ನವದೆಹಲಿ:ನ್ಯಾಷನಲ್​ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ಪಶ್ಚಿಮ ಬಂಗಾಳದ ಮುರ್ಷಿದಾಬಾದ್​, ಕೇರಳದ ಎರ್ನಾಕುಲಂನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು ಒಂಭತ್ತು ಅಲ್​ಕೈದಾ ಉಗ್ರರನ್ನು ಬಂಧಿಸಿದೆ. ಈ ಪೈಕಿ ಮೂವರನ್ನು ಕೇರಳದಿಂದಲೂ, ಆರು ಉಗ್ರರನ್ನು ಪಶ್ಚಿಮ ಬಂಗಾಳದಿಂದಲೂ ಬಂಧಿಸಲಾಗಿದೆ.
ಬಂಧಿತರನ್ನು ಮುರ್ಷಿದ್​ ಹಸನ್​, ಇಯಾಕುಬ್ ಬಿಸ್ವಾಸ್​, ಮೊಸಾರಫ್ ಹೊಸೇನ್​ ಅವರನ್ನು ಎರ್ನಾಕುಲಂನಿಂದಲೂ, ನಜ್ಮಸ್​ ಸಾಕಿಬ್​, ಅಬು ಸುಫಿಯಾನ್​, ಮೈನುಲ್ ಮೊನ್ಡಲ್, ಲಿಯೂ ಯೀನ್ ಅಹ್ಮದ್​, ಅಲ್ ಮಮುನ್​ ಕಮಲ್​, ಅತಿತುರ್​ ರೆಹ್ಮಾನ್​ನನ್ನು ಮುರ್ಷಿದಾಬಾದ್​ನಿಂದಲೂ ಬಂಧಿಸಲಾಗಿದೆ. ಬಂಧಿತರನ್ನು ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿನ ಸಂಬಂಧಿತ ಕೋರ್ಟ್​ಗಳಲ್ಲಿ ಹಾಜರುಪಡಿಸಲಾಗುತ್ತಿದೆ ಎಂದು ಎನ್​ಐಎ ತಿಳಿಸಿದೆ.
ಇದನ್ನೂ ಓದಿ:ಡ್ರಗ್ಸ್ ನಂಟು- ಮಂಗಳೂರಿನಲ್ಲಿ ನಟ ಕಿಶೋರ್ ಅಮನ್​ ಶೆಟ್ಟಿ ಅರೆಸ್ಟ್
ರಾಷ್ಟ್ರ ರಾಜಧಾನಿ ಮತ್ತು ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸುವುದಕ್ಕೆ ಪ್ರಚೋದಿತರಾಗಿದ್ದರು. ಈ ಉಗ್ರರ ತಂಡ ಫಂಡ್ ರೈಸಿಂಗ್ ನಲ್ಲಿ ಸಕ್ರಿಯವಾಗಿತ್ತು ಅಲ್ಲದೆ, ಕೆಲವು ಸದಸ್ಯರ ತಂಡ ದೆಹಲಿಗೆ ತೆರಳಿ ಶಸ್ತ್ರಾಸ್ತ್ರಗಳನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಪಿತೂರಿ ರೂಪಿಸಿಕೊಂಡಿತ್ತು ಎಂಬ ಅಂಶ ತನಿಖೆ ವೇಳೆ ಬಹಿರಂಗಗೊಂಡಿದೆ. (ಏಜೆನ್ಸೀಸ್)
Leu Yean Ahmed and Abu Sufiyan from West Bengal and Mosaraf Hossen & ​Murshid Hasan from Kerala are among the nine Al-Qaeda terrorists arrested by National Investigation Agency (NIA)pic.twitter.com/jMnRjTIjED
— ANI (@ANI)September 19, 2020

9 ಅಲ್​ಕೈದಾ ಉಗ್ರರ ಸೆರೆ- ಕೇರಳ, ಪಶ್ಚಿಮ ಬಂಗಾಳ ಸೇರಿ ವಿವಿಧೆಡೆ ಎನ್​ಐಎ ವಿಶೇಷ ಕಾರ್ಯಾಚರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
