ನವದೆಹಲಿ: ಇಲ್ಲಿನ ನರೇಲಾ ಪ್ರದೇಶದಲ್ಲಿರುವ ಕ್ವಾರಂಟೈನ್​ ಕೇಂದ್ರದಲ್ಲಿ ಸಾವಿರಕ್ಕೂ ಅಧಿಕ ಶಂಕಿತರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಆ ಮೂಲಕ ಇದು ದೇಶದ ಅತಿದೊಡ್ಡ ಕ್ವಾರಂಟೈನ್​ ಕೇಂದ್ರ ಎನಿಸಿದೆ. ವಿಶೇಷವೆಂದರೆ ಈ ಪೈಕಿ 932 ಜನರು ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡವರು. ಅವರಲ್ಲಿ 367 ಜನರರು ಈಗಾಗಲೇ ಕೋವಿಡ್​-19 ರೋಗಕ್ಕೆ ತುತ್ತಾಗಿದ್ದಾರೆ. ತಬ್ಲಿಘಿ ನಂಟಿನ ಅತಿ ಹೆಚ್ಚು ಸೋಂಕಿತರು ಹಾಗೂ ಶಂಕಿತರು ಇರುವುದು ಕೂಡ ಇದೇ ಕೇಂದ್ರದಲ್ಲಿ.
ಇನ್ನಷ್ಟು, ವಿಶದವಾಗಿ ಹೇಳುವುದಾದರೆ, ಕೆಲ ವಾರಗಳ ಹಿಂದೆ ಕ್ವಾರಂಟೈನ್​ ವಿಧಿಸಲಾಗಿದ್ದ ಕೊಠಡಿ ಎದುರು ಮಲ ವಿಸರ್ಜಿಸಿ ವಿಕೃತಿ ಮೆರೆದಿದ್ದ ತಬ್ಲಿಘಿಗಳಿದ್ದದ್ದು ಇದೇ ಕ್ವಾರಂಟೈನ್​ ಕೇಂದ್ರದಲ್ಲಿ. ಅಲ್ಲದೇ, ಕೆಲ ತಬ್ಲಿಘಿಗಳು ಬಾಟಲಿಯಲ್ಲಿ ಮೂತ್ರ ತುಂಬಿಸಿ ಎಸೆದಿದ್ದರು. ಇಲ್ಲಿನ ಆಸ್ಪತ್ರೆಯೊಂದರ ಶಸ್ತ್ರ ಚಿಕಿತ್ಸಾ ಕೊಠಡಿ ಬಳಿ ಉಗಿದಿದ್ದರು. ಇವರನ್ನು ನಿಯಂತ್ರಿಸುವುದೇ ವೈದ್ಯರು, ದಾದಿಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತ್ತು.
ಇದೀಗ ಈ ಕೇಂದ್ರಕ್ಕೆ ಸೇನಾ ವೈದ್ಯಾಧಿಕಾರಿಗಳನ್ನು ನೇಮಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಈ ವೈದ್ಯಾಧಿಕಾರಿಗಳ ತಂಡ ಇಲ್ಲಿನ ರೋಗಿಗಳ ಯೋಗಕ್ಷೇಮ ನೋಡಿಕೊಳ್ಳಲಿದೆ. ಒಟ್ಟು 40 ಜನರ ತಂಡದಲ್ಲಿ 6 ವೈದ್ಯಾಧಿಕಾರಿಗಳು, 18 ಅರೆ ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ. ಇವರು ಐಸೋಲೇಷನ್​ ವಾರ್ಡ್​ಗಳ ನಿರ್ವಹಣೆಯನ್ನು ನೋಡಿಕೊಳ್ಳಲಿದ್ದಾರೆ. ಇದು ದೆಹಲಿಯ ಸರ್ಕಾರಿ ವೈದ್ಯರಿಗೆ ಭಾರಿ ನಿರಾಳತೆ ಒದಗಿಸಿದೆ.
ಆರಂಭದಲ್ಲಿ ಇಲ್ಲಿ 250 ವಿದೇಶಿಯರನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಆದರೆ, ಜಮಾತ್​ನಲ್ಲಿ ಪಾಲ್ಗೊಂಡವರಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಅಲ್ಲಿದ್ದ ಸಾವಿರಕ್ಕೂ ಹೆಚ್ಚು ತಬ್ಲೀಘಿಗಳನ್ನು ಇಲ್ಲಿಗೆ ತಂದು ಕ್ವಾರಂಟೈನ್​ನಲ್ಲಿ ಇಡಲಾಗಿದೆ.ಸೇನಾ ವೈದ್ಯರು ನಿಯೋಜನೆಗೊಂಡ ಬಳಿಕ ಅವರ ವೃತ್ತಿಪರ ಬದ್ಧತೆಯಿಂದಾಗಿ ಇಲ್ಲಿರುವವರ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದೆ ಎಂದು ಹೇಳಲಾಗಿದೆ.
ದೇಶಾದ್ಯಂತ 4000ಕ್ಕೂ ಅಧಿಕ ಸೋಂಕಿತರು ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡವರು ಅಥವಾ ಪಾಲ್ಗೊಂಡಿದ್ದವರೊಂದಿಗೆ ನಂಟು ಹೊಂದಿದ್ದವರೇ ಆಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ವಲಸೆ, ದಿನಗೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಸಿಕ್ತು ರಿಲೀಫ್​, ಅಂತರ ಜಿಲ್ಲೆ ಸಂಚಾರಕ್ಕೂ ಅನುಮತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
