ನವದೆಹಲಿ:ಚೀನಾಕ್ಕೆ ಹೊಂದಿಕೊಂಡಿರುವ ವಾಸ್ತವ ಗಡಿರೇಖೆಯಲ್ಲಿ ಲೇಹ್​ನಿಂದ ಲಡಾಖ್​ವರೆಗೆ 4 ಕಡೆಗಳಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಜಟಾಪಟಿ ಸಂಭವಿಸುತ್ತಲೇ ಇದೆ. ಈ ಜಟಾಪಟಿಯನ್ನು ಕೊನೆಗೊಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಸೇನಾಧಿಕಾರಿಗಳು 5 ಸುತ್ತಿನ ಮಾತುಕತೆ ನಡೆಸಿದ್ದರೂ ಅವೆಲ್ಲವೂ ವಿಫಲವಾಗಿವೆ ಎನ್ನಲಾಗಿದೆ. ಇದರಿಂದಾಗಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರ್ವಾನೆ ಶುಕ್ರವಾರ ಲೇಹ್​ಗೆ ದಿಢೀರ್​ ಭೇಟಿ ನೀಡಿ, ಲಡಾಖ್​ನ 14 ಕೋರ್​ನ ಪ್ರಧಾನ ಕೇಂದ್ರಕ್ಕೆ ಭೇಟಿ ನೀಡಿದ್ದರು. ವಾಸ್ತವ ಗಡಿರೇಖೆಯಲ್ಲಿ ಇರುವ ವಿವಾದಾತ್ಮಕ ಸ್ಥಳಗಳಲ್ಲಿನ ಕಾರ್ಯಾಚರಣೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಅಂದಾಜು ಅರ್ಧ ದಿನ ಅಲ್ಲಿದ್ದ ಅವರು 14 ಕೋರ್​ನ ಮುಖ್ಯಸ್ಥರ ಜತೆಗೆ ವಿಸ್ತೃತ ಮಾತುಕತೆ ನಡೆಸಿದರು ಎನ್ನಲಾಗಿದೆ.
ಇದನ್ನೂ ಓದಿ:ಪಾಕ್​ ವಿಮಾನ ಅಪಘಾತದಲ್ಲಿ ಬದುಕುಳಿದವನಿಗೆ ಇದೆ ಭಾರತದ ಕನೆಕ್ಷನ್​!
ಸಾಮಾನ್ಯವಾಗಿ ಲೇಹ್​ ಮತ್ತು ಲಡಾಖ್​ ಪ್ರದೇಶಗಳಿಗೆ ಸೇನಾಪಡೆ ಮುಖ್ಯಸ್ಥರು ಭೇಟಿ ಕೊಡುತ್ತಾರೆ ಎಂದರೆ ಆ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿರುತ್ತದೆ. ಆದರೆ, ಈ ಬಾರಿ ಜನರಲ್​ ಎಂ.ಎಂ. ನರ್ವಾನೆ ಅವರ ದಿಢೀರ್​ ಭೇಟಿ ಅಚ್ಚರಿಗೆ ಕಾರಣವಾಗಿದೆ. ಉತ್ತರ ಕಮಾಂಡ್​ನ ಮುಖ್ಯಸ್ಥ ಲೆಫ್ಟಿನೆಂಟ್​ ಜನರಲ್​ ವೈ.ಕೆ. ಜೋಶಿ ಅವರು ಸೇನಾಪಡೆ ಮುಖ್ಯಸ್ಥರಿಗೆ ಸಾಥ್​ ನೀಡಿದ್ದರು. ಆದರೆ ಇವರಿಬ್ಬರು ಸೇನಯ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಲಿಲ್ಲ ಎಂದು ಹೇಳಲಾಗಿದೆ.
ಭಾರತ ಮತ್ತು ಚೀನಾ ವಾಸ್ತವ ಗಡಿರೇಖೆ ಬಳಿ ಹೆಚ್ಚುವರಿ ಸೇನಾಪಡೆಯನ್ನು ಜಮಾವಣೆಗೊಳಿಸಿವೆ. ಲಡಾಖ್​ನ ಪೂರ್ವ ಭಾಗದ ಪ್ಯಾಂಗಾಂಗ್​ ತ್ಸೋದ ಉತ್ತರ ತಟ, ಡೆಮ್ಚಾಕ್​ ಮತ್ತು ಗಲ್ವಾನ್​ ಕಣಿವೆ ಪ್ರದೇಶ ಸೇರಿ ಒಟ್ಟು ಮೂರು ಸ್ಥಳಗಳಲ್ಲಿ ಉಭಯ ರಾಷ್ಟ್ರಗಳು ಸೇನೆ ಜಮಾವಣೆಗೊಂಡಿರುವುದಾಗಿ ಹೇಳಲಾಗುತ್ತಿದೆ. ಈ ಭಾಗಗಳಲ್ಲಿ ಮೇ 5 ಮತ್ತು 6ರಂದು ಭಾರತ ಮತ್ತು ಚೀನಾದ ಅಂದಾಜು 250 ಯೋಧರು ಪರಸ್ಪರ ಹೊಯ್​ಕೈ ನಡೆಸಿದ್ದರು. ಅಲ್ಲದೆ, ಕಲ್ಲು ತೂರಾಟ ಮಾಡಿದ್ದರಿಂದ, ಕೆಲ ಯೋಧರು ಗಾಯಗೊಂಡಿದ್ದರು. ಆನಂತರದಲ್ಲಿ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.
PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 17 =
Remember me
