ಕಲ್ಪೆಟ್ಟ:ವಯನಾಡು ಭೂಕುಸಿತ ದುರಂತ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ವೇಳೆ ಸುಮಾರು 4 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ವಯನಾಡಿನ ವೆಲ್ಲರ್ಮಾಲದ ನದಿ ದಡದಲ್ಲಿ ಈ ಹಣ ಪತ್ತೆಯಾಗಿದೆ ಎಂದು ಶೋಧ ಕಾರ್ಯದಲ್ಲಿ ನಿರತರಾಗಿದ್ದ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಕೆಸರಿನಿಂದ ಕೂಡಿದ 500 ಮತ್ತು 100 ರೂ. ಮುಖಬೆಲೆಯ ಸುಮಾರು 4 ಲಕ್ಷ ರೂಪಾಯಿ ಬಂಡೆಗಳ ನಡುವೆ ಸಿಲುಕಿದ್ದ ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ಪತ್ತೆಯಾಗಿದೆ. 500 ರೂ. ಮುಖಬೆಲೆಯ 7 ಬಂಡಲ್​ಗಳು ಮತ್ತು 100 ರೂ. ಮುಖಬೆಲೆ ಐದು ಬಂಡಲ್​ ಹಣ ವಶಕ್ಕೆ ಪಡೆಯಲಾಗಿದ್ದು, ಹಣವನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದು ಅಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಮುಂಚೆ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಚಿನ್ನಾಭರಣಗಳು ಪತ್ತೆಯಾಗಿದ್ದವು.
ಭೂಕುಸಿತ ದುರಂತದಲ್ಲಿ ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ಇನ್ನಷ್ಟು ದಿನಗಳು ಮುಂದುವರಿಯಲಿದೆ. ಒಟ್ಟು 118 ಮಂದಿ ನಾಪತ್ತೆಯಾಗಿದ್ದಾರೆ. ಪ್ರತಿ ಏರಿಯಾವನ್ನು ಎರಡೆರೆಡು ಬಾರಿ ಶೋಧಿಸಲಾಗುತ್ತಿದೆ. ಜನರ ಮನವಿ ಮೇರೆಗೆ ಅನೇಕ ಪ್ರದೇಶಗಳಲ್ಲಿ ಮರುಶೋಧ ನಡೆಸಲಾಗುತ್ತಿದೆ.
ನಿನ್ನೆಯಷ್ಟೇ ಎನ್​ಡಿಆರ್​ಎಫ್​, ಅಗ್ನಿಶಾಮಕ ಸಿಬ್ಬಂದಿ, ನಾಗರಿಕ ರಕ್ಷಣಾ ಸಿಬ್ಬಂದಿ, ಪೊಲೀಸ್​​, ಅರಣ್ಯ ಇಲಾಖೆ ಮತ್ತು ಸ್ವಯಂ ಪ್ರೇರಿತರು ದುರಂತ ನಡೆದ ಸ್ಥಳದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಸಂಬಂಧಿಕರು ತೋರಿಸಿದ ಮನೆಗಳಲ್ಲಿ ಹುಡಕಾಟ ನಡೆಸಿದ್ದು, ಈ ವೇಳೆ ಯಾವುದೇ ಮೃತದೇಹಗಳಾಗಲಿ ಅಥವಾ ದೇಹದ ಭಾಗಗಳಾಗಲಿ ಪತ್ತೆಯಾಗಿಲ್ಲ. ವಯನಾಡು ಮಾತ್ರವಲ್ಲದೆ, ನೀಲಂಬೂರಿನ ಚಲಿಯಾರ್​ನಲ್ಲಿ ನಿನ್ನೆ ಶೋಧ ಕಾರ್ಯ ನಡೆಸಲಾಗಿದೆ. 60 ಸದದ್ಯರ ತಂಡ ಮುಂಡೇರಿಯಿಂದ ಪರಂಪ್ಪರವರೆಗೆ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಶೋಧಿಸಿದೆ.
ಆಗಸ್ಟ್​ 13ರಂದು ನೀಲಂಬೂರಿನ ಕುಂಬಲಾಪರದಲ್ಲಿ 3 ದೇಹದ ಭಾಗಗಳು ಪತ್ತೆಯಾಗಿದ್ದು, ನಿನ್ನೆ ಅಂತಿಮ ಸಂಸ್ಕಾರ ನಡೆಸಲಾಗಿದೆ. ಇಲ್ಲಿಯವರೆಗೆ 231 ಮೃತದೇಗಳನ್ನು ಪತ್ತೆ ಮಾಡಲಾಗಿದ್ದು, 420 ಮಂದಿಯ ಡಿಎನ್​ಎ ಸ್ಯಾಂಪಲ್​ ಅನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.(ಏಜೆನ್ಸೀಸ್​)
ಟೀಮ್​​ ಇಂಡಿಯಾಗೆ ಆಗಸ್ಟ್​-ಸೆಪ್ಟೆಂಬರ್​ ಮಧ್ಯದಲ್ಲೇ ವಿಶ್ರಾಂತಿ ಸಿಗುವುದೇಕೆ? ಇಲ್ಲಿದೆ ನೋಡಿ ಅಸಲಿ ಕಾರಣ…

ಅಬ್ಬಾ… ವೀಳ್ಯದೆಲೆ ಕುದಿಸಿದ ನೀರು ಕುಡಿದ್ರೆ ಇಷ್ಟೆಲ್ಲಾ ಲಾಭಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − thirteen =
Remember me
