ನವದೆಹಲಿ:ಅತ್ತ ಭಾರತ- ಚೀನಾ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಿದ್ದರೆ, ಅದಕ್ಕೆ ಕಾರಣವಾಗಿದ್ದ ಸೇತುವೆಯ ಕಾಮಗಾರಿಯೊಂದನ್ನು ಪೂರ್ಣಗೊಳಿಸಿಯೇ ಭಾರತೀಯ ಸೇನಾ ಯೋಧರು ವಿರಮಿಸಿದ್ದಾರೆ.
ಜೂನ್​ 15ರಂದು ಮಧ್ಯರಾತ್ರಿ ಚೀನಾದೊಂದಿಗಿನ ಸಂಘರ್ಷದಲ್ಲಿ 23 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಮಂಗಳವಾರ ಬೆಳಗ್ಗೆ ಯೋಧರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಹುಡುಕಾಟ ಗಾಲ್ವಾನ್​ ನದಿ ತೀರದ ಪ್ರದೇಶದಲ್ಲಿ ನಡೆದಿತ್ತು. ಅದುವರೆಗೆ ಹೊರ ಜಗತ್ತಿಗೆ ಘಟನೆಯ ಭೀಕರತೆಯ ಅರಿವಾಗಿರಲಿಲ್ಲ.
ಇದನ್ನೂ ಓದಿ;ಲಡಾಖ್​ಗೆ ಹರಿಯುವ ಗಾಲ್ವಾನ್​ ನದಿ ದಿಕ್ಕನ್ನೇ ಬದಲಿಸುತ್ತಿದೆ ಚೀನಾ; ಉಪಗ್ರಹ ಚಿತ್ರಗಳಿಂದ ಕುತಂತ್ರ ಬಯಲು
ಆದರೆ, ಗಾಲ್ವಾನ್​ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುತ್ತಿದ್ದ ಸೇನಾ ಇಂಜಿನಿಯರ್​ಗಳಿಗೆ ಸಂಘರ್ಷಕ್ಕೆ ಕಾರಣವಾಗಿರೋದು ಭಾರತ ನಡೆಸುತ್ತಿರುವ ಮೂಲಸೌಕರ್ಯಗಳ ಅಭಿವೃದ್ಧಿಯೇ ಕಾರಣ ಎಂಬುದು ತಿಳಿದಿತ್ತು. ಯೋಧರು ಸಂಘರ್ಷ ನಡೆಸಿದ್ದ ಪ್ರದೇಶದ ಸೇತುವೆ ಒಂದೆರಡು ಕಿಲೋಮೀಟರ್​ಗಳಷ್ಟು ದೂರದಲ್ಲಿತ್ತು.
ಇದ್ಯಾವುದಕ್ಕೂ ಎದೆಗುಂದದ ಭಾರತೀಯ ಸೇನಾ ಇಂಜಿನಿಯರ್​ಗಳು ಸೇತುವೆ ಕಾಮಗಾರಿ ಪೂರ್ಣಗೊಳಿಸಿಯೇ ಸಿದ್ಧ ಎಂದು ಹಠ ತೊಟ್ಟಿದ್ದರು. ಇದಕ್ಕಾಗಿ ಸತತ ಮೂರು ದಿನಗಳವರೆಗೆ ಇನ್ನಿಲ್ಲದ ವೇಗದೊಂದಿಗೆ ಕೆಲಸ ನಡೆಸಿ ಸೇತುವೆ ನಿರ್ಮಾಣ ಮುಗಿಸಿದ್ದಾರೆ.
ಇದನ್ನೂ ಓದಿ;ಸಂದೇಶವೇನು ಇಲ್ಲ, ನಾವು ಉತ್ತರ ಕೊಡೋಕೆ ಸಜ್ಜಾಗಿದ್ದೇವೆ; ಚೀನಾಗೆ ವಾಯುಸೇನೆ ಎಚ್ಚರಿಕೆ
ಭಾರತೀಯ ಯೋಧರಿಗೆ ತ್ವರಿತ ಗತಿಯಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗುವ 60 ಮೀಟರ್​ ಉದ್ದದ ಸೇತುವೆ ಸಂಪರ್ಕ ರಸ್ತೆಯ ಕಾಮಗಾರಿ ಬಾಕಿಯಾಗಿತ್ತು. ಸೋಮವಾರ ಮಧ್ಯರಾತ್ರಿಯ ಸಂಘರ್ಷದ ಬಳಿಕವೂ ಮಂಗಳವಾರ, ಬುಧವಾರ ಹಾಗೂ ಗುರುವಾರ ಕೆಲಸ ನಡೆಸಿದಿ ಇಂಜಿನಿಯರ್​ಗಳು ಗುರುವಾರ ಮಧ್ಯಾಹ್ನದ ವೇಳೆಗೆ ಸೇತುವೆಯನ್ನು ವಾಹನ ಸಂಚಾರಕ್ಕೆ ಸಜ್ಜುಗೊಳಿಸಿದ್ದರು.
ಬೈಲಿ ಬ್ರಿಜ್​ ಎಂದು ಹೇಳಲಾಗುವ ಈ ಲೋಹದ ಸೇತುವೆ ಮಿಲಿಟರಿ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಯಾವುದಕ್ಕೂ ಕಾರಣಕ್ಕೂ ಕಾಮಗಾರಿ ನಿಲ್ಲಕೂಡದು, ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಹಿರಿಯ ಅಧಿಕಾರಿಗಳು ನೀಡಿದ್ದ ಆದೇಶವನ್ನು ಸೇನಾಪಡೆ ಇಂಜಿನಿಯರ್​ಗಳು ಅಕ್ಷರಶಃ ಪಾಲಿಸಿ ಸೇತುವೆ ನಿರ್ಮಾಣ ಮುಗಿಸಿದ್ದಾರೆ.
ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದು; ಮತ್ತೊಂದು ರಾಜ್ಯ ಸೇರ್ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nineteen =
Remember me
