ಮುಂಬೈ:ಮ್ಯೂಸಿಕ್​ ಮಾಂತ್ರಿಕ ಎ.ಆರ್​. ರೆಹಮಾನ್​ ಅವರು ಸದ್ಯ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣವೂ ಇದೆ.
ರೆಹಮಾನ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಪುತ್ರಿ ಖತಿಜಾ ರೆಹಮಾನ್​ ಅವರ ವಿವಾಹ ನಡೆದಿದ್ದು, ಮಗಳ ಮದುವೆಯ ಫೋಟೋ ಹಂಚಿಕೊಂಡು ನವದಂಪತಿಗೆ ಶುಭಕೋರಿದ್ದಾರೆ.
ರಿಯಾಸುದ್ದೀನ್​ ಶೇಖ್​ ಮೊಹಮ್ಮದ್​ ಅವರನ್ನು ಖತೀಜಾ ವರಿಸಿದ್ದಾರೆ. ನವ ವಧು-ವರರೊಂದಿಗೆ ಕುಟುಂಬ ಸಮೇತ ತೆಗಿದಿರುವ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಕೆಯ ಮಹಾಪೂರವೇ ಹರಿದುಬರುತ್ತಿದೆ.
ಹೆಚ್ಚಾಗಿ ರೆಹಮಾನ್​ ಅವರ ತಾಯಿಯ ಭಾವಚಿತ್ರವಿರುವ ಫೋಟೋದೊಂದಿಗೆ ಕುಟುಂಬಸ್ಥರು ಇರುವ ಈ ಚಿತ್ರಕ್ಕೆ ರೆಹಮಾನ್​ ಅವರಿಗೆ ತಾಯಿ ಮೇಲಿನ ಪ್ರೀತಿಯನ್ನು ತೋರಿಸಿಕೊಡುತ್ತದೆ.ಇದು ಅಭಿಮಾನಿಗಳಲ್ಲಿ ಮತ್ತಷ್ಟು ಮೆಚ್ಚುಗೆಗೆ ಕಾರಣವಾಗಿದೆ.
ಕಳೆದ ಡಿಸೆಂಬರ್​ನಲ್ಲಿ ಗಾಯಕರಾಗಿರುವ ರಯಸುದ್ದೀನ್​ ಹಾಗೂ ಖತೀಜಾ ಅವರ ನಿಶ್ಚಿತಾರ್ಥ ನಡೆದಿತ್ತು. ಎ.ಆರ್​.ರೆಹಮಾನ್​, ಪತ್ನಿ ಸೈರಾ ಬಾನು, ಹಿರಿಯ ಪುತ್ರಿ ರಹೀಮಾ ಮತ್ತು ಪುತ್ರ ಅಮೀನ್​ ಇರುವ ಚಿತ್ರವನ್ನು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.
ಕೊಲೆ ಪ್ರಕರಣದ ಸಾಕ್ಷ್ಯ ಹೊತ್ತು ಪರಾರಿಯಾದ ಕೋತಿ! ನ್ಯಾಯಾಲಯಕ್ಕೆ ಪೊಲೀಸರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seventeen =
Remember me
