ನವದೆಹಲಿ:ಭಾರತಕ್ಕೆ, ಅಮೆರಿಕಾ ನೀಡಲಿರುವ ವೆಂಟಿಲೇಟರ್​ಗಳಿಗೆ 2.6 ಮಿಲಿಯನ್​ ಡಾಲರ್​ ಮೊತ್ತ ಪಾವತಿಸಬೇಕು ಎನ್ನುವ ಮಾಧ್ಯಮಗಳ ವರದಿ ಸುಳ್ಳು ಎಂದು ಯುನೈಟೆಡ್ ಸ್ಟೇಸ್ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ತಿಳಿಸಿದೆ.
ಯುನೈಟೆಡ್ ಸ್ಟೇಸ್ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ನಿರ್ದೇಶಕರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಅಮೆರಿಕಾ ಭಾರತಕ್ಕೆ ದೇಣಿಗೆಯಾಗಿ ವೆಂಟಿಲೇಟರ್​ಗಳನ್ನು ನೀಡುತ್ತಿದೆ. ಮಾಧ್ಯಮಗಳಲ್ಲಿ ಹಣ ಪಾವತಿ ಮಾಡಲಾಗುತ್ತದೆ ಎಂಬ ವರದಿ ಸುಳ್ಳು ಎಂದು ತಿಳಿಸಿದ್ದಾರೆ.
ಇದನ್ನೂ ಓದಿಮೊಮ್ಮಗಳು ಬ್ಯಾಂಕಿಗೆ ಹಾಜರು; ಅಜ್ಜಿಯ ಹಣೆ ಮೇಲೆ ಬೆವರು!
ಕರೊನಾ ವೈರಸ್​ ವಿರುದ್ಧ ಭಾರತ ನಡೆಸಿರುವ ಹೋರಾಟಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರಾಷ್ಟ್ರಕ್ಕೆ ವೆಂಟಿಲೇಟರ್​ಗಳನ್ನು ದೇಣಿಗೆ ನಿಡುವುದಾಗಿ ಘೋಷಿಸಿದ್ದರು. ಆದರೆ ರಾಷ್ಟ್ರದ ಮಾಧ್ಯಮಗಳಲ್ಲಿ ವೆಂಟಿಲೇಟರ್​ಗಳನ್ನು ಅಮೆರಿಕಾ ದೇಣಿಯಾಗಿ ನೀಡುತ್ತಿಲ್ಲ ಬದಲಿಗೆ ಹಣ ಪಡೆಯಲಿದೆ. ಇದಕ್ಕಾಗಿ ರಾಷ್ಟ್ರ 2.6 ಮಿಲಿಯನ್​ ಡಾಲರ್​ ಹಣ ಪಾವತಿ ಮಾಡಬೇಕು ಎಂಬ ವರದಿ ಬಿತ್ತರ ಮಾಡಿದ್ದವು.
ಅಮೆರಿಕಾ ನೀಡುವ ಪ್ರತಿ ವೆಂಟಿಲೇಟರ್​ಗೆ ಸಾಗಾಣಿಕೆ ವೆಚ್ಚ ಇಲ್ಲದೆ 9.6 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಭಾರತಕ್ಕೆ ಅಮೆರಿಕಾ ಉಚಿತವಾಗಿ ವೆಂಟಿಲೇಟರ್​ ನೀಡುವುದಾಗಿ ತಿಳಿಸಿ ಹಣ ಪಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕಾ ಸ್ಪಷ್ಟೀಕರಣ ನೀಡಿದೆ.
ಅಮೆರಿಕಾ ಭಾರತಕ್ಕೆ 200 ವೆಂಟಿಲೇಟರ್​ಗಳನ್ನು ಉಚಿತವಾಗಿ ನೀಡಲಿದೆ. ಮೊದಲ ಹಂತವಾಗಿ 50 ವೆಂಟಿಲೇಟರ್​ಗಳಿ ಶೀಘ್ರವೇ ಭಾರತ ತಲುಪಲಿದೆ ಎಂದು ಟ್ರಂಪ್​ ಘೋಷಿಸಿದ್ದರು. (ಏಜೆನ್ಸೀಸ್​)
VIDEO| ನಿನ್ನೆ ದೇವೇಗೌಡರ ಜತೆ ಡಿಕೆಶಿ ಭೋಜನ; ಇವತ್ತು ಎಚ್‌ಡಿಕೆ ಜತೆ ಡಿಕೆ ಸುರೇಶ್ ಕ್ಷೇತ್ರ ಪ್ರವಾಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
