ಶ್ರೀನಗರ :ಕಾಶ್ಮೀರವನ್ನು ಭಾರತದ ಉಳಿದ ಭಾಗಕ್ಕೆ ರೈಲು ಮಾರ್ಗದ ಮೂಲಕ ಜೋಡಿಸುವ ಪ್ರಯತ್ನವಾದ ಚೇನಬ್​ ಬ್ರಿಡ್ಚ್​ನ ಆರ್ಚ್​ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಜಗತ್ತಿನ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಆದ ಚೇನಬ್ ಬ್ರಿಡ್ಜ್​ನ ಆರ್ಚ್​ 467 ಮೀಟರ್ ಉದ್ದವಿದ್ದು, ಪ್ಯಾರಿಸ್​​ನ ಐಫಿಲ್ ಟವರ್​ಗಿಂತ 35 ಮೀಟರ್ ಎತ್ತರವಿದೆ.
ಇದು ‘ಭಾರತಕ್ಕೆ ಒಂದು ಹೆಮ್ಮೆಯ ಕ್ಷಣ’ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈಲ್ವೆ ಸಂಪರ್ಕ ಸಾಧಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ರೈಲ್ವೆ ಇಲಾಖೆಯನ್ನು ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಿದೆ ಎಂದಿದ್ದಾರೆ.
A moment of pride for 🇮🇳! The arch of Chenab bridge, connecting Kashmir to Kanyakumari has been completed.With an arch span of 467m, it is the world’s highest railway bridge.PM@NarendraModiji’s vision to connect India has inspired the Railway family to scale new heightspic.twitter.com/GEDEBIb9nE— Piyush Goyal (@PiyushGoyal)April 5, 2021
A moment of pride for 🇮🇳! The arch of Chenab bridge, connecting Kashmir to Kanyakumari has been completed.With an arch span of 467m, it is the world’s highest railway bridge.PM@NarendraModiji’s vision to connect India has inspired the Railway family to scale new heightspic.twitter.com/GEDEBIb9nE
ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೇನಬ್ ನದಿಯ ಮೇಲೆ ಈ ರೈಲ್ವೇ ಸೇತುವೆ ನಿರ್ಮಾಣಗೊಂಡಿದೆ. ಇದು ಉಧಮಪುರ- ಶ್ರೀನಗರ-ಬಾರಾಮುಲ್ಲ ರೈಲ್ವೇ ಯೋಜನೆಯ ಅಂಗವಾಗಿ ಜಮ್ಮು ಕಾಶ್ಮೀರದಿಂದ ದೇಶದ ಉಳಿದ ಭಾಗಗಳಿಗೆ ರೈಲು ಮಾರ್ಗ ಕಲ್ಪಿಸಲಿದೆ. ಒಟ್ಟು 1,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಚೇನಬ್ ಬ್ರಿಡ್ಜ್​ ನಿರ್ಮಾಣ ಕಾರ್ಯವು ನವೆಂಬರ್ 2017 ರಲ್ಲಿ ಆರಂಭವಾಗಿತ್ತು. ಸೇತುವೆಯ ಒಟ್ಟು ಉದ್ದ 1,315 ಮೀಟರ್​ಗಳಾಗಿದ್ದು, ಆರ್ಚ್​ 467 ಮೀಟರ್ ಉದ್ದ ಇದೆ.
ಇದನ್ನೂ ಓದಿ:ಹೇಮಾವತಿ ನಾಲೆಗೆ ಭೂಮಿ ನೀಡಿದ್ದ ರೈತರಿಗೆ ಬಾಕಿ ಪರಿಹಾರ ಬಿಡುಗಡೆ ; ಮಾತು ಉಳಿಸಿಕೊಂಡ ಜೆಸಿಎಂ
ಈ ರೈಲು ಸೇತುವೆಯು ಅತ್ಯುತ್ತಮ ಸುರಕ್ಷಾ ವ್ಯವಸ್ಥೆಯನ್ನು ಹೊಂದಿದ್ದು, ಭೂಕಂಪ ಮತ್ತು ದೊಡ್ಡ ಪ್ರಮಾಣದ ಸ್ಫೋಟಗಳನ್ನು ತಡೆಯುವ ಶಕ್ತಿ ಹೊಂದಿದೆ. ಈ ರೀತಿಯ ಇಂಜಿನಿಯರಿಂಗ್ ವಿಸ್ಮಯದ ನಿರ್ಮಾಣವು ಜಮ್ಮು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹದಾಯಕ ಎನ್ನಲಾಗಿದೆ.(ಏಜೆನ್ಸೀಸ್)
ಭ್ರಷ್ಟಾಚಾರ ಆರೋಪ : ಮಹಾ ಗೃಹ ಸಚಿವರ ವಿರುದ್ಧ ಸಿಬಿಐ ತನಿಖೆ ಆದೇಶಿಸಿದ ಹೈಕೋರ್ಟ್
ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಗಾಗಿ ಹೀಗೆ ಮಾಡಿ
ಬಾಲಿವುಡ್​ ನಟರ ಬೆನ್ನು ಹತ್ತಿದ ಕರೊನಾ : ಗೋವಿಂದ ಪಾಸಿಟೀವ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + five =
Remember me
