ಮುಂಬೈ:ಬಾಲಿವುಡ್​​ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ನಟ ಅರ್ಬಾಜ್ ಖಾನ್ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ವರಿಸಲಿದ್ದಾರೆ. ಇವರ ಮದುವೆ ಡಿಸೆಂಬರ್ 24 ರಂದು ನಡೆಯಲಿದೆ. ಮುಂಬೈನಲ್ಲಿರುವ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಅರ್ಬಾಜ್ ಖಾನ್ ಅವರಿಗೆ ಇದು ಎರಡನೇ ಮದುವೆಯಾಗಿದೆ. 1998 ರಲ್ಲಿ ನಟಿ ಮಲೈಕಾ ಅರೋರಾ ಅವರನ್ನು ವಿವಾಹವಾದ ಅರ್ಬಾಜ್ ತಮ್ಮ 19 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿ 2017 ರಲ್ಲಿ ವಿಚ್ಛೇದನ ಪಡೆದರು.
ಮಲೈಕಾಳೊಂದಿಗೆ ಸಂಬಂಧ ಮುರಿದುಬಿದ್ದ ನಂತರ, ಅರ್ಬಾಜ್ ತನ್ನ  ನಟಿ ಮತ್ತು ರೂಪದರ್ಶಿ ಜಾರ್ಜಿಯಾ ಆಂಡ್ರಿಯಾ ಅವರೊಂದಿಗೆ ದೀರ್ಘಕಾಲದಿಂದ ಡೇಟಿಂಗ್ ಮಾಡುತ್ತಿದ್ದರು. ಆದರೆ ಇಬ್ಬರೂ ಬೇರ್ಪಟ್ಟರು. ಇದಾದ ನಂತರ ಒಂಟಿಯಾಗಿದ್ದ ಅರ್ಬಾಜ್ ಅವರು ಇದೀಗ ಮತ್ತೆ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ.
ಅರ್ಬಾಜ್ ಮದುವೆಯಾಗುತ್ತಿರುವ ಶೂರಾ ಖಾನ್ ಮೇಕಪ್ ಕಲಾವಿದೆಯಂತೆ. ಇಬ್ಬರಿಗೂ 22 ವರ್ಷಗಳ ಅಂತರವಿದೆ. ಶುರಾ ಖಾನ್ ಈ ಹಿಂದೆ ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥಡಾನಿ ಅವರೊಂದಿಗೆ ಕೆಲಸ ಮಾಡಿದ್ದರು. ‘ಪಟ್ನಾ ಶುಕ್ಲಾ’ ಸಿನಿಮಾದ ಚಿತ್ರೀಕರಣದ ವೇಳೆ ಇಬ್ಬರೂ ಭೇಟಿಯಾಗಿದ್ದರಂತೆ. ಈ ವೇಳೆಯ ಪರಿಯಚ ಇದೀಗ ಮದುವೆ ಹಂತಕ್ಕೆ ತಂದು ನಿಲ್ಲಿಸಿದೆ ಎನ್ನಲಾಗಿದೆ.
ಬಿಗ್ ಬಾಸ್ ಸ್ಪರ್ಧಿಗೆ ಬಿಗ್ ಶಾಕ್; ದೊಡ್ಡ ಮನೆ ಆಟಗಾರ ಅರೆಸ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − five =
Remember me
