ವಾಷಿಂಗ್ಟನ್:ರಷ್ಯಾ ಜತೆಗಿನ ಭಾರತದ ಸಂಬಂಧ ಸಡಿಲಿಸಲು ಅಮೆರಿಕ ಸೇನಾ ಪ್ಯಾಕೇಜ್ ಯೋಜನೆ ರೂಪಿಸುತ್ತಿದೆ. ಈ ಸೇನಾ ನೆರವಿನ ಪ್ಯಾಕೇಜ್ 500 ದಶಲಕ್ಷ ಡಾಲರ್ ಮೌಲ್ಯದ್ದಾಗಿದೆ. ಒಂದೊಮ್ಮೆ ಇದು ಅಂತಿಮಗೊಂಡು ಭಾರತ ಇದನ್ನು ಸ್ವೀಕರಿಸಿದರೆ, ಇಸ್ರೇಲ್ ಮತ್ತು ಈಜಿಪ್ಟ್​ನ ನಂತರ ಅಮೆರಿಕದಿಂದ ಇಷ್ಟು ದೊಡ್ಡ ಮೊತ್ತ ಸೇನಾ ನೆರವಿನ ಪ್ಯಾಕೇಜ್ ಪಡೆಯುವ ರಾಷ್ಟ್ರವಾಗಲಿದೆ ಭಾರತ.
ಭಾರತವನ್ನು ದೀರ್ಘಕಾಲದ ರಕ್ಷಣಾ ಪಾಲುದಾರ ರಾಷ್ಟ್ರವನ್ನಾಗಿ ಸ್ವೀಕರಿಸುವುದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಡಳಿತ ದೊಡ್ ಮಟ್ಟದ ಉಪಕ್ರಮವನ್ನು ತೆಗೆದುಕೊಂಡಿದೆ. ಅದರ ಭಾಗವಾಗಿ ಈ ಸೇನಾ ನೆರವನ್ನು ರೂಪಿಸಲಾಗುತ್ತಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿ ಹೇಳಿದೆ. ಭಾರತ ಸರ್ಕಾರ ಇದನ್ನು ದೃಢೀಕರಿಸಿಲ್ಲ.
ವಿಶ್ವಾಸಾರ್ಹ ಪಾಲುದಾರ:ಭಾರತವನ್ನು ಎಲ್ಲ ಕ್ಷೇತ್ರದಲ್ಲೂ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವನ್ನಾಗಿ ಸೇರಿಸುವುದಕ್ಕೆ ಅಮೆರಿಕ ಬಯಸಿದೆ. ಇದಕ್ಕಾಗಿ ಫ್ರಾನ್ಸ್ ಸೇರಿ ಪ್ರಮುಖ ರಾಷ್ಟ್ರಗಳೊಂದಿಗೆ ಬೈಡೆನ್ ಆಡಳಿತ ಮಾತುಕತೆ ನಡೆಸಿ ಯೋಜನೆ ರೂಪಿಸುತ್ತಿದೆ. ಭಾರತದ ನರೇಂದ್ರ ಮೋದಿ ಸರ್ಕಾರ ಬಯಸುವ ಎಲ್ಲ ಸಲಕರಣೆಗಳನ್ನು, ನೆರವನ್ನು ನೀಡುವುದನ್ನು ಖಾತರಿಪಡಿಸಲು ಅಮೆರಿಕ ಮುಂದಾಗಿದೆ.
ವಿಕೇಂದ್ರೀಕರಣದ ನಿಲುವು: ಭಾರತ ತನ್ನ ರಕ್ಷಣಾ ವಿಚಾರದಲ್ಲಿ ವಿಕೇಂದ್ರೀಕೃತ ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ. ರಷ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಭಾರತ ಹಂತ ಹಂತವಾಗಿ ರಕ್ಷಣಾ ಅಗತ್ಯಗಳನ್ನು ಈಡೇರಿಸಿಕೊಳ್ಳಲು ವಿಕೇಂದ್ರೀಕೃತ ಯೋಜನೆಗಳನ್ನು ರೂಪಿಸಿದೆ. ವಿವಿಧ ದೇಶಗಳ ಜತೆಗೆ ರಕ್ಷಣಾ ಪಾಲುದಾರಿಕೆಯನ್ನು ಹೊಂದಲು ಅಗತ್ಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಅಮೆರಿಕವು ಭಾರತದ ಈ ತಂತ್ರಕ್ಕೆ ಅನುಗುಣವಾಗಿ ನೆರವನ್ನು ಒದಗಿಸಲಿದೆ.
ಸವಾಲುಗಳೇನು?:ಭಾರತಕ್ಕೆ ಫೈಟರ್​ಜೆಟ್, ಸಮರ ನೌಕೆ, ಯುದ್ಧ ಟ್ಯಾಂಕ್​ಗಳನ್ನು ಒದಗಿಸುವುದು ಹೇಗೆ ಎಂಬುದು ದೊಡ್ಡ ಸವಾಲಾಗಿ ಉಳಿದುಕೊಂಡಿದೆ. ನೇರವಾಗಿ ಸೇನಾ ಉಪಕರಣಗಳನ್ನು ಪೂರೈಸುವುದೇ ಅಥವಾ ಅವುಗಳನ್ನು ನಿರ್ವಿುಸುವುದಕ್ಕೆ ನೆರವು ಒದಗಿಸುವುದೇ ಅಥವಾ ಹಣಕಾಸಿನ ಪ್ಯಾಕೇಜ್ ಘೊಷಿಸುವುದೇ ಎಂಬುದರ ಬಗ್ಗೆ ಬೈಡೆನ್ ಆಡಳಿತದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ನೌಕೆ ನಿರೋಧಕ ಕ್ಷಿಪಣಿ ಪರೀಕ್ಷೆ:ದೇಶದ ಮೊದಲ ಸ್ವದೇಶಿ ನಿರ್ವಿುತ ನೌಕೆ ನಿರೋಧಕ ಕ್ಷಿಪಣಿಯನ್ನು ಮೊದಲ ಬಾರಿ ಒಡಿಶಾದ ಬಾಲಸೋರ್​ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಆಗಸದಿಂದ ಉಡಾಯಿಸಬಹುದಾದ ಈ ಕ್ಷಿಪಣಿಯನ್ನು ಸೀಕಿಂಗ್ 42ಬಿ ಹೆಲಿಕಾಪ್ಟರ್​ನಲ್ಲಿ ಅಳವಡಿಸಿ ಉಡಾಯಿಸಲಾಯಿತು. ಇದು ಯಶಸ್ವಿಯಾಗಿದೆ ಎಂದು ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್​ವೆುಂಟ್ ಆರ್ಗನೈಸೇಷನ್ (ಡಿಆರ್​ಡಿಒ) ತಿಳಿಸಿದೆ.
ರಷ್ಯಾ ವಿರುದ್ಧ ತಟಸ್ಥ:ಪಾಕಿಸ್ತಾನ ಮತ್ತು ಚೀನಾಗಳಿಂದ ತೀವ್ರ ಬೆದರಿಕೆ ಎದುರಿಸುತ್ತಿರುವ ಭಾರತವು ಶಸ್ತ್ರಾಸ್ತ್ರಗಳಿಗೆ ರಷ್ಯಾವನ್ನೇ ಅವಲಂಬಿಸಿದೆ. ಹೀಗಾಗಿ, ಯೂಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದಾಗ ಭಾರತ ತಟಸ್ಥ ನಿಲುವು ತಾಳಿತು. ಅದು ಎರಡು ರಾಷ್ಟ್ರಗಳ ನಡುವಿನ ಸಮಸ್ಯೆ. ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಪ್ರತಿಪಾದಿಸಿತು. ಅಮೆರಿಕ ಯುರೋಪ್, ಆಸ್ಟ್ರೇಲಿಯಾ, ಜಪಾನ್​ಗಳು ರಷ್ಯಾ ಮೇಲೆ ಆರ್ಥಿಕ ದಿಗ್ಭಂಧನ ಹೇರಿದವು. ಇದೇ ವೇಳೆ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸಿತು.
ಜೂನ್ ಒಳಗೆ ಎಸ್-400 ನಿಯೋಜನೆ:ರತಕ್ಕೆ ಕಳೆದ ಡಿಸೆಂಬರ್​ನಲ್ಲಿ ರಷ್ಯಾದಿಂದ ಮೊದಲ ಎಸ್-400 ಕ್ಷಿಪಣಿ ನಿರೋಧಕ ಉಪಕರಣ ಲಭಿಸಿದೆ. ಈ ವರ್ಷ ಜೂನ್ ತಿಂಗಳ ಒಳಗಾಗಿ ಈ ಉಪಕರಣಗಳು ಚೀನಾ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ನಿಯೋಜನೆಗೊಳ್ಳಲಿವೆ. ಈ ಎರಡು ರಾಷ್ಟ್ರಗಳಿಂದ ಎದುರಾಗುವ ಬೆದರಿಕೆಯನ್ನು ತಡೆಯಲು ಈ ಉಪಕರಣ ಭಾರತಕ್ಕೆ ನೆರವಿಗೆ ಬರಲಿದೆ. ರಕ್ಷಣಾ ಕ್ಷೇತ್ರದಲ್ಲಿ ಭಾರತವು ಸ್ವಾವಲಂಬಿಯಾಗಲು ಪ್ರಯತ್ನಿಸುತ್ತಿದೆ. ಇದರಲ್ಲಿ ಹಂತ ಹಂತವಾದ ಯಶಸ್ಸನ್ನು ಅದು ಸಾಧಿಸುತ್ತಿದೆ ಎಂದು ಅಮೆರಿಕದ ಲೆಫ್ಟಿನೆಂಟ್ ಜನರಲ್ ಸ್ಕಾಟ್ ಬೇರಿಯರ್ ಹೇಳಿದ್ದಾರೆ.
ಅತಿದೊಡ್ಡ ಖರೀದಿದಾರ:ಜಗತ್ತಿನಲ್ಲಿ ರಷ್ಯಾದ ಶಸ್ತ್ರಾಸ್ತ್ರಗಳನ್ನು ಅತಿ ಹೆಚ್ಚು ಖರೀದಿಸುವ ರಾಷ್ಟ್ರ ಭಾರತ. ಕಳೆದ ಒಂದು ದಶಕದ ಅವಧಿಯಲ್ಲಿ ಭಾರತವು ಅಮೆರಿಕದಿಂದ 400 ಕೋಟಿ ಡಾಲರ್ ಶಸ್ತ್ರಾಸ್ತ್ರ ಖರೀದಿಸಿದೆ. ಇದೇ ಅವಧಿಯಲ್ಲಿ ರಷ್ಯಾದಿಂದ 2500 ಕೋಟಿ ಡಾಲರ್​ಗೂ ಅಧಿಕ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಭಾರತ ಖರೀದಿ ಮಾಡಿದೆ ಎಂದು ಸ್ಟಾಕ್​ಹೋಮ್ ಇಂಟರ್​ನ್ಯಾಷನಲ್ ಪೀಸ್ ರೀಸರ್ಚ್ ಇನ್​ಸ್ಟಿಟ್ಯೂಟ್ ವರದಿ ಹೇಳಿದೆ.
ಜಾಗತಿಕ ವೇದಿಕೆಯಲ್ಲಿ ಭಾರತ ನಿಲುವು:ಯೂಕ್ರೇನ್ – ರಷ್ಯಾ ಬಿಕ್ಕಟ್ಟಿನ ವಿಚಾರದಲ್ಲಿ ಅಮೆರಿಕ ಆರಂಭದಲ್ಲಿ ಭಾರತದ ನಿಲುವಿನ ಬಗ್ಗೆ ಹತಾಶಗೊಂಡಿತ್ತು. ಆದರೆ, ತರುವಾಯ ವಸ್ತುಸ್ಥಿತಿ ಅರ್ಥಮಾಡಿಕೊಂಡು ಮೋದಿ ಸರ್ಕಾರದ ಮನಗೆಲ್ಲುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳತೊಡಗಿದೆ. ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ಚೀನಾದ ವಿರುದ್ಧ ಭಾರತವು ಅಮೆರಿಕಕ್ಕೆ ಪ್ರಮುಖ ಸುರಕ್ಷಾ ಪಾಲುದಾರ ರಾಷ್ಟ್ರವಾಗಿದೆ. ಮುಂದಿನವಾರ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಶೃಂಗದಲ್ಲಿ ಬೈಡೆನ್ ಜತೆಗೆ ಮಾತುಕತೆಗೆ ಸೇರಿಕೊಳ್ಳಲು ಪ್ರಧಾನಿ ಮೋದಿಗೂ ಆಹ್ವಾನ ಲಭಿಸಿದೆ. ಈ ಸಭೆಯಲ್ಲಿ ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ ಸೇರಿ ಕ್ವಾಡ್ ನಾಯಕರು ಇರಲಿದ್ದಾರೆ. ಇನ್ನೊಂದೆಡೆ, ಜರ್ಮನಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿ7 ರಾಷ್ಟ್ರಗಳ ನಾಯಕರ ಸಭೆಯಲ್ಲಿ ಭಾಗವಹಿಸುವಂತೆಯೂ ಭಾರತದ ಪ್ರಧಾನಿ ಮೋದಿಗೆ ಆಹ್ವಾನ ಲಭಿಸಿದೆ.
ಭಾರತಕ್ಕೆ ಬೆದರಿಕೆ ಹೆಚ್ಚು:ಅಫ್ಘಾನಿಸ್ತಾನದಲ್ಲಿ ಸರ್ಕಾರ ಪತನವಾದ ಬಳಿಕ ಭಾರತಕ್ಕೆ ಉಗ್ರ ದಾಳಿಯ ಬೆದರಿಕೆ ಹೆಚ್ಚಾಗಿದೆ. ಪಾಕಿಸ್ತಾನ ಮೂಲದ ಉಗ್ರ ಗುಂಪುಗಳಾದ ಲಷ್ಕರ್ ಏ ತೊಯ್ಬಾ, ಜೈಷ್ ಏ ಮೊಹಮ್ಮದ್ ಮತ್ತು ಇದರ ನಂಟಿರುವ ವಿವಿಧ ಸಂಘಟನೆಗಳಿಂದ ಭಾರತಕ್ಕೆ ಹೆಚ್ಚಿನ ತೊಂದರೆ ಇದೆ. ಪಾಕ್ ಸೇನೆಯ ಬೆಂಬಲದೊಂದಿಗೆ ಉಗ್ರರು ಕಾಶ್ಮೀರವನ್ನು ಟಾರ್ಗೆಟ್ ಮಾಡಿರುವ ಕಾರಣ ಸವಾಲು ಹೆಚ್ಚೇ ಇದೆ ಎಂದು ಲೆಫ್ಟಿನೆಂಟ್ ಜನರಲ್ ಬೇರಿಯರ್ ವಿವರಿಸಿದ್ದಾರೆ.
ಕುತುಬ್ ಮಿನಾರ್ ಕಟ್ಟಿಸಿದ್ದು ಕುತ್ಬುದ್ದೀನ್​ ಅಲ್ಲ; ಅಷ್ಟಕ್ಕೂ ಅದರ ನಿರ್ಮಾಣದ ಉದ್ದೇಶವೇ ಬೇರೆ ಇತ್ತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 11 =
Remember me
