳೆಲ್ಲ ಸಹಕರಿಸಿ, ಕೈಜೋಡಿಸಬೇಕೆಂದು ಗುರುಪ್ರಕಾಶ್ ವಿನಂತಿಸಿದ್ದಾರೆ. ಇವರ ಅಭಿಮಾನವನ್ನು ಹೊಗಳಲು ನೆಟ್ಟಿಗರು ಪದಗಳ ಹುಡುಕಾಟದಲ್ಲಿ ಬಿದ್ದಿದ್ದಾರೆ ಎಂದೇ ಹೇಳಬೇಕು. ಗುರುಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವವರು ಎಂಬುದು ಇಲ್ಲಿ ಗಮರ್ನಾಹ.
ಈ ಹಿಂದೆಯೇ ಮೂರು ಮಕ್ಕಳ ತಾಯಿಯೊಬ್ಬರು ನಟ ಪುನೀತ್ ರಾಜ್​ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು 500 ಕಿ.ಮೀ. ಓಟ ಆರಂಭಿಸಿದ್ದಾರೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದಾಕ್ಷಾಯಣಿ ಓಟದ ಮೂಲಕ ಬೆಂಗಳೂರು ತಲುಪಿ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನವೆಂಬರ್ 30 ರಂದು ಮ್ಯಾರಥಾನ್ ಆರಂಭಿಸಿದ್ದಾರೆ. ಸ್ವಗ್ರಾಮದಿಂದ ಪುನೀತ್​ರ ಸಮಾಧಿವರೆಗೂ ಅಂದರೆ ಮನಗುಂಡಿ ಗ್ರಾಮದಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋ ತಲುಪಲಿದ್ದಾರೆ. ಪ್ರತಿದಿನ ಸುಮಾರು 30 ಕಿಲೋಮೀಟರ್ ಓಡಲಿರುವ ದಾಕ್ಷಾಯಿಣಿ ಹನ್ನೆರಡು ದಿನಗಳಲ್ಲಿ ಬೆಂಗಳೂರು ತಲುಪುವ ಗುರಿ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪೆಟ್ಟು: ಹಿರಿಯ ನಟ ಶಿವರಾಂ ವಿಧಿವಶ
ಜೊತೆಗೆ, ಹಲವು ಅಭಿಮಾನಿಗಳು ಈಗಾಗಲೇ ರಕ್ತದಾನ, ಅನ್ನದಾನ, ನೇತ್ರದಾನ ಹಾಗೂ ಇತರ ಸಮಾಜ ಸೇವೆ ಅಥವಾ ವಿಶೇಷ ಸ್ಮರಣೆ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರೀತಿಯನ್ನು ತಿಳಿಸುತ್ತಿದ್ದಾರೆ. ಬಹುಶಃ, ಅಪ್ಪು ಬದುಕಿದ್ದರೆ ಈ ಡೈ ಹಾರ್ಡ್ ಅಭಿಮಾನಿಗಳ ಪ್ರೀತಿ ಕಂಡು ಅವರ ಮನಸ್ಸು ಭಾರವಾಗುತ್ತಿತ್ತು.
VIDEO| ಬ್ಲೌಸ್​ ಬದ್ಲು ಮೆಹೆಂದಿ ತೊಟ್ಟ ನಾರೀಮಣಿ! ಇನ್ನೂ ಏನೇನು ಮಾಡ್ತಾರೋ ಎಂದ ನೆಟ್ಟಿಗರು

VIDEO| ಮೈತೋರಿಸೋ ಬಟ್ಟೆ​ ಬಗ್ಗೆ ಟ್ರೋಲ್​ ಮಾಡೋರ್ಗೆ ಉರ್ಫಿ ನೀಡಿದ ಉತ್ತರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 17 =
Remember me
