ಹೈದರಾಬಾದ್:ಅಪ್ಸರಾ ಎಂಬ ಯುವತಿಯನ್ನು ಜೂ.3ರಂದು ಆಕೆಯ ಪ್ರಿಯಕರ ಸಾಯಿಕೃಷ್ಣ ಹತ್ಯೆಗೈದು, ಮೃತದೇಹವನ್ನು ಸರೂರ್ ನಗರದ ಮ್ಯಾನ್ ಹೋಲ್​ನಲ್ಲಿ ಎಸೆದಿದ್ದ. ಬಳಿಕ ಅಪ್ಸರಾ ನಾಪತ್ತೆಯಾಗಿದ್ದಾಳೆಂದು ಪ್ರಿಯಕರನೇ ಪೊಲೀಸ್​ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸಾಯಿಕೃಷ್ಣನೇ ಆರೋಪಿ ಎಂಬುದನ್ನು ಪತ್ತೆ ಹಚ್ಚಿದ್ದರು.
ಹೈದರಾಬಾದ್ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಇದೀಗ ವಿಚಾರಣೆ ನಡೆಸಿರುವ ಪೊಲೀಸರು, ಪ್ರೇಯಸಿಯನ್ನು ಹತ್ಯೆ ಮಾಡಲು ಸಾಯಿಕೃಷ್ಣ ಹೇಗೆ ಕಲಿತುಕೊಂಡ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ:4 ತಿಂಗಳ ಮಗುವಿನ ಪಕ್ಕ ಹೆಡೆ ಬಿಚ್ಚಿದ ವಿಷ ಸರ್ಪ; ಕಂದಮ್ಮನ ಪ್ರಾಣ ಉಳಿಸಲು ತಾಯಿ ಮಾಡಿದ್ದೇನು?
ಅಪ್ಸರಾಳನ್ನು ಕೊಲೆ ಮಾಡಲು ಸಾಯಿಕೃಷ್ಣ ಗೂಗಲ್ ಸಹಾಯ ಪಡೆದುಕೊಂಡಿದ್ದ ಎಂಬುದು ಗೊತ್ತಾಗಿದೆ. ‘ಮನುಷ್ಯರನ್ನು ಕೊಲ್ಲುವುದು’ ಹೇಗೆ ಮತ್ತು ‘ಮೃತದೇಹ ಹೇಗೆ ಕೊಳೆಯುತ್ತದೆ’ ಎಂಬುದನ್ನು ಆರೋಪಿ ಗೂಗಲ್​ನಲ್ಲಿ ಹುಡುಕಾಡಿದ್ದಾನೆ. ಆತನ ಮೊಬೈಲ್​ ಫೋನ್​ನ್ನು ವಶಪಡಿಸಿಕೊಂಡು, ಪರಿಶೀಲನೆ ನಡೆಸಿದಾಗ ಈ ವಿಚಾರ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಮ್ಯಾನ್​ಹೋಲ್​ನಲ್ಲಿ ಎಸೆದ ನಂತರ ಉಪ್ಪನ್ನು ಸುರಿದರೆ ಶವ ಕಡಿಮೆ ಸಮಯದಲ್ಲಿ ಕೊಳೆತು ಹೋಗುತ್ತದೆ ಎಂಬುದನ್ನು ಸಾಯಿಕೃಷ್ಣ ಗೂಗಲ್ ಸರ್ಚ್ ಮೂಲಕ ತಿಳಿದುಕೊಂಡಿದ್ದ. ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಅಪ್ಸರಾಳೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಅಪ್ಸರಾ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಹೀಗಾಗಿ ಸಾಯಿಕೃಷ್ಣ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × four =
Remember me
