ಶ್ರೀನಗರ:ಪಾಕಿಸ್ತಾನ ಸೇನಾ ನೆರವಿನಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುವ ಪಾಕ್​ ಉಗ್ರರ ಪ್ರಯತ್ನವನ್ನು ಭಾರತೀಯ ಸೇನೆ ದಕ್ಷಿಣ ಕಾಶ್ಮೀರದ ಕೀರನ್​ ವಲಯದಲ್ಲಿ ಶನಿವಾರ ವಿಫಲಗೊಳಿಸಿದೆ.
ಜಾಗತಿಕವಾಗಿ ಉಗ್ರರ ಚಟುವಟಿಕೆಯ ಮೇಲೆ ಸದಾ ಕಣ್ಣಿಡುವ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್​ಎಟಿಎಫ್​) ಈ ತಿಂಗಳಲ್ಲಿ ಸಭೆ ಆಯೋಜಿಸಿದ್ದರೂ, ಕ್ಯಾರೆ ಎನ್ನದೇ ಪಾಪಿ ಪಾಕ್​ ಉಗ್ರರಿಗೆ ನೆರವಾಗುವುದನ್ನು ದುಷ್ಕೃತ್ಯವನ್ನು ಮುಂದುವರಿಸಿದೆ.
ಕೀರನ್​ ವಲಯದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ನಾಲ್ಕು ಎಕೆ-74 ರೈಫಲ್ಸ್​, 8 ಸ್ಫೋಟಕ ವಸ್ತು, 240 ಎಕೆ ರೈಫಲ್​ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು, ಸೇನಾ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ:ಸಿನಿಮಾದಲ್ಲಿ ಚಾನ್ಸ್​ ಕೊಡಿಸ್ತೀನಿ ಎಂದವ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ ಪರಾರಿ!
ಈ ಬಗ್ಗೆ ಮಾತನಾಡಿರುವ ಚಿನಾರ್​ ಕಾರ್ಫ್ಸ್​ನ ಜಿಒಸಿ ಲೆಫ್ಟಿನೆಂಟ್​ ಜನರಲ್​ ಬಿ.ಎಸ್​. ರಾಜು, ನಮ್ಮ ಪಡೆಗಳು ಕಣ್ಗಾವಲು ಸಾಧನಗಳ ಮೂಲಕ ಪಾಕ್​ನಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯನ್ನು ಪತ್ತೆಹಚ್ಚಿ, ಯತ್ನವನ್ನು ವಿಫಲಗೊಳಿಸಿದೆ. ಇದು ಪಾಕ್​ ಕುತಂತ್ರವನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಪಾಕ್​ ನೀಚ ಬುದ್ಧಿಯ ವಿರುದ್ಧ ಹೋರಾಡಲು ನಮ್ಮ ಸೇನೆ ಸನ್ನದ್ಧ ಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಗಡಿ ನಿಯಂತ್ರಣ ರೇಖೆಯ ಬಳಿ ಅಳವಡಿಸಲಾಗಿರುವ ಕಣ್ಗಾವಲು ಯಂತ್ರವು ಕಿಶೆನ್​ ಗಂಗಾ ನದಿ (ಕೆಜಿಆರ್​) ದಡದಲ್ಲಿ ಕೆಲ ಚಲನಾವಲನವನ್ನು ಪತ್ತೆಚ್ಚಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜತೆ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ಯತ್ನವನ್ನು ವಿಫಲಗೊಳಿಸಿದೆ.
ಮತ್ತೆ ರಾತ್ರಿ 10 ಗಂಟೆ ಸುಮಾರಿಗೆ 2 ರಿಂದ 3 ಉ್ರಗರು ನದಿಯ ದಡದಲ್ಲಿ ರೋಪ್​ ಅಳವಡಿಸಿ ಕೆಲ ವಸ್ತುಗಳನ್ನು ಟ್ಯೂಬ್​ನಲ್ಲಿಟ್ಟು ಸಾಗಿಸುವುದನ್ನು ಕಣ್ಗಾವಲು ಯಂತ್ರ ಪತ್ತೆಹಚ್ಚಿತು. ತಕ್ಷಣ ಸ್ಥಳಕ್ಕೆ ತೆರಳಿ ಸೇನೆ, ನಾಲ್ಕು ಎಕೆ-74 ರೈಫಲ್ಸ್​, 8 ಸ್ಫೋಟಕ ವಸ್ತು, 240 ಎಕೆ ರೈಫಲ್​ ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದೆ.(ಏಜೆನ್ಸೀಸ್​)
ಮಳೆ ಜತೆಗೆ ಬಿತ್ತು ಚಿನ್ನದ ನಾಣ್ಯಗಳು: ಗುಂಪಾಗಿ‌ ಜಮಾಯಿಸಿದ ಜನರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 4 =
Remember me
