ನವದೆಹಲಿ:ವ್ಯಕ್ತಿಯೊಬ್ಬನ ಬಳಿ ಲೈಟರ್​ ಕೇಳಿದ ಸೇನಾ ಕರ್ನಲ್​ಗೆ ಮೂವರು ಹಿಗ್ಗಾಮುಗ್ಗಾ ಥಳಿಸಿ, ಮೊಬೈಲ್ ಮತ್ತು 10,000 ರೂ. ನಗದು ದೋಚಿದ ಘಟನೆ ದೆಹಲಿಯ ಮಾಳವೀಯ ನಗರದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಸೆ.16ರಂದು ನುಲಿಯ ಚಂದಯ್ಯ ಜಯಂತಿ: ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ಮಾಹಿತಿ
ದಕ್ಷಿಣ ದೆಹಲಿಯ ಮಾಳವೀಯ ನಗರ ಪ್ರದೇಶದಲ್ಲಿ 48 ವರ್ಷದ ಸೇನಾ ಕರ್ನಲ್‌ಗೆ ಮೂವರು ವ್ಯಕ್ತಿಗಳು ಥಳಿಸಿ, ಅವರ ಕಾರಿನಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ದೂರು ದಾಖಲಿಸಿಕೊಂಡ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ:ಚಾಣಕ್ಯಪುರಿ ನಿವಾಸಿಯಾಗಿರುವ ದೂರುದಾರ ವಿನಿತ್ ಮಹತೋ, ರಾತ್ರಿ 11.30ರ ಸುಮಾರಿಗೆ ತ್ರಿವೇಣಿ ಕಾಂಪ್ಲೆಕ್ಸ್‌ಗೆ ಆಗಮಿಸಿದ್ದರು. ಈ ವೇಳೆ ಸ್ಥಳದಲ್ಲೇ ನಿಂತಿದ್ದ ವ್ಯಕ್ತಿಯ ಹತ್ತಿರ ಲೈಟರ್​ ಕೊಡಿ ಎಂದು ಕೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿ ತನ್ನ ಮತ್ತಿಬ್ಬರ ಸ್ನೇಹಿತರನ್ನು ಕರೆಸಿ, ವ್ಯಕ್ತಿಗೆ ಥಳಿಸಿದ್ದಾರೆ. ತದನಂತರ ಅವರ ಕಾರಿನಲ್ಲಿದ್ದ ಬೆಲೆ ಬಾಳುವ ವಸ್ತುಗಳು ಮತ್ತು 10 ಸಾವಿರ ರೂ. ನಗದನ್ನು ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ:ಆಂಧ್ರ ವಿಧಾನಸಭೆ ಚುನಾವಣೆಗೆ ಟಿಡಿಪಿ-ಜನಸೇನಾ ಮೈತ್ರಿ: ನಟ ಪವನ್​ ಕಲ್ಯಾಣ್​
ಚಾಣಕ್ಯಪುರಿ ನಿವಾಸಿಯಾಗಿರುವ ದೂರುದಾರ ವಿನಿತ್ ಮಹತೋ ಬುಧವಾರ (ಸೆ.13) ಮಾಳವೀಯ ನಗರ ಠಾಣೆಗೆ ಬಂದು, ಮಂಗಳವಾರ (ಸೆ.12) ಸೆಮಿನಾರ್‌ ಮುಗಿಸಿ, ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಮಾಳವೀಯ ನಗರದ ತ್ರಿವೇಣಿ ಕಾಂಪ್ಲೆಕ್ಸ್‌ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 394 (ಸ್ವಯಂಪ್ರೇರಿತವಾಗಿ ದರೋಡೆ ಮಾಡುವಲ್ಲಿ ಗಾಯಗೊಳಿಸುವುದು), 411 (ಕದ್ದ ಆಸ್ತಿಯನ್ನು ಅಪ್ರಾಮಾಣಿಕವಾಗಿ ಸ್ವೀಕರಿಸುವುದು) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
ಇದನ್ನೂ ಓದಿ:ಸೆ.20ರಂದು ಜಿಲ್ಲಾಮಟ್ಟದ ಗಾಯನ ಸ್ಪರ್ಧೆ: ನಾಡೋಜ ಜಿ.ನಾರಾಯಣ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜನೆ
ಪ್ರಕರಣದ ಆರೋಪಿಗಳಾದ ಮಿಥುನ್ ಅಲಿಯಾಸ್ ದೀಪಕ್ (22) ಮತ್ತು ಮುಕುಲ್ (28) ಎಂದು ಗುರುತಿಸಲಾದ ಇಬ್ಬರನ್ನು ತನಿಖೆಯ ಸಮಯದಲ್ಲಿ ಬಂಧಿಸಲಾಗಿದ್ದು, ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಮೂರನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).
‘ಜವಾನ್’​ ಹೊಗಳಿದ ಅಲ್ಲು ಅರ್ಜುನ್; 3 ದಿನಗಳಲ್ಲಿ ಮೂರು ಬಾರಿ ‘ಪುಷ್ಪ’ ಸಿನಿಮಾ ನೋಡಿದ್ದೇನೆ ಎಂದ ಕಿಂಗ್​ ಖಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
