ಸೆಬುವಾನಾ (ಫಿಲಿಪ್ಪೀನ್ಸ್​):ನಿಯಮ ಅಂದರೆ ನಿಯಮ ಅಷ್ಟೇ. ಅದನ್ನು ಯಾರೇ ಉಲ್ಲಂಘಿಸಲಿ, ಅವರಿಗೆ ಶಿಕ್ಷೆ ಕಟ್ಟಿಟ್ಟದ್ದೇ. ಕಾನೂನು ಎಲ್ಲರಿಗೂ ಒಂದೇ ಎನ್ನುವುದು ಅದಕ್ಕೇ ತಾನೆ? ಲಾಕ್​ಡೌನ್​ ನಿಯಮಕ್ಕೂ ಇದು ಅನ್ವಯ.
ಅದೇ ನಿಯಮ ಇದೀಗ ಫಿಲಿಪ್ಪೀನ್ಸ್​ ದೇಶದ ಸೆಬುವಾನಾ ಪ್ರಾಂತ್ಯದ ಬ್ಯೂಟಿ ಕ್ವೀನ್​ಗೂ ಮುಳುವಾಗಿದೆ. ತಾನು ಸುರಸುಂದರಿ ಎಂಬ ಬಿರುದು ಇರುವವಳು. ಏನು ಮಾಡಿದರೂ ನಡೆಯತ್ತೆ ಎಂದುಕೊಂಡಿದ್ದ ಈ ಬೆಡಗಿ ಇದೀಗ ತಾನು ಮಾಡಿದ ತಪ್ಪಿನಿಂದ ಕ್ವಾರಂಟೈನ್​ ಗೃಹದಲ್ಲಿ ಇರಬೇಕಾದ ಪರಿಸ್ಥಿತಿ ತಲೆದೋರಿದೆ.
ಇದನ್ನೂ ಓದಿ:ವಿಮಾನ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಾರಾಟಕ್ಕೆ ಮುಹೂರ್ತ ಫಿಕ್ಸ್​- ಇಲ್ಲಿದೆ ನೋಡಿ ಸಂಪೂರ್ಣ ವಿವರ
ಈ ಸುಂದರಿಯ ಹೆಸರು 26 ವರ್ಷದ ಮರಿಯಾ ಗಿಗಾಂಟೆ. ಈಗೆ ತನ್ನ ಸ್ನೇಹಿತ 35 ವರ್ಷದ ಜೇವಿಯರ್ ಫಿಲೋಸಾ ಕ್ಯಾಸ್ಟ್ರೊ ಜತೆ ಈಜುಕೊಳಕ್ಕೆ ಹೋಗಿ ಸ್ಚಚ್ಛಂದವಾಗಿ ವಿಹರಿಸುತ್ತಿದ್ದಳು.
ಈ ಪ್ರಾಂತ್ಯದಲ್ಲಿಯೂ ಲಾಕ್​ಡೌನ್​ ಹೇರಲಾಗಿದ್ದು, ಕಟ್ಟುನಿಟ್ಟಿನ ಕಠಿಣ ನಿಯಮಾವಳಿಗಳನ್ನು ರೂಪಿಸಲಾಗಿದೆ. ಆದರೆ ಇದಕ್ಕೆ ಕ್ಯಾರೇ ಎನ್ನದ ಚೆಲುವೆ ತನ್ನ ಬಾಯ್​ಫ್ರೆಂಡ್​ ಜತೆ ಅಲ್ಲಿಗೆ ಹೋಗಿದ್ದಳು. ಅಷ್ಟಕ್ಕೂ ಈಜುಕೊಳಕ್ಕೆ ಹೋಗುವ ಮಾರ್ಗಮಧ್ಯೆಯೂ ಹಲವಾರು ಸುಳ್ಳುಗಳನ್ನು ಹೇಳಿಕೊಂಡು ಹೋಗಿದ್ದಳೀಕೆ.
ಇದನ್ನೂ ಓದಿ:ಲಾಕ್​ಡೌನ್​ ನಿಯಮ ಉಲ್ಲಂಘನೆ: ಜೇಬಿಗೆ ಬೀಳಲಿದೆ ಭಾರಿ ಕತ್ತರಿ- ಒಂಬತ್ತು ಕೋಟಿ ರೂ. ದಂಡ ವಸೂಲಿ!
ತನ್ನ ಸ್ನೇಹಿತನ ಜತೆ ಒಂಟಿಯಾಗಿ ಈಜುಕೊಳದಲ್ಲಿ ವಿಹರಿಸುವ ಇಚ್ಛೆಯಿಂದಾಗಿ ತನಗೆ ತುರ್ತು ಕಾರ್ಯ ಇರುವಂತೆ ದಾಖಲೆಗಳನ್ನು ಸೃಷ್ಟಿಸಿ ಮಾರ್ಗಮಧ್ಯೆ ಪೊಲೀಸರಿಗೆ ನೀಡಿದ್ದಳು. ಗಡಿ ನಿಯಂತ್ರಣ ಚೆಕ್​ಪೋಸ್ಟ್​ ಬಳಿಯೂ ಈ ದಾಖಲೆಗಳನ್ನೇ ತೋರಿಸಿ ಈಜುಕೊಳದವರೆಗೆ ಹೋಗುವಲ್ಲಿ ಯಶಸ್ವಿಯೂ ಆಗಿದ್ದಳು.
ಆದರೆ ಪೊಲೀಸರು ಬಿಟ್ಟಾರೆಯೇ? ಇವಳ ಮತ್ತು ಸ್ನೇಹಿತನ ನಡವಳಿಕೆ ಅವರಿಗೆ ಸಂಶಯ ಬರಿಸಿದೆ. ಆದ್ದರಿಂದ ಅವರ ಹಿಂದೆಯೇ ಬೆನ್ನುಹತ್ತಿದ ಪೊಲೀಸರಿಗೆ ವಾಸ್ತವದ ಅರಿವಾಗಿದೆ. ಇಬ್ಬರೂ ಈಜುಕೊಳದಲ್ಲಿ ಮೋಜು ಮಾಡುತ್ತಿದ್ದಾಗ ಇಬ್ಬರನ್ನೂ ಬಂಧಿಸಿದ್ದಾರೆ.
ಇದನ್ನೂ ಓದಿ:ಸ್ವಲ್ಪದರಲ್ಲಿಯೇ ತಪ್ಪಿತು ಚೀನಾದ ಗುರಿ: ಇಲ್ಲದಿದ್ರೆ ನ್ಯೂಯಾರ್ಕ್ ಆಗುತ್ತಿತ್ತೇ ಭಸ್ಮ?
ಅವರ ಮೇಲೆ ಅಲ್ಲಿಯ ವಿವಿಧ ಕಾನೂನಿನ ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಹಲವಾರು ಊರುಗಳನ್ನು ದಾಟಿ ಅವರು ಬಂದಿರುವ ಕಾರಣ, ಸದ್ಯ ಇಬ್ಬರನ್ನೂ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಕ್ವಾರಂಟೈನ್​ ಮುಗಿದ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ನಡುವೆಯೇ ಕೋರ್ಟ್​ ಮೊರೆ ಹೋಗಿದೆ ಈ ಜೋಡಿ. ಸದ್ಯ ಅದರ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ!(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve − 6 =
Remember me
