ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ನಲ್ಲಿ ಭಯೋತ್ಪಾದಕರ ಮೇಲೆ ನಡೆದ ಎನ್​ಕೌಂಟರ್ ಸಂದರ್ಭದಲ್ಲಿ ಸೇನೆಯ ಶ್ವಾನ ಗಾಯಗೊಂಡಿತ್ತು. ‘ಝೂಮ್’ ಹೆಸರಿನ ಶ್ವಾನವನ್ನು ನಂತರ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇದೀಗ ಗಾಯಗೊಂಡಿದ್ದ ಭಾರತೀಯ ಸೇನೆಯ ಶ್ವಾನ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಗಾಯಗೊಂಡಿದ್ದ ಶ್ವಾನವನ್ನು ಶ್ರೀನಗರದ ಪಶುವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಚೇತರಿಸಿಕೊಳ್ಳುತ್ತಿದ್ದ ಶ್ವಾನ, ಇಂದು (ಅ.13) ಹಠಾತ್ತನೆ ಉಸಿರಾಟ ನಿಲ್ಲಿಸಿದೆ. ಅನಂತ್​ನಾಗ್​ನ ಕೋಕಾರ್​ನಾಗ್​ನಲ್ಲಿ ನಡೆದ ಭಯೋತ್ಪಾದಕರ ಮೇಲಿನ ಕಾರ್ಯಾಚರಣೆಯ ಸಂದರ್ಭದಲ್ಲಿ ಎರಡು ಗುಂಡುಗಳು ಶ್ವಾನ ದೇಹದೊಳಕ್ಕೆ ಹೊಕ್ಕು, ಗಂಭೀರ ಗಾಯವಾಗಿತ್ತು ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ವೇಳೆ ಶ್ವಾನ ಗಂಭೀರ ಗಾಯಗೊಂಡಿದ್ದರೂ, ಉಗ್ರರ ವಿರುದ್ಧ ಹೋರಾಡಿದೆ. ಆಪರೇಷನ್ ಟ್ಯಾಂಗ್ಪಾವಾಸ್​ ತಂಡದ ಪ್ರಮುಖ ಸದಸ್ಯರಲ್ಲಿ ಈ ಶ್ವಾನವೂ ಒಂದಾಗಿತ್ತು ಎಂದು ಹೇಳಿದ್ದಾರೆ.(ಏಜೆನ್ಸೀಸ್)
Army Assault Canine 'Zoom' laid down his life in the line of duty. He suffered gunshot wounds during Op Tangpawa on 09 Oct 22 where he fought gallantly with terrorists, saving lives of soldiers. His selfless commitment and service to the Nation will be remembered forever.pic.twitter.com/R6i7Cv5WG5— Chinar Corps🍁 – Indian Army (@ChinarcorpsIA)October 13, 2022
Army Assault Canine 'Zoom' laid down his life in the line of duty. He suffered gunshot wounds during Op Tangpawa on 09 Oct 22 where he fought gallantly with terrorists, saving lives of soldiers. His selfless commitment and service to the Nation will be remembered forever.pic.twitter.com/R6i7Cv5WG5
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
