ನವದೆಹಲಿ:ಪೂರ್ವ ಲಡಾಖ್​ನಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಸಂಘರ್ಷದ ಹೊಗೆ ಏಳುತ್ತಲೇ ಇದೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳು ನಡೆದರೂ ಒಂದು ದೃಢ ನಿರ್ಧಾರಕ್ಕೆ ಬರಲಾಗುತ್ತಿಲ್ಲ.
ಹೀಗಿರುವಾಗ ವಾಸ್ತವ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ನಿಂತಿರುವ ಫೀಲ್ಡ್​ ಕಮಾಂಡರ್​​ಗಳಿಗೆ, ಯಾವುದೇ ಕಾರಣಕ್ಕೂ ಚೀನಾ ಸೈನಿಕರು ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಲು ಅವಕಾಶ ಕೊಡಬಾರದು ಎಂದು ಸೂಚನೆ ನೀಡಿದ್ದಾಗಿ ಸೇನಾ ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲ, ಭಾರತದ ಭೂಪ್ರದೇಶದ ರಕ್ಷಣೆ ಮಾಡುವಾಗ ಸೈನಿಕರು ಶಿಸ್ತು ಪಾಲನೆ ಮಾಡಲೇಬೇಕು ಎಂದೂ ಹೇಳಲಾಗಿದೆ.
ಸದ್ಯ ಚೀನಾ ಪೀಪಲ್ಸ್​ ಲಿಬರೇಶನ್​ ಆರ್ಮಿ ಎಲ್​ಎಸಿ ಬಳಿ 50,000 ಸೈನಿಕರನ್ನು, ಭಾರೀ ಯುದ್ಧ ಟ್ಯಾಂಕ್​ಗಳನ್ನು, ಫಿರಂಗಿಗಳನ್ನು ನಿಯೋಜಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅದಕ್ಕೆ ತಕ್ಕಂತೆ ಭಾರತದ ಸೈನಿಕರ ಬಲವನ್ನೂ ಹೆಚ್ಚಿಸಲಾಗಿದೆ. (ಏಜೆನ್ಸೀಸ್​)
ವಾರಸುದಾರರಿಲ್ಲದ ಸೂಟ್​ಕೇಸ್ ನಿಂದ​ ಪೂಂಛ್​ನಲ್ಲಿ ಬಾಂಬ್ ಭೀತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
