ನವದೆಹಲಿ:ದೇಶದ ಒಳಭಾಗದಲ್ಲಿ ಕರೊನಾ ಪಿಡುಗಿನ ವಿರುದ್ಧ ಹೋರಾಟ ನಡೆಯುತ್ತಿದ್ದರೆ, ಗಡಿಭಾಗದಲ್ಲಿ ಯೋಧರು ಭಾರತದೊಳಗೆ ನುಸುಳಲು ಸನ್ನದ್ಧರಾಗಿರುವ ಪಾಕಿಸ್ತಾನ ಬೆಂಬಲಿತ ಉಗ್ರರ ಉಪಟಳ ನಿಯಂತ್ರಣದ ಹೋರಾಟದಲ್ಲಿ ತೊಡಗಿದ್ದಾರೆ.
ಗಡಿ ನಿಯಂತ್ರಣ ರೇಖೆಯ ಬಳಿಯ ಹಿಮಚ್ಛಾದಿತ ಪರ್ವತ ಶ್ರೇಣಿಗಳಲ್ಲಿ ಈಗ ಹಿಮ ಕರಗಿ, ಓಡಾಡಲು ಅನುಕೂಲವಾಗುವ ಹಿನ್ನೆಲೆಯಲ್ಲಿ ಭಾರತದೊಳಗೆ ನುಸುಳಿಸಲು ನೂರಾರು ಉಗ್ರರರನ್ನು ಪಾಕಿಸ್ತಾನ ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಅವರೆಲ್ಲರಿಗೂ ಬೆಂಬಲ ನೀಡುವ ಉದ್ದೇಶದಿಂದ ಪಾಕ್​ ಯೋಧರು ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿ ಶೆಲ್ಲಿಂಗ್​ ಮಾಡುತ್ತಿದ್ದಾರೆ.
ಇದಕ್ಕೆ ಶುಕ್ರವಾರ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಯೋಧರು, ಉಗ್ರರ ಲಾಂಚ್​ಪ್ಯಾಡ್​ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಕೇರನ್​ ಸೆಕ್ಟರ್​ನ ಕುಪ್ವಾರ ಬಳಿ ಈ ದಾಳಿಗಳು ನಡೆದಿದ್ದು, ಒಂದು ಲಾಂಚ್​ಪ್ಯಾಡ್​ ಸಂಪೂರ್ಣ ಧ್ವಂಸಗೊಂಡಿದೆ. 105 ಎಂಎಂ ಫೀಲ್ಡರ್​ ಗನ್​ ಮತ್ತು 155 ಬೋಫೋರ್ಸ್​ ಹೌವಿಟ್ಸರ್​ಗಳನ್ನು ಬಳಸಿ ಭಾರತೀಯ ಯೋಧರು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಭಾಗದಲ್ಲಿ ಹೆಚ್ಚಿನ ಆಸ್ತಿಪಾಸ್ತಿ ಮತ್ತು ಪ್ರಾಣ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಭಾರತೀಯ ಪಾಳೆಯದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಹಾರಾಷ್ಟ್ರದಲ್ಲಿ ಕೋವಿಡ್​ 19 ರಾಜಕೀಯ, ಅಧಿಕಾರಿಗಳೊಂದಿಗಿನ ರಾಜ್ಯಪಾಲರ ಸಭೆ ಖಂಡಿಸಿದ ಶಿವಸೇನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
