ನವದೆಹಲಿ:ಅವರು ಭಾರತೀಯ ಸೇನಾಪಡೆಯ ವಿಶೇಷ ಪಡೆಯ ಯೋಧರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿನ ಹಲವು ಸೂಕ್ಷ್ಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಉಗ್ರರ ವಿರುದ್ಧ ಹೋರಾಡಿದ್ದರು. ಇದಕ್ಕಾಗಿ ಅವರು ಶೌರ್ಯ ಚಕ್ರ ಪದಕದಿಂದ ಅಲಂಕೃತರಾಗಿದ್ದರು. ಆದರೆ, ಕ್ಯಾನ್ಸರ್​ಗೆ ತುತ್ತಾದ ಅವರು, ಅದರ ವಿರುದ್ಧದ ಹೋರಾಟದಲ್ಲಿ ಕೈಚೆಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಅವರೇ ಗುರುಗ್ರಾಮದ ಮೂಲದ ನವಜೋತ್​ ಸಿಂಗ್​ ಬಲ್​ (39). ಇವರು 2002ರಲ್ಲಿ ಭಾರತೀಯ ಸೇನಾಪಡೆಗೆ ಸೇರ್ಪಡೆಗೊಂಡಿದ್ದರು. 2 ಪ್ಯಾರಾ ರೆಜಿಮೆಂಟ್​ನಲ್ಲಿ ಸ್ಪೆಶಲ್​ ಫೋರ್ಸಸ್​ ಆಫೀಸರ್​ ಆಗಿದ್ದರು. ಆ ಪಡೆಯನ್ನು ಮುನ್ನಡೆಸಿದ ಹೆಗ್ಗಳಿಕೆಯೂ ಇವರದ್ದಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೊಲಾಬ್​ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಧೀರೋದಾತ್ತವಾಗಿ ಹೋರಾಡಿದ್ದರು. ಆದ್ದರಿಂದಲೇ ಇವರಿಗೆ ಶಾಂತಿ ಸಮಯದ ಮೂರನೇ ಅತ್ಯುನ್ನತ ಪದಕ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗಿತ್ತು.
ಆದರೆ ಒಂದು ವರ್ಷದ ಹಿಂದೆ ಇವರಿಗೆ ಕ್ಯಾನ್ಸರ್​ ತಗುಲಿರುವುದು ಗೊತ್ತಾಗಿತ್ತು. ಅಂದಿನಿಂದ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಗುರುವಾರ ನಿಧನರಾದರು. ಪಾಲಕರಲ್ಲದೆ ಪತ್ನಿ, ಎಂಟು ಮತ್ತು ನಾಲ್ಕು ವರ್ಷ ವಯಸ್ಸಿನ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಇವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನಲ್ಲೇ ನೆರವೇರಿಸಲು ಕರ್ನಲ್​ ನವಜೋತ್​ ಸಿಂಗ್​ ಬಲ್​ ಅವರ ಪಾಲಕರು ನಿರ್ಧರಿಸಿದ್ದರು. ಆದರೆ ಆಡಳಿತಾತ್ಮಕ ಅಡೆತಡೆಗಳಿಂದಾಗಿ ಸೇನಾಪಡೆಯ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ದೇಶಾದ್ಯಂತ ಲಾಕ್​ಡೌನ್​ ಹೊರತಾಗಿಯೂ ಇವರು ರಸ್ತೆ ಮಾರ್ಗದಲ್ಲೇ ಗುರುಗ್ರಾಮದಿಂದ ಬೆಂಗಳೂರಿಗೆ ಬರುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ ಹೊರಟಿರುವ ಇವರು ಶನಿವಾರ ಬೆಳಗ್ಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ. ನಂತರದಲ್ಲಿ ಕರ್ನಲ್​ ನವಜೋತ್​ ಸಿಂಗ್​ ಬಲ್​ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
ಗಡಿಯಲ್ಲಿ ಭಾರತೀಯ ಸೇನಾಪಡೆಯಿಂದ ಉಗ್ರರ ಲಾಂಚ್​ಪ್ಯಾಡ್​ ಮೇಲೆ ಭಾರಿ ದಾಳಿ, ಒಂದು ಲಾಂಚ್​ಪ್ಯಾಡ್​ ಸಂಪೂರ್ಣ ಧ್ವಂಸ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × five =
Remember me
