ನವದೆಹಲಿ:ಗಲ್ವಾನ್​ ಕಣಿವೆಯಲ್ಲಿ ಜೂ.15ರಂದು ಚೀನಾ ಯೋಧರೊಂದಿಗೆ ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ಗಾಯಗೊಂಡಿರುವ ವೀರಯೋಧರ ಚಿಕಿತ್ಸೆಗೆ ಲೇಹ್​ ಆಸ್ಪತ್ರೆಯಲ್ಲಿ ಸಮರ್ಪಕವಾದ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಟೀಕೆ ದುರುದ್ದೇಶಗಳಿಂದ ಕೂಡಿದ್ದು, ವೀರಾಗ್ರಣಿಯರಿಗೆ ಅಪಮಾನ ಮಾಡುವಂತಿದೆ ಎಂದು ಭಾರತೀಯ ಸೇನಾಪಡೆ ಅಧಿಕಾರಿಗಳು ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಲೇಹ್​ ಆಸ್ಪತ್ರೆಯಲ್ಲಿರುವ ಹುಳುಕುಗಳನ್ನು ಮುಚ್ಚಿಡಲು ಪರ್ಯಾಯ ವ್ಯವಸ್ಥೆ ಮಾಡಿ ಕಣ್ಣಿಗೆ ಮಣ್ಣೆರೆಚಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಇದು ದುರುದ್ದೇಶಪೂರಿತವಾದ, ಆಧಾರರಹಿತ ಆರೋಪ ಎಂದು ಸೇನಾಪಡೆ ಹೇಳಿದೆ.
ಇದನ್ನೂ ಓದಿ:ಮದುವೆ ಎರಡೇ ದಿನ ಇರುವಾಗ ಪಾಗಲ್​ ಪ್ರೇಮಿಯ ಗುಂಡೇಟಿಗೆ ಬಲಿಯಾದ 19ರ ಯುವತಿ…
ಸೇನಾಪಡೆಯಲ್ಲಿ ಯೋಧರಿಗೆ ಅತ್ಯುತ್ತಮ ಚಿಕಿತ್ಸಾ ಸೌಲಭ್ಯವನ್ನು ಕೊಡಲಾಗುತ್ತದೆ. ಈ ಬಗ್ಗೆ ಯಾವುದೇ ಅನುಮಾನಗಳು ಬೇಡ ಎಂದು ತಿಳಿಸಿದೆ.ಲೇಹ್​ನ ಸಾರ್ವಜನಿಕ ಆಸ್ಪತ್ರೆ ಸಮುಚ್ಚಯದಲ್ಲಿ ತುರ್ತು ಅಗತ್ಯಗಳಿಗೆ ಸ್ಪಂದಿಸಲು 100 ಹಾಸಿಗೆ ಸಾಮರ್ಥ್ಯವನ್ನು ಹೊಸದಾಗಿ ವಿಸ್ತರಣೆ ಮಾಡಲಾಗಿದೆ. ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸೋಲೇಷನ್​ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತರಬೇತಿಗಾಗಿ ಮೀಸಲಾಗಿರುವ ಆಡಿಯೋ-ವಿಡಿಯೋ ಹಾಲ್​ ಅನ್ನು ತಾತ್ಕಾಲಿಕವಾಗಿ ಯೋಧರ ಚಿಕಿತ್ಸಾ ವಿಭಾಗವಾಗಿ ಮಾರ್ಪಡಿಸಲಾಗಿದೆ. ತನ್ಮೂಲಕ ಯೋಧರು ಕೋವಿಡ್​-19 ಸೋಂಕಿಗೆ ತುತ್ತಾಗದಂತೆ ಎಚ್ಚರವಹಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಗಲ್ವಾನ್​ ಕಣಿವೆಯ ಘರ್ಷಣೆಯ ಬಳಿಕ ಲೇಹ್​ಗೆ ಭೇಟಿ ನೀಡಿದ್ದ ಸೇನಾಪಡೆ ಮುಖ್ಯಸ್ಥ ಎಂ.ಎಂ. ನರವಾನೆ ಕೂಡ ಯೋಧರನ್ನು ಇಲ್ಲಿಯೇ ಭೇಟಿಯಾಗಿದ್ದರು. ಆಗ ವ್ಯಕ್ತವಾಗದಿದ್ದ ಅನುಮಾನಗಳು ಪ್ರಧಾನಿ ಮೋದಿ ಅವರ ಭೇಟಿಯ ಬಳಿಕ ಏಕೆ ಬಂದಿತು ಎಂದು ಪ್ರಶ್ನಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಗೆ ಕರೊನಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fifteen =
Remember me
