ಮುಂಬೈ:ಐಸಿಐಸಿಐ ಬ್ಯಾಂಕ್​ನಿಂದ ಒಟ್ಟಾರೆ 1,730 ಕೋಟಿ ರೂಪಾಯಿ ಸಾಲ ಪಡೆದು ವಂಚನೆ ಸಂಬಂಧ ಪ್ರಕರಣ ದಾಖಲಾಗಿ ಮೂರು ವರ್ಷಗಳ ತರುವಾಯ ಆರೋಪಿಗಳನ್ನು ಸಿಬಿಐ ಬಂಧಿಸಿದೆ. ವಿಡಿಯೋಕಾನ್​ನ ಅಧ್ಯಕ್ಷ ವೇಣುಗೋಪಾಲ ಧೂತ್, ಪ್ರಕರಣದಲ್ಲಿ ಶಾಮೀಲಾದ ಐಸಿಐಸಿಐ ಬ್ಯಾಂಕ್​ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ಮತ್ತು ಸಿಇಒ ಚಂದಾ ಕೊಚ್ಚಾರ್, ಆಕೆಯ ಪತಿ ದೀಪಕ್ ಕೊಚ್ಚಾರ್​ರನ್ನು ಕೋರ್ಟ್ ಬುಧವಾರದವರೆಗೆ ಸಿಬಿಐ ವಶಕ್ಕೆ ನೀಡಿದೆ. ಇದೇ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಧೂತ್ ಅವರನ್ನು ಬಂಧಿಸಿತ್ತು. ಆದರೆ, ಅವರಿಗೆ ಕೋರ್ಟ್ ಜಾಮೀನು ನೀಡಿದೆ.
ಆರೋಪ ಸಾಬೀತಾದರೆ 10 ವರ್ಷ ಜೈಲು:2019ರ ಜನವರಿಯಲ್ಲಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ಅವ್ಯಹಾರದ ನಡೆಸಿದ ಆರೋಪದ ಮೇಲೆ ಐಪಿಸಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿತ್ತು. ಈ ಆರೋಪ ಸಾಬೀತಾದರೆ 10 ವರ್ಷದ ವರೆಗೆ ಸೆರೆವಾಸ ಆಗಲಿದೆ.
ಪ್ರಕರಣದ ವಿವರ:ಆರ್ಥಿಕ ಮುಗ್ಗಟ್ಟಿನಲ್ಲಿದ್ದ ವಿಡಿಯೋಕಾನ್ ಸಮೂಹಕ್ಕೆ ಐಸಿಐಸಿಐ ಬ್ಯಾಂಕ್ 2009ರಿಂದ 2011ರವರೆಗೆ ದೊಡ್ಡ ಮೊತ್ತದ ಆರು ಲೋನ್​ಗಳನ್ನು (ಒಟ್ಟು ಮೊತ್ತ 1,730 ಕೋಟಿ ರೂ.) ನೀಡಿತ್ತು. ಇದರಲ್ಲಿ 300 ಕೋಟಿ ರೂಪಾಯಿ ಸಾಲವನ್ನು ಬ್ಯಾಂಕ್​ನ ಎಂಡಿ ಆಗಿದ್ದ ಚಂದಾ ಕೊಚ್ಚಾರ್ ಅಧ್ಯಕ್ಷತೆಯ ಸಮಿತಿ ಮಂಜೂರು ಮಾಡಿತ್ತು. ಇದಕ್ಕೆ ಪ್ರತಿಯಾಗಿ ಅವರಿಗೆ 64 ಕೋಟಿ ರೂಪಾಯಿ ಸಂದಾಯವಾಗಿದೆ ಎಂಬುದು ಪ್ರಕರಣದ ತಿರುಳು. ಈ ಲಂಚದ ಹಣವನ್ನು ಚಂದಾ ಪತಿ ದೀಪಕ್ ಕೊಚ್ಚಾರ್ ಒಡೆತನದ ನುಪವರ್ ರಿನಿವಬಲ್ ಸಂಸ್ಥೆಗೆ ವೇಣುಗೋಪಾಲ್ ಧೂತ್ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ 2016ರಲ್ಲಿ ಚರ್ಚ್​ಗೇಟ್ ಬಳಿಯ ಫ್ಲ್ಯಾಟ್ ಅನ್ನು (5 ಕೋಟಿ ರೂ. ಮೌಲ್ಯ) ಕೇವಲ 11 ಲಕ್ಷ ರೂಪಾಯಿಗೆ ದೀಪಕ್ ಅವರ ಕುಟುಂಬದ ಹೆಸರಿನ ಟ್ರಸ್ಟ್​ಗೆ ಧೂತ್ ಮಾರಾಟ ಮಾಡಿದ್ದಾರೆ. ಧೂತ್ ಐಸಿಐಸಿಐ ಬ್ಯಾಂಕ್​ನಿಂದ ಮಾತ್ರವಲ್ಲದೆ 26 ಬ್ಯಾಂಕ್​ಗಳಿಂದ ಸಾಲಪಡೆದಿದ್ದಾರೆ. ಸಾಲ ವಿತರಣೆಯಲ್ಲಿನ ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆಯೇ ಚಂದಾ ಕೊಚ್ಚಾರ್​ರನ್ನು ಐಸಿಐಸಿಐ ಬ್ಯಾಂಕ್ ಕಡ್ಡಾಯ ರಜೆ ಮೇಲೆ ಕಳುಹಿಸಲಾಯಿತು. ಈ ಬಗ್ಗೆ ಬ್ಯಾಂಕ್ ಸ್ವತಂತ್ರ ಸಂಸ್ಥೆಯಿಂದ ಆಂತರಿಕ ತನಿಖೆ ನಡೆಸಿತು. ಅಷ್ಟರಲ್ಲಿ ಚಂದಾ ರಾಜೀನಾಮೆ ನೀಡಿದ್ದರು. ಆದರೆ, ಅದು ಅಂಗೀಕಾರ ಆಗಿರಲಿಲ್ಲ. ತನಿಖಾ ವರದಿಯಲ್ಲಿ ಚಂದಾ ಕೊಚ್ಚಾರ್ ಸಾಲ ವಿತರಣೆ ಮಾಡುವ ವೇಳೆ ನಿಯಮಗಳನ್ನು ಪಾಲಿಸಿಲ್ಲ ಮತ್ತು ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆಂಬುದು ದೃಢಪಟ್ಟಿತು. ಇದರ ಆಧಾರದ ಮೇಲೆ ಚಂದಾರನ್ನು ಬ್ಯಾಂಕ್ ವಜಾ ಮಾಡಿತು. ಅವರಿಗೆ ನಿವೃತ್ತಿಯ ನಂತರ ಸಿಗಬಹುದಾದ ಸೌಲಭ್ಯಗಳನ್ನು ತಡೆಹಿಡಿಯಿತು. ಈ ಪ್ರಕರಣದಲ್ಲಿ ನಡೆದಿರುವ ಹಣಕಾಸು ಅವ್ಯವಹಾರ ಕುರಿತು ಇ.ಡಿ. ತನಿಖೆ ನಡೆಸುತ್ತಿದೆ.
Video | ಸ್ಟ್ರೆಚರ್​ನಲ್ಲಿ ರೋಗಿಯ ಕರೆದೊಯ್ಯುವಾಗ ನಡೆಯಿತು ಭೀಕರ ಘಟನೆ; ಕುಸಿದ ಲಿಫ್ಟಲ್ಲಿ ಸಿಕ್ಕಿಕೊಂಡ ಸ್ಟ್ರೆಚರ್​, ಕೆಳಕ್ಕೆ ಬಿದ್ದ ರೋಗಿ!

ಅರೆಬೆತ್ತಲೆಯಾಗಿ ಎರಡನೇ ಮಹಡಿಗೆ ಹತ್ತಿ ಒಂಟಿ ಮಹಿಳೆ ಇದ್ದ ಮನೆ ಬಾಗಿಲು ಬಡಿದ; ಇಡೀ ಕಟ್ಟಡದಲ್ಲಿ ಯಾರೂ ಇಲ್ಲದಾಗ ಅವಾಂತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
