ಸೋನಾಭದ್ರ (ಉತ್ತರಪ್ರದೇಶ):ತಾಯಿಯನ್ನು ದೇವರಿಗೆ ಹೋಲಿಸಲಾಗುತ್ತೆ. ಏಕೆಂದರೆ ಮಕ್ಕಳಿಗಾಗಿ ಆಕೆ ಪಡುವ ಕಷ್ಟ, ಮಾಡುವ ತ್ಯಾಗ, ಸಹನೆ ಅಷ್ಟಿಷ್ಟಲ್ಲ. ಆದ್ರೆ ಇಲ್ಲೊಬ್ಬ ಮಗ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ:ರಾಜ್ಯದಲ್ಲಿ 2,280 ಕೋಟಿ ರೂ. ಬಂಡವಾಳ ಹೂಡಿಕೆಯ 20 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ, 3,457 ಉದ್ಯೋಗ ಸೃಷ್ಟಿ
ಉತ್ತರಪ್ರದೇಶದ ಸೋನಾಭದ್ರದಲ್ಲಿ ಮೇಕೆಗಳನ್ನು ಮಾರಾಟ ಮಾಡಿದ ವಿಚಾರವಾಗಿ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ತಾಯಿಯನ್ನು ಹೆತ್ತ ತಾಯಿಯನ್ನೇ ಮಗ ಕೊಲೆಗೈದ ಹೃದಯ ವಿದ್ರಾವಕ ಘಟನೆ ನಡೆದಿದೆ.ದೇವಿ (50) ಕೊಲೆಯಾದ ಮಹಿಳೆ. ಕುಶನ್ ಬಿಹಾರಿ ಯಾದವ್ ಕೊಲೆ ಮಾಡಿದವರು.
ವಾಗ್ವಾದ ವೇಳೆ ತಾಯಿಯ ತಲೆಗೆ ಗಟ್ಟಿಯಾದ ವಸ್ತುವಿನಿಂದ ಬಲವಾಗಿ ಹೊಡೆದಿರುವ ಆರೋಪಿ, ದೇಹವನ್ನು ಬಟ್ಟೆಗಳಿಂದ ಮುಚ್ಚಿದ್ದಾನೆ. ನಂತರ ಪೆಟ್ರೋಲ್ ಸುರಿದು ಬೆಂಕಿ ಹಂಚಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತ್ರಿಭುವನ್ ನಾಥ್ ತ್ರಿಪಾಠಿ ಹೇಳಿದ್ದಾರೆ.
ಬೆಂಕಿ ಆವರಿಸುತ್ತಿದ್ದಂತೆ ನೆರೆಹೊರೆಯವರು ಜಮಾಯಿಸಿದ್ದಾರೆ. ತಕ್ಷಣವೇ ಬೆಂಕಿ ಬೆಂಕಿಯನ್ನು ನಂದಿಸಿದರಾದರೂ, ಆದರೆ ಅಷ್ಟರಲ್ಲಿ ಮಹಿಳೆ ಸಾವನ್ನಪ್ಪಿದ್ದಳು ಎಂದು ತಿಳಿಸಿದ್ದಾರೆ. ಪೊಲೀಸರು ಆರೋಪಿ ಕುಶನ್ ಬಿಹಾರಿ ಯಾದವ್ ಬಂಧಿಸಿದ್ದಾರೆ. ಕಮಲೇಶ್ ದೇವಿ ತನ್ನ ಮಗ ಮತ್ತು ಸೊಸೆಯೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಸಿಎಂಗೆ ನನ್ನ ಕಾಳಜಿ ಅರ್ಥವಾಗಿರಲಿಲ್ಲ, ಗಂಡಾಂತರ ಮೈಮೇಲೆ ಎಳೆದುಕೊಂಡ್ರು: ಪ್ರತಾಪ್ ಸಿಂಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + fourteen =
Remember me
