ಹೊಸದಿಲ್ಲಿ:ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ ಐದನೇ ಬಾರಿಗೆ ನೀಡಿದ್ದ ಸಮನ್ಸ್​ ಅನ್ನು ತಪ್ಪಿಸಿಕೊಂಡ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ಈ ದಾಳಿಯನ್ನು ಮುಂದುವರೆಸಿದ ಕೇಜ್ರಿವಾಲ್​, ಶಾಲೆಗಳಿಗೆ ಕೇಂದ್ರ ವ್ಯಯಿಸೋದು 4%, ಆದ್ರೆ ನಾವು ಖರ್ಚು ಮಾಡಿರೋದು 40% ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೊರಟ ಕುಟುಂಬ ಪತ್ತೆ
ಭಾನುವಾರ (ಫೆ.4) ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ದೆಹಲಿ ಸಿಎಂ, ಕಳೆದ ಎಂಟು ವರ್ಷಗಳಿಂದ ದೆಹಲಿ ಸರ್ಕಾರ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಒಟ್ಟು ಬಜೆಟ್‌ನಲ್ಲಿ 40 ಪ್ರತಿಶತದಷ್ಟು ಖರ್ಚು ಮಾಡುತ್ತಿದೆ. ಆದ್ರೆ, ಕೇಂದ್ರ ಸರ್ಕಾರ ಕೇವಲ 4ರಷ್ಟು ಮಾತ್ರ ವ್ಯಯಿಸುತ್ತಿದೆ ಎಂದು ದೂರಿದರು.
ಇಂದು ರಾಷ್ಟ್ರ ರಾಜಧಾನಿಯ ರೋಹಿಣಿಯಲ್ಲಿ ಹೊಸ ಶಾಲಾ ಕಟ್ಟಡಗಳಿಗೆ ಶಂಕುಸ್ಥಾಪನೆ ಮಾಡಿದ ಸಿಎಂ ಕೇಜ್ರಿವಾಲ್, “ನಾವು ಶಾಲೆಗಳು, ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳನ್ನು ಉದ್ಘಾಟಿಸಲು ಹೋದಾಗ, ಇತರ ಪಕ್ಷಗಳ ಜನರು ನಮ್ಮ ವಿರುದ್ಧ ಘೋಷಣೆಗಳನ್ನು ಕೂಗಲು ಅಲ್ಲಿಗೆ ದೌಡಾಯಿಸುತ್ತಾರೆ. ಇಂತಹ ಕೊಳಕು ರಾಜಕೀಯ ಮಾಡಬೇಡಿ” ಎಂದರು,(ಏಜೆನ್ಸೀಸ್).
ಗಂಡನಿಂದ ಹಿಂಸೆ, ಇಬ್ಬರು ಮಕ್ಕಳ ಜವಾಬ್ದಾರಿ; ಬೀದಿ ಬೀದಿಗಳಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಇಂದು ಉನ್ನತ ಅಧಿಕಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
