ಮುಂಬೈ:‘ನನ್ನ ಮೇಲೆ ದಾಳಿ ನಡೆಸುತ್ತೀರಾ? ನಡೆಸಿಕೊಳ್ಳಿ. ನೀವು ಏನೇ ಮಾಡಿದರೂ ನಿಮ್ಮ ಸುಳ್ಳುಗಳನ್ನು ಜನರ ಮುಂದೆ ನಾನು ಇಡುವೆ. ಗುಜರಾತ್‌ನಲ್ಲಿ ಹಿಂದು-ಮುಸ್ಲಿಮರನ್ನು ಪ್ರತ್ಯೇಕಿಸುತ್ತಿದ್ದಾರೆ ಎಂಬ ಸುಳ್ಳು ಹೇಳಿ ಜನರನ್ನು ಮೋಸ ಮಾಡಲು ನೋಡುತ್ತಿದ್ದೀರಾ? ಎಲ್ಲವೂ ನನಗೆ ಗೊತ್ತು, ಇಡೀ ದೇಶದ ಜನ ನನ್ನ ಪರವಾಗಿ ಇದ್ದಾರೆ…’-ಹೀಗೆಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹರಿಹಾಯ್ದಿದ್ದಾರೆ.ನಿನ್ನೆ ಅರ್ನಬ್‌ ಮತ್ತು ಅವರ ಪತ್ನಿ ಬರುತ್ತಿದ್ದ ಕಾರಿನ ಮೇಲೆ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿ, ಗಾಜನ್ನು ಪುಡಿ ಪುಡಿ ಮಾಡಿದ್ದರು. ಇದರಿಂದ ರೊಚ್ಚಿಗೆದ್ದಿರುವ ಅರ್ನಬ್‌, ತಮ್ಮ ಮೇಲಿನ ದಾಳಿಗೆ ನೇರವಾಗಿ ಸೋನಿಯಾ ಗಾಂಧಿ ಅವರೇ ಕಾರಣ ಎಂದು ಹೇಳಿರುವ ವೀಡಿಯೋ ಅನ್ನು ಟ್ವಿಟರ್‌ನಲ್ಲಿ ದಾಖಲಿಸಿದ್ದಾರೆ.‘ನನಗೆ ಗೊತ್ತು, ‘ಈ ದಾಳಿ ನಡೆಸಿರುವುದು ಸೋನಿಯಾ ಗಾಂಧಿ ಎಂದು. ನೀವು ಈ ದೇಶದ ಅತಿ ದೊಡ್ಡ ಹೇಡಿ. ನೀವು ನನ್ನ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದೀರಿ. ನನ್ನ ಮೇಲಿನ ದಾಳಿಗೆ ನೀವೇ ಕಾರಣ, ಹೀಗೆ ಹೇಡಿಯಂತೆ ಇನ್ನೊಬ್ಬರಿಗೆ ಸೂಚನೆ ನೀಡಿ ದಾಳಿ ಮಾಡಿಸಬೇಡಿ, ಸಾಧ್ಯವಾದರೆ ನನ್ನನ್ನು ಮುಖಾಮುಖಿ ಎದುರಿಸಿ’ ಎಂದು ಹೇಳಿದ್ದಾರೆ.ಅಷ್ಟೇ ಅಲ್ಲದೇ, ‘ನೀವು ಏನು ಮಾಡಿದರೂ ನಾನು ಹೆದರುವುದಿಲ್ಲ. ನಿಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ಸುಳ್ಳಿನ ಮೇಲೆ ಸುಳ್ಳನ್ನು ಹೇಳಿ ಜನರನ್ನು ತಪ್ಪು ದಾರಿಗೆ ತರುತ್ತಿದ್ದಾರೆ. ಗುಜರಾತ್‌ನಲ್ಲಿ ಹಿಂದು-ಮುಸ್ಲಿಮರನ್ನು ಪ್ರತ್ಯೇಕಿಸುತ್ತಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ನಿಮ್ಮ ಪುತ್ರಿ ನೀಡಿದರೆ ಆ ಸುಳ್ಳನ್ನು ನಾನು ಬಯಲು ಮಾಡುವುದಿಲ್ಲ ಎಂದುಕೊಂಡಿದ್ದೀರಾ, ಇಡೀ ದೇಶದ ಜನತೆ ನನ್ನ ಬೆಂಬಲಕ್ಕೆ ಇದೆ. ನೀವು ಏನು ಮಾಡಿದರೂ ನಾನು ಭಯಪಡುವುದಿಲ್ಲ’ ಎಂದಿದ್ದಾರೆ ಗೋಸ್ವಾಮಿ. 5 ನಿಮಿಷ 50 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಸೋನಿಯಾಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರು ನಾನು ಕಾರಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಬಂದು ದಾಳಿ ನಡೆಸಿದರು. ಕಾರಿನ ಕಿಟಕಿಗಳನ್ನು ಒಡೆದು ಒಂದೇ ಸಮನೆ ದಾಳಿ ಮಾಡಿದರು. ನನಗೆ ಒಂದು ಪಾಠ ಕಲಿಸಬೇಕೆಂದು ಪಕ್ಷದ ಮೇಲಿನ ನಾಯಕರಿಂದ ಸೂಚನೆ ಪಡೆದು ಕಾರ್ಯಕರ್ತರು ಈ ರೀತಿ ಕೆಟ್ಟ ವರ್ತನೆ ತೋರಿಸಿದ್ದಾರೆ’ ಎಂದು ಆರಂಭಿಸಿದ್ದ ಅವರು ನಂತರ ಸೋನಿಯಾ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. (ಏಜೆನ್ಸೀಸ್‌)
#BREAKING| Arnab's message after being physically attacked by Congress goons#SoniaGoonsAttackArnabhttps://t.co/RZHKU3fdmKpic.twitter.com/SdAvoerhIH

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve + one =
Remember me
