ನವದೆಹಲಿ:ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ದೇಶೀಯವಾಗಿ ತಯಾರಾದ ಶಸ್ತ್ರಗಳನ್ನೇ ಖರೀದಿಸಬೇಕು ಎಂಬ ಸರ್ಕಾರ ಆದೇಶದಿಂದ ಸೇನಾಪಡೆಗಳು ಶಸ್ತ್ರ ಕೊರತೆಯನ್ನು ಎದುರಿಸುವಂತಾಗಿದೆ. ಪಾಕ್ ಮತ್ತು ಚೀನಾಗಳಿಂದ ಬೆದರಿಕೆ ತೀವ್ರವಾಗಿ ಇರುವ ಈ ಕಾಲಘಟ್ಟದಲ್ಲಿ ಶಸ್ತ್ರಗಳ ಕೊರತೆಯು ಭಾರತವನ್ನು ಅಪಾಯಕ್ಕೆ ದೂಡಬಹುದು ಎಂದು ರಕ್ಷಣಾ ಕಾರ್ಯತಂತ್ರ ವಿಶ್ಲೇಷಕರು ಎಚ್ಚರಿಸಿದ್ದಾರೆ. ಈ ನೀತಿಯ ಕಾರಣ ಸೇನಾಪಡೆಗಳು 2026ರೊಳಗೆ ಹೆಲಿಕಾಪ್ಟರ್ ಕೊರತೆ, 2030ರ ಹೊತ್ತಿಗೆ ಯುದ್ದ ವಿಮಾನಗಳ ಕೊರತೆ ಎದುರಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗುತ್ತಿದ್ದಂತೆ ಮೇಕ್ ಇನ್ ಇಂಡಿಯಾ ನೀತಿಯನ್ನು ಜಾರಿ ಮಾಡಿದರು. ಇದರ ಅನ್ವಯ ಸೇನೆಗೆ ಸಂಬಂಧಿಸಿದ ಪರಿಕರಗಳನ್ನು ವಿದೇಶದಿಂದ ಖರೀದಿಸಿದರೂ ಶೇ. 30ರಿಂದ 60ರಷ್ಟು ತಯಾರಿಕೆಯು ಭಾರತದಲ್ಲೇ ಆಗಬೇಕು. ಇದರಿಂದ ಉದ್ಯೋಗ ಸೃಷ್ಟಿ ಮತ್ತು ವಿದೇಶಿ ವಿನಿಮಯದಲ್ಲಿ ಉಳಿತಾಯ ಆಗುತ್ತದೆ ಎಂದು ಹೇಳಿದ್ದರು. ಆದರೆ, ಪ್ರಧಾನಿ ಹೇಳಿದಷ್ಟು ವೇಗದಲ್ಲಿ ಭಾರತದಲ್ಲಿ ಶಸ್ತ್ರಾಸ್ತ್ರಗಳು, ಯುದ್ಧೋಪಕರಣಗಳು, ಸೇನಾ ವಾಹನಗಳು ತಯಾರಿಕೆ ಆಗುತ್ತಿಲ್ಲ. ಇದೇ ವೇಳೆ ವಿದೇಶದಿಂದ ಆಯುಧಗಳನ್ನು ಖರೀದಿಸಲು ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ. ಹೀಗಾಗಿ ಸೇನೆ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸಮಸ್ಯೆ ಗಂಭೀರ:ಡೀಸೆಲ್-ಎಲೆಕ್ಟ್ರಿಕ್ ಚಾಲಿತ ಅವಳಿ ಇಂಜಿನ್ ಹೊಂದಿರುವ ಜಲಾಂತಗಾರ್ವಿುಯನ್ನು ದೇಶೀಯವಾಗಿ ತಯಾರು ಮಾಡಲು ಆಗಿಲ್ಲ. ದೇಶೀಯವಾಗಿ ಸಿದ್ಧವಾದ ಏಕ ಇಂಜಿನ್ ಯುದ್ಧ ವಿಮಾನವನ್ನು ಸೇನಾಪಡೆಗಳು ಖರೀದಿಸಬೇಕು ಎಂಬ ಧೋರಣೆಯನ್ನು ಸರ್ಕಾರ ಹೊಂದಿರುವ ಕಾರಣ ಈ ಮಾದರಿಯ ವಿದೇಶಿ ಯುದ್ಧ ವಿಮಾನ ಖರೀದಿಗೆ ಅವಕಾಶ ಆಗುತ್ತಿಲ್ಲ. ಅವಳಿ ಇಂಜಿನ್​ನ ಯುದ್ಧ ವಿಮಾನಗಳು ಭಾರತದಲ್ಲಿ ತಯಾರೇ ಆಗುತ್ತಿಲ್ಲ. ಇದರಿಂದ ವಾಯುಪಡೆ 2030ರ ವೇಳೆಗೆ ತೀವ್ರ ಸಂಕಷ್ಟಕ್ಕೆ ಗುರಿಯಾಗಲಿದೆ. ಅದರ ಸ್ಕಾ್ವಡ್ರನ್​ಗಳಲ್ಲಿ ಯುದ್ಧ ವಿಮಾನಗಳ ಸಂಖ್ಯೆ 30 ಇಳಿಕೆ ಆಗುತ್ತದೆ. 16ರಿಂದ 18 ಯುದ್ಧ ವಿಮಾನಗಳನ್ನು ನಿವೃತ್ತಗೊಳಿಸುವ ಅನಿವಾರ್ಯ ಕೂಡ ಎದುರಾಗುತ್ತದೆ. ಇದರಿಂದ 48 ಯುದ್ಧ ವಿಮಾನಗಳ ಕೊರತೆ ವಾಯುಪಡೆಗೆ ಈ ದಶಕದ ಅಂತ್ಯದಲ್ಲಿ ಕಾಡುತ್ತದೆ.
ಪಾಕ್​ಗೆ ಅಮೆರಿಕದಿಂದ ಎಫ್-16 ಯುದ್ಧ ವಿಮಾನ:ಪಾಕಿಸ್ತಾನಕ್ಕೆ 450 ಮಿಲಿಯನ್ ಡಾಲರ್ (3,584 ಕೋಟಿ ರೂ.) ಮೊತ್ತದ ಎಫ್-16 ಯುದ್ಧ ವಿಮಾನಗಳನ್ನು ಪೂರೈಸಲು ಅಮೆರಿಕ ಸಮ್ಮತಿಸಿದೆ. ಭಯೋತ್ಪಾದನಾ ನಿಗ್ರಹದ ಉದ್ದೇಶದ ಈ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತ ಅನುಮೋದನೆ ನೀಡಿದ್ದು, ನಾಲ್ಕು ವರ್ಷಗಳ ತರುವಾಯ ಪಾಕ್​ಗೆ ರಕ್ಷಣಾ ಸಹಕಾರವನ್ನು ಒದಗಿಸುತ್ತಿದೆ ಎಂದು ವಿದೇಶಾಂಗ ಇಲಾಖೆಯ ಹೇಳಿಕೆ ತಿಳಿಸಿದೆ.ಅಫ್ಘನ್​ನಲ್ಲಿ ತಾಲಿಬಾನ್​ಗಳು ಮತ್ತು ಹಕ್ಕಾನಿ ಉಗ್ರರ ಗುಂಪಿನ ವಿರುದ್ಧ ಪಾಕ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲವೆಂದು ಕುಪಿತಗೊಂಡಿದ್ದ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2018ರಲ್ಲಿ ಪಾಕ್​ಗೆ 2 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಸಹಕಾರವನ್ನು ಸ್ಥಗಿತಗೊಳಿಸಿದ್ದರು.
ಹೆಲಿಕಾಪ್ಟರ್​ಗಳ ಸಮಸ್ಯೆ:ಸೇನೆಯ ಮೂರೂ ಪಡೆಗಳಲ್ಲಿ ಈಗಾಗಲೇ ಲಘು ಹೆಲಿಕಾಪ್ಟರ್​ಗಳ ಸಂಖ್ಯೆ ಕಡಿಮೆ ಇದೆ. ಈಗ ಬಳಕೆಯಲ್ಲಿರುವುದು ಕೂಡು 50 ವರ್ಷದ ಹಿಂದೆ ಅಭಿವೃದ್ಧಿಗೊಳಿಸಲಾಗದ ಫ್ರಾನ್ಸ್ ನಿರ್ಮಾಣ ಹೆಲಿಕಾಪ್ಟರ್​ಗಳು. ಇದರಲ್ಲಿ ಶೇ. 80ರಷ್ಟು ಏಕ ಇಂಜಿನ್​ನ ಈ ಕಾಪ್ಟರ್​ಗಳನ್ನು 2026ರ ಹೊತ್ತಿಗೆ ನಿವೃತ್ತಿಗೊಳಿಸಬೇಕು. ಆದರೆ, ದೇಶೀಯವಾಗಿ ತಯಾರಾಗುತ್ತಿರುವ ಹೆಲಿಕಾಪ್ಟರ್​ಗಳು ಬಳಕೆಗೆ ಸಿದ್ಧವಾಗುವುದು 2030ರ ಹೊತ್ತಿಗೆ. ಹೀಗಾಗಿ ನಾಲ್ಕು ವರ್ಷದ ಕಾಲಾವಧಿಯಲ್ಲಿ ಹೆಲಿಕಾಪ್ಟರ್ ಅಗತ್ಯದ ಗತಿ ಏನು ಎಂಬ ಪ್ರಶ್ನೆ ಇದೆ. ಹಳೆಯ ಹೆಲಿಕಾಪ್ಟರ್​ಗಳ ಬಳಕೆಯಿಂದ ಯೋಧರ ಜೀವಕ್ಕೆ ಆಪತ್ತು ಎದುರಾಗಬಹುದು.
ಎಚ್​ಎಎಲ್ ಮೇಲೆ ಅವಲಂಬನೆ:ಭಾರತದಲ್ಲಿ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇರುವುದು ಬೆಂಗಳೂರು ಮೂಲದ ಹಿಂದುಸ್ತಾನ್ ಏರೋನಾಟಿಕ್ಸ್ ಕಂಪನಿಗೆ (ಎಚ್​ಎಎಲ್) ಮಾತ್ರ. ಇದೂ ಕೂಡ ವರ್ಷಕ್ಕೆ ಎಂಟು ತೇಜಸ್ ವಿಮಾನಗಳನ್ನು ತಯಾರು ಮಾಡಬಹುದು. ಎಚ್​ಎಎಲ್ 2026ರಿಂದ ತಯಾರಿಕಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದೆ. ಆದರೆ ಸಂಭಾವ್ಯ ವಿಳಂಬ, ಪೂರೈಕೆ ಸರಪಳಿಯಲ್ಲಿನ ಅಡಚಣೆಯಿಂದ ಈ ಗುರಿ ಏರುಪೇರಾಗುವ ಸಾಧ್ಯತೆ ಇದೆ.
ಅರುಣಾಚಲ ಗಡಿಗೆ ಎಂ-777 ತುಪಾಕಿ:ಎಂ-777 ತುಪಾಕಿಗಳನ್ನು ಅರುಣಾಚಲ ಪ್ರದೇಶದ ಚೀನಾ ಗಡಿಗೆ ಭಾರತದ ಸೇನೆ ನಿಯೋಜಿಸಿದೆ. ಅತಿ ಹಗುರವಾದ ಈ ತುಪಾಕಿಗಳನ್ನು ಕೊಂಡೊಯ್ಯುವುದು ಸರಾಗವಾಗಿರುವ ಕಾರಣ ಪರ್ವತ ಪ್ರದೇಶಗಳಲ್ಲಿ ಇವುಗಳ ಬಳಕೆಯನ್ನು ಹೆಚ್ಚಿಸಲಾಗಿದೆ. ಇದೊರೊಟ್ಟಿಗೆ ಮಾನವ ರಹಿತ ವೈಮಾನಿಕ ಸಾಧನಗಳನ್ನು ಅರುಣಾಚಲ ಪ್ರದೇಶದ ಗಡಿಗೆ ಕಳುಹಿಸಲಾಗಿದೆ. ಎಂ-777 ತುಪಾಕಿಗಳನ್ನು ಈಗಾಗಲೇ ಲಡಾಖ್ ವಲಯದಲ್ಲಿ ನಿಯೋಜಿಸ ಲಾಗಿದ್ದು, ಉತ್ತಮ ರೀತಿಯ ಕಾರ್ಯಕ್ಷಮತೆ ಹೊಂದಿವೆ ಎಂದು ಸೇನೆ ಹೇಳಿದೆ.
ಗೋಗ್ರಾ ಗಡಿಯಿಂದ ಭಾರತ-ಚೀನಾ ಸೇನೆ ವಾಪಸ್:ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತ ಮತ್ತು ಚೀನಾ ಪೂರ್ವ ಲಡಾಖ್​ನ ಗಸ್ತು ಪಾಯಿಂಟ್ 15ರಲ್ಲಿರುವ ಗೋಗ್ರಾ -ಹಾಟ್​ಸ್ಪ್ರಿಂಗ್ ಪ್ರದೇಶದಿಂದ ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿವೆ. ಹಾಗೆಯೇ ಉಭಯ ದೇಶಗಳು ಗುರುವಾರ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ವರ್ಷದ ಜುಲೈ 17ರಂದು ನಡೆದ ಭಾರತ-ಚೀನಾ ಕಮಾಂಡರ್ ಮಟ್ಟದ 16ನೇ ಸುತ್ತಿನ ಸಭೆಯಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಒಮ್ಮತಕ್ಕೆ ಬರಲಾಯಿತು ಎಂದು ತಿಳಿಸಿವೆ. ಭಾರತ ಮತ್ತು ಚೀನಾದ ಸೇನೆಗಳು ಪಿಪಿ-15ನಿಂದ ಸಂಘಟಿತ ಮತ್ತು ಯೋಜಿತ ರೀತಿಯಲ್ಲಿ ಹಿಂದಕ್ಕೆ ಬರಲಿವೆ. ಇದರಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ. ಉಜ್ಬೇಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್​ಸಿಒ) ವಾರ್ಷಿಕ ಶೃಂಗಸಭೆ ಶೀಘ್ರದಲ್ಲೇ ನಡೆಯಲಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೇನಾ ವಾಪಸಾತಿ ಘೋಷಣೆಯು ಮಹತ್ವ ಪಡೆದುಕೊಂಡಿದೆ.
ನೌಕಾದಳದ ಸವಾಲು:ನೌಕಾದಳದಲ್ಲಿ ಜಲಾಂತಗಾರ್ವಿು ಗಳಿಗೆ ಅಗತ್ಯವಾದ ಭಾರಿ ಪ್ರಮಾಣದ ಟಾರ್ಪಿಡೊಗಳನ್ನು ಖರೀದಿಸಿ ನಾಲ್ಕು ದಶಕಗಳಾಗಿವೆ. ಈ ಮಧ್ಯೆ, ಡಿಆರ್​ಡಿಒ ಹೆವಿವೇಯ್ಟ ಟಾರ್ಪಿಡೊಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಆದರೆ, ಇದಕ್ಕೆ ನಿಗದಿತ ಕಾಲಾವಧಿಯನ್ನು ಹಾಕಿಕೊಂಡಿಲ್ಲ. ಹೀಗಾಗಿ ಇದು ಯಾವಾಗ ನೌಕಾದಳಕ್ಕೆ ಅಡಕವಾಗುತ್ತದೆ ಎಂದು ಹೇಳಲು ಆಗುವುದಿಲ್ಲ.
ಬಾಲಾಸೋರ್:ರಕ್ಷಣಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮತ್ತು ಭಾರತೀಯ ಸೇನೆ ತ್ವರಿತ ಸ್ಪಂದನೆಯ ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯ (ಕ್ಯೂಆರ್​ಎಸ್​ಎಎಂ) ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ಬಾಲಾಸೋರ್ ಜಿಲ್ಲೆಯ ಚಾಂದಿಪುರ್​ದ ಸಮಗ್ರ ಪರೀಕ್ಷಾ ವಲಯದಲ್ಲಿ ಗುರುವಾರ ಯಶಸ್ವಿಯಾಗಿ ನಡೆಸಿವೆ. ಡಿಆರ್​ಡಿಒ ಅಭಿವೃದ್ಧಿ ಪಡಿಸಿರುವ ಕ್ಯೂಆರ್​ಎಸ್​ಎಎಂ ಕಡಿಮೆ ಅಂತರದ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಶಸ್ತ್ರಾಸ್ತ್ರ, ಯುದ್ಧ ಸಲಕರಣಗಳ ಸಾಗಣೆ ವೇಳೆ ನಡೆಯುವ ವೈಮಾನಿಕ ದಾಳಿಯಿಂದ ರಕ್ಷಣೆ ನೀಡುವುದು ಇದರ ಉದ್ದೇಶ ಆಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕ್ಯೂಆರ್​ಎಸ್​ಎಎಂನ ಆರನೇ ಪರೀಕ್ಷೆಯನ್ನು ಅತಿ ವೇಗದ ವಿವಿಧ ರೀತಿಯಲ್ಲಿ ಸಂಭಾವ್ಯವಾಗುವ ವೈಮಾನಿಕ ಗುರಿಯನ್ನು ಇರಿಸಿಕೊಂಡು ನಡೆಸಲಾಯಿತು. ಹಗಲು ಮತ್ತು ರಾತ್ರಿ ಹೊತ್ತಿನಲ್ಲಿ ಇದರ ಕಾರ್ಯಕ್ಷಮತೆಯನ್ನು ಪರೀಕ್ಷೆಯ ಮೂಲಕ ಅಳೆಯಲಾಯಿತು. ಈ ಪರೀಕ್ಷೆಯಲ್ಲಿ ಕ್ಷಿಪಣಿಯು ಅತ್ಯಂತ ನಿಖರವಾಗಿ ಒಂದಿನಿತು ವ್ಯತ್ಯಾಸ ವಾಗದಂತೆ ಗುರಿಯನ್ನು ಭೇದಿಸಿತು. ಇದನ್ನು ಟೆಲಿಮಿಟ್ರಿ, ರೇಡಾರ್, ಆಪ್ಟಿಕಲ್ ಟ್ರಾ್ಯಕಿಂಗ್ ಸಿಸ್ಟಂಗಳು ಖಚಿತ ಪಡಿಸಿವೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + ten =
Remember me
