ನವದೆಹಲಿ:ತವರಿಗೆ ಹೋಗುವ ಬಗ್ಗೆ ಪತಿಯೊಂದಿಗೆ ಜಗಳವಾದ ಹಿನ್ನೆಲೆಯಲ್ಲಿ, 22 ವರ್ಷದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದೆಹಲಿಯಿಂದ ವರದಿಯಾಗಿದೆ. ಬೆಳಿಗ್ಗೆ ಹೆಂಡತಿಯೊಂದಿಗೆ ಜಗಳ ಮಾಡಿ ಕೆಲಸಕ್ಕೆ ಹೋಗಿದ್ದ ಗಂಡಸು, ಮನೆಗೆ ವಾಪಸಾಗುವುದರೊಳಗೆ ಹೆಂಡತಿ ಮಕ್ಕಳು ಶವವಾಗಿದ್ದರು ಎನ್ನಲಾಗಿದೆ.
ಮೃತಪಟ್ಟಿರುವ ಮಹಿಳೆ, ಬಿಹಾರದ ಮಧುಬನಿ ಜಿಲ್ಲೆಯ ಮೂಲದವಳು, ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ರೆಸ್ಟೋರೆಂಟ್ ಉದ್ಯೋಗಿಯಾಗಿರುವ ಪತಿ ಮತ್ತು ಇಬ್ಬರು ಚಿಕ್ಕವಯಸ್ಸಿನ ಮಕ್ಕಳೊಂದಿಗೆ ದೆಹಲಿಯ ಶಕುರ್ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಳು ಎಂದು ಡಿಸಿಪಿ ಉಷಾ ರಂಗ್ನಾನಿ ತಿಳಿಸಿದ್ದಾರೆ.
ಇದನ್ನೂ ಓದಿ:ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿದ ಸರ್ಕಾರಿ ಉದ್ಯೋಗಿ: ಇಂಧನ ದರ ಏರಿಕೆ ಕಾರಣವಲ್ಲ!
ಮುಂಡನ್​ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ತನ್ನ ಊರಿಗೆ ಹೋಗಬೇಕೆಂದು ಮೃತ ಮಹಿಳೆಯು ಬಯಸಿದ್ದಳು. ಗುರುವಾರ ಬೆಳಿಗ್ಗೆ ಈ ಬಗ್ಗೆ ಪತಿ-ಪತ್ನಿ ನಡುವೆ ವಾಗ್ವಾದ ನಡೆಯಿತು. ತದನಂತರ ಪತಿಯು ಎಂದಿನಂತೆ ಕೆಲಸಕ್ಕೆ ತೆರಳಿದ್ದಾನೆ. ರಾತ್ರಿ 10.30 ಕ್ಕೆ ಆತ ವಾಪಸಾದಾಗ, ಪತ್ನಿ ಮತ್ತು ಮಕ್ಕಳ ಶವಗಳು ಫ್ಯಾನಿನಿಂದ ನೇತಾಡುತ್ತಿದ್ದುದನ್ನು ಕಿಟಕಿಯಿಂದ ಕಂಡಿದ್ದಾನೆ. ಅಕ್ಕಪಕ್ಕದವರ ಸಹಾಯದಿಂದ ಬಾಗಿಲು ಒಡೆದು ಒಳಹೊಕ್ಕು ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ ಎನ್ನಲಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

18ರ ಯುವತಿಯ ಮರ್ಯಾದಾ ಹತ್ಯೆ : ಕೋರ್ಟ್ ಆದೇಶವಿದ್ದರೂ ರಕ್ಷಿಸಲು ವಿಫಲರಾದ ಪೊಲೀಸರು
“ಬರೀ ಯೂನಿಫಾರಂ ಧರಿಸಿದರೆ ಸಾಲಲ್ಲ”…. ಅಂತ ಸೇನಾ ತರಬೇತಿಯ ರುಚಿ ನೋಡುತ್ತಿರುವ ಕಂಗನಾ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
