ನವದೆಹಲಿ:ಪಟಾಕಿ ಸಿಡಿಸಿದರೆ ಕರೊನಾ ಸೋಂಕು ಶೀಘ್ರ ವ್ಯಾಪಿಸುತ್ತದೆ ಎಂದು ಕೆಲವು ತಜ್ಞರು ಶಂಕೆ ವ್ಯಕ್ತಪಡಿಸಿರುವುದರಿಂದ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯಬೇಕೋ ಬೇಡವೋ ಎಂಬ ಕುರಿತು ನಿರ್ಧರಿಸಲು ಕರ್ನಾಟಕ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.
ಸದರಿ ಸಮಿತಿಯು ಇಂದು ವರದಿ ಕೊಡುವ ನಿರೀಕ್ಷೆ ಇದ್ದು, ಅದರ ಆಧಾರದ ಮೇಲೆ ಪಟಾಕಿ ಮಾರಾಟ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಬುಧವಾರವೇ ತಿಳಿಸಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಚಿಂತಿಸಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ.
ಇದನ್ನೂ ಓದಿ:ಪಟಾಕಿ ಹೊಗೆಯಿಂದ ಕರೊನಾ ಹೆಚ್ಚಾಗುವ ಸಾಧ್ಯತೆ: ತಜ್ಞರ ಶಂಕೆ!
ನವದೆಹಲಿಯಲ್ಲಿ ಹೆಚ್ಚಿರುವ ಕರೊನಾ ಸೋಂಕು ಹಾಗೂ ವಾಯುಮಾಲಿನ್ಯ ವಿಕೋಪದಿಂದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ರಾಜ್ಯದ ಜನತೆ ಬಳಿ ವಿಶೇಷವಾದ ಮನವಿ ಮಾಡಿಕೊಂಡಿದ್ದಾರೆ. ಪಟಾಕಿ ಹೊಡೆಯುವ ಮೂಲಕ ನೀವು ನಿಮ್ಮ ಕುಟುಂಬದವರ ಜೀವದ ಜತೆ ಚೆಲ್ಲಾಟವಾಡಬೇಡಿ ಎಂದಿರುವ ಅವರು, ಏನೇ ಆಗಲಿ, ದಯವಿಟ್ಟು ಪಟಾಕಿ ಹೊಡೆಯಬೇಡಿ ಎಂದು ಕೋರಿಕೊಂಡಿದ್ದಾರೆ. ಅಲ್ಲದೆ ನ. 14ರ ರಾತ್ರಿ 7.49 ನಿಮಿಷದ ಬಳಿಕ ದೆಹಲಿಯ 2 ಕೋಟಿ ಜನರು ಜತೆಯಾಗಿ ಲಕ್ಷ್ಮೀ ಪೂಜೆ ನೆರವೇರಿಸಲಿದ್ದಾರೆ. ನಾನು ಪೂಜೆಗೆ ಚಾಲನೆ ನೀಡಲಿದ್ದು, ಟಿವಿಯಲ್ಲಿ ಅದರ ನೇರಪ್ರಸಾರವೂ ಇರಲಿದೆ ಎಂದು ಅವರು ತಮ್ಮ ರಾಜ್ಯದ ಜನತೆಗೆ ತಿಳಿಸಿದ್ದಾರೆ. (ಏಜೆನ್ಸೀಸ್​)
Please don't burst crackers at any cost. You're playing with the lives of your own family by bursting crackers. On 14th Nov, 7.49 pm onwards, all 2 crores Delhi citizens will perform Laxmi Puja together. I'll begin Puja which will be telecast live on TV: Delhi CM Arvind Kejriwalpic.twitter.com/k4GEbJDNBV
— ANI (@ANI)November 5, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
