ನವದೆಹಲಿ:ದೆಹಲಿಯ ಗಡಿ ಭಾಗದಲ್ಲಿ ಕಳೆದ ಒಂದು ವರ್ಷದಿಂದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್​ಕೆಎಂ) ನೇತೃತ್ವದಲ್ಲಿ ರೈತ ಸಂಘಟನೆಗಳು ಕೃಷಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ರಾಷ್ಟ್ರದ ಹಿತದೃಷ್ಟಿಯಿಂದ ಈ ಕಾನೂನುಗಳನ್ನು ಹಿಂಪಡೆದಿರುವುದಾಗಿ ಸರ್ಕಾರ ಘೋಷಿಸಿದೆ. ಈಗ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಖಾತರಿಗೊಳಿಸುವ ಕಾನೂನು ಜಾರಿಗೊಳಿಸಬೇಕು ಎಂಬ ರೈತರ ಬೇಡಿಕೆ ಮುನ್ನೆಲೆಗೆ ಬಂದಿದೆ. ಎಂಎಸ್​ಪಿಗೆ ಇರುವ ಕಾನೂನು ಬದ್ಧತೆಯ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.
ಎಷ್ಟು ಬೆಳೆಗಳಿಗೆ ಬೆಂಬಲ ಬೆಲೆ?:ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಎಂಬ ಸೂತ್ರದಲ್ಲಿ ಸರ್ಕಾರ ಪ್ರತಿವರ್ಷ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುತ್ತದೆ. ಪ್ರಸ್ತುತ ಈ ಬೆಂಬಲ ಬೆಲೆ ಕಡ್ಡಾಯಗೊಳಿಸುವ ಕಾನೂನು ಆಗಿಲ್ಲ ಅಥವಾ ಇದಕ್ಕೆ ಕಾನೂನು ಮಾನ್ಯತೆ ಒದಗಿಸುವ ನಿಯಮವೂ ಇಲ್ಲ.
ಉತ್ಪಾದನಾ ವೆಚ್ಚದಲ್ಲಿ ಬೀಜ, ರಸಗೊಬ್ಬರ, ಕೀಟನಾಶಕ, ಇಂಧನ, ನೀರಾವರಿ, ಕೂಲಿ ಕಾರ್ವಿುಕರು ಮತ್ತು ಗೇಣಿಗೆ ಪಡೆದ ಜಮೀನು ಮತ್ತು ಕುಟುಂಬದವರ ಪಾವತಿ ರಹಿತ ಕೆಲಸ ಕೂಡ ಸೇರಿಕೊಂಡಿದೆ. ಕೃಷಿಕರ ರಾಷ್ಟ್ರೀಯ ಆಯೋಗ ಶಿಫಾರಸು ಮಾಡಿದಂತೆ ಉತ್ಪಾದನಾ ವೆಚ್ಚದಲ್ಲಿ ಸಮಗ್ರ ವೆಚ್ಚದ ಲೆಕ್ಕಾಚಾರವಾಗಬೇಕು. ಇದರಲ್ಲಿ ಸ್ವಂತ ಜಮೀನಿನ ಮೇಲೆ ತೆಗೆದುಕೊಂಡ ಸಾಲದ ಬಡ್ಡಿ, ಬಂಡವಾಳ ಇವೆಲ್ಲವೂ ಸೇರಬೇಕು ಎಂಬುದು ರೈತರ ಬೇಡಿಕೆ. ಸರ್ಕಾರ ಮೂರನೇ ಒಂದಂಶ ಗೋಧಿ ಮತ್ತು ಅಕ್ಕಿಯನ್ನು ಖರೀದಿಸುತ್ತದೆ. ಬೇಳೆಕಾಳು ಮತ್ತು ಎಣ್ಣೆ ಬೀಜಗಳ ಖರೀದಿ ಪ್ರಮಾಣ ಶೇಕಡ 10, ಶೇಕಡ 20. ಶಾಂತ ಕುಮಾರ್ ಸಮಿತಿಯ 2015 ವರದಿ ಪ್ರಕಾರ ಶೇಕಡ 6ರಷ್ಟು ಕೃಷಿ ಕುಟುಂಬಗಳು ಮಾತ್ರವೇ ಎಂಎಸ್​ಪಿ ದರದಲ್ಲಿ ಸರ್ಕಾರಕ್ಕೆ ಗೋಧಿ ಮತ್ತು ಅಕ್ಕಿ ಮಾರಾಟ ಮಾಡುತ್ತವೆ. ಕಳೆದ ಕೆಲವು ವರ್ಷಗಳಿಂದ ಈ ಪ್ರಮಾಣದಲ್ಲಿ ಏರಿಕೆಯಾಗಿದೆ.
ಸರ್ಕಾರದ ನಿಲುವು ಏನು?:ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಎಸ್​ಪಿಯನ್ನು ಇನ್ನಷ್ಟು ಪಾರದರ್ಶಕವಾಗಿಸುವುದಕ್ಕೆ ಸಮಿತಿಯನ್ನು ರಚಿಸುತ್ತಿರುವುದಾಗಿ ಘೋಷಿಸಿದ್ದರು. ಬೆಳೆಗಳಿಂದ ಬೆಳೆಗಳಿಗೆ ಇದು ವ್ಯತ್ಯಸ್ತವಾಗಿರಲಿದೆ. ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ನೀಡುವ ಅಂಶವನ್ನು ಕೂಡ ಅವರು ಪ್ರತಿಪಾದಿಸಿದ್ದರು. ಸಮಿತಿ ಯಲ್ಲಿ ಕೃಷಿಕರ ಗುಂಪುಗಳು ಇರಲಿದ್ದು, ರಾಜ್ಯ, ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಕೃಷಿ ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಕೂಡ ಇರುತ್ತಾರೆ.
ಕಾನೂನು ಬೇಕೆಂಬ ಬೇಡಿಕೆ ಯಾಕೆ?:ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಎಸ್​ಕೆಎಂ, ಸಮಗ್ರ ವೆಚ್ಚ +50% ಎಂಬ ಸೂತ್ರದ ಪ್ರಕಾರವೇ ಎಲ್ಲ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ನಿರ್ಧಾರವಾಗಬೇಕು. ಕೃಷಿ ಉತ್ಪನ್ನಗಳ ಬೆಲೆ ನಿಗದಿಗೆ ಕಾನೂನುಬದ್ಧತೆಯನ್ನು ಒದಗಿಸಬೇಕು. ಪ್ರತಿಕೃಷಿಕರಿಗೂ ಇದರ ಪ್ರಯೋಜನ ಲಭ್ಯವಾಗಬೇಕು ಎಂಬ ಬೇಡಿಕೆ ಮುಂದಿರಿಸಿದೆ. ಎಸ್​ಕೆಎಂ ಬಣದೊಳಗೆ ಈ ವಿಚಾರವಾಗಿ ವಿಭಿನ್ನ ನಿಲುವುಗಳಿವೆ ಎಂಬುದೂ ವಾಸ್ತವ. ಈಗ ಚಾಲ್ತಿಯಲ್ಲಿರುವ ಎಂಎಸ್​ಪಿಯ ಬಹುಪಾಲು ಪ್ರಯೋಜನ ಪಂಜಾಬ್ ಮತ್ತು ಹರಿಯಾಣಗಳಿಗೆ ಮಾತ್ರ ಸೀಮಿತವಾಗಿದೆ. ಇದನ್ನು 15 ಬಿನ್ನ ಕೃಷಿ ಹವಾಮಾನ ವಲಯಗಳಿಗೆ ವಿಂಗಡಿಸಿ ನೀಡಬೇಕು ಎಂಬುದು ಭಾರತೀಯ ಕಿಸಾನ್ ಸಂಘದ ಬೇಡಿಕೆ.
ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − ten =
Remember me
