|ರಮೇಶ ದೊಡ್ಡಪುರ
-ನಿಖರ ಅಂಕಿ-ಅಂಶ ಸಿಕ್ಕಿಲ್ಲ. ಈ ಹಿಂದೆ ನಾನು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆಗಿದ್ದಾಗ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಯಿತು. ವಿವಿಧ ರಾಯಭಾರ ಕಚೇರಿಗಳಿಗೆ ಪತ್ರ ಬರೆದು, ಕರ್ನಾಟಕದವರು ಎಷ್ಟು ಜನರಿದ್ದಾರೆ ತಿಳಿಸಿ ಎಂದು ಕೊರಿದ್ದೆವು. ಮತಪಟ್ಟಿ ಪರಿಷ್ಕರಣೆ ವೇಳೆ ಎನ್​ಆರ್​ಐಗಳ ಮಾಹಿತಿಯನ್ನೂ ಕಲೆ ಹಾಕುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಮುಂದಾಗಿದ್ದೆವು. ಆದರೆ ಆ ವೇಳೆಗೆ ಸರ್ಕಾರ ಬದಲಾಗಿದ್ದರಿಂದ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಅಂದಾಜಿನ ಪ್ರಕಾರ ಕರ್ನಾಟಕದ 16 ಲಕ್ಷ ಜನರು ವಿವಿಧ ದೇಶಗಳಲ್ಲಿದ್ದಾರೆ. ಈ ಹಿಂದೆಯೇ ಅಲ್ಲಿ ತೆರಳಿ, ನೆಲೆಸಿ ನಾಗರಿಕತ್ವ ಪಡೆದಿರುವವರ ಸಂಖ್ಯೆ ಇದರಲ್ಲಿ ಸೇರ್ಪಡೆ ಆಗಿಲ್ಲ. ಕರ್ನಾಟಕದಿಂದ ಅತಿ ಹೆಚ್ಚು ಜನರಿರುವುದು ಗಲ್ಪ್ ದೇಶಗಳಲ್ಲಿ. ಉದ್ಯಮಿಗಳಿಂದ ಹಿಡಿದು ಕಾರ್ವಿುಕರವರೆಗಿದ್ದಾರೆ. ಇದರಲ್ಲೂ ಹೆಚ್ಚು ಜನರು ಕರಾವಳಿಯಿಂದ, ನಂತರದಲ್ಲಿ ಬೆಂಗಳೂರಿನಿಂದ ಇದ್ದಾರೆ. ನಂತರದಲ್ಲಿ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾದಲ್ಲಿದ್ದಾರೆ. ಕೀನ್ಯಾ ಸೇರಿ ಅನೇಕ ದೇಶಗಳಲ್ಲಿ 10 ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ.
-ಗಲ್ಪ್ ದೇಶಗಳಲ್ಲಿ ಇರುವವರಿಂದಲೇ ಹೆಚ್ಚು ಹೂಡಿಕೆ ಇದೆ. ವಿಮಾನದ ಮೂಲಕ ಕೇವಲ 3 ಗಂಟೆ ಪ್ರಯಾಣವಾದ್ದರಿಂದ ಇಲ್ಲಿನ ಸಂಬಂಧಿಕರ ಜತೆಗೆ ಸಂಪರ್ಕ ಉತ್ತಮವಾಗಿದೆ. ಅನೇಕರು ಕುಟುಂಬವನ್ನು ಇಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ್ದಾರೆ. ಹಾಗಾಗಿ ಹೂಡಿಕೆ ಮಾಡುತ್ತಾರೆ. ಆದರೆ ದೊಡ್ಡ ಮಟ್ಟದ ಹೂಡಿಕೆಯನ್ನು ಅಮೆರಿಕ, ಯುರೋಪ್ ದೇಶಗಳಲ್ಲಿರುವ ಕನ್ನಡಿಗರಿಂದಲೇ ನಿರೀಕ್ಷಿಸಬೇಕು.
-ಮುಖ್ಯವಾಗಿ ಎರಡು ರೀತಿಯ ಸಮಸ್ಯೆಗಳಿವೆ. ಭಾರತದಲ್ಲಿ ಆಸ್ತಿ ಖರೀದಿ ಮಾಡಿ ಅದರ ನಿರ್ವಹಣೆ ಅಥವಾ ಬಾಡಿಗೆಗೆ ನೀಡಲು ಸಂಬಂಧಿಕರಿಗೆ ಜಿಪಿಎ ಮಾಡಿಕೊಟ್ಟಿರುತ್ತಾರೆ. ಅನೇಕರು ಇದನ್ನು ದುರುಪಯೋಗಪಡಿಸಿಕೊಂಡು ಮಾರಾಟ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ, ಸ್ಥಳೀಯರಿಗೇ ಮಣೆ ಹಾಕುತ್ತಾರೆ. ದೂರದೇಶಗಳಿಂದ ಬರಲು ಆಗುವುದಿಲ್ಲ. ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ಎದುರಿಸುವುದು ಮತ್ತೂ ತ್ರಾಸದ ಕೆಲಸ. ಎನ್​ಆರ್​ಐಗಳ ಆಸ್ತಿ ರಕ್ಷಣೆಗೆ ಸರ್ಕಾರ ಕಠಿಣ ನಿಯಮ ರೂಪಿಸಿ ಜಾರಿ ಮಾಡಬೇಕು.
ಎರಡನೆಯದ್ದು, ಮದುವೆಯಾಗಿ ದೂರವಾಗುವುದು. ಭಾರತದಲ್ಲಿ ಮದುವೆಯಾಗಿ ಕರೆದೊಯ್ದ ನಂತರವೇ ವಿದೇಶದಲ್ಲೂ ಆತನಿಗೆ ಮದುವೆಯಾಗಿದೆ ಅಥವಾ ಸಂಬಂಧವಿದೆ ಎಂಬುದು ತಿಳಿಯುತ್ತದೆ. ಗಂಡನ ಬಳಿಯೇ ಪಾಸ್​ಪೋರ್ಟ್ ಇರುವುದರಿಂದ ಹಿಂದಿರುಗಿ ಬರಲೂ ಆಗುವುದಿಲ್ಲ. ಗಂಡನ ವೀಸಾ ಅವಲಂಬಿತೆಯಾಗಿ ವೀಸಾ ಪಡೆದು ತೆರಳಿರುವುದರಿಂದ ವಿದೇಶದಲ್ಲಿ ಉದ್ಯೋಗ ವನ್ನೂ ಮಡಲಾಗದೆ ಸಂಕಷ್ಟ ಪಡುತ್ತಾರೆ.
-ಅನಿವಾಸಿ ಭಾರತೀಯ ಸಮಿತಿಗೆ ಮೂರು ವರ್ಷದಿಂದ ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ನಾನು ಈ ಹಿಂದೆ ಅಮೆರಿಕ ರಾಯಭಾರ ಕಚೇರಿಯಲ್ಲಿ 12 ವರ್ಷ, ನಂತರ ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವವಿರುವ ಕಾರಣ, ಸಮಿತಿಯಿಂದ ನಾನು ಹೊರಬಂದ ನಂತರವೂ, ನೆರವು ಕೋರಿ ಪ್ರತಿದಿನ 8-10 ದೂರವಾಣಿ ಕರೆಗಳಿರುತ್ತವೆ. ಈಗಿನ ವಿದೇಶಾಂಗ ಸಚಿವರು, ನಾಗರಿಕ ವಿಮಾನಯಾನ ಸಚಿವರು ಈ ಹಿಂದೆ ವಿದೇಶಾಂಗ ಅಧಿಕಾರಿಗಳೇ(ಐಎಫ್​ಎಸ್) ಆಗಿದ್ದರಿಂದ ವೈಯಕ್ತಿಕ ಪರಿಚಯದ ಆಧಾರದಲ್ಲಿ ಸಹಾಯ ಮಾಡಲು ಪ್ರಯತ್ನಿಸಿದ್ದೇನೆ.
ಕರೊನಾ ಸಮಯದಲ್ಲಿ ಎನ್​ಆರ್​ಐಗಳ ಸಮಸ್ಯೆ ಬಿಗಡಾಯಿಸಿತು. ವಂದೇ ಭಾರತ್ ಯೋಜನೆಯಲ್ಲಿ ಕೇರಳದವರೇ ಹೆಚ್ಚಿದ್ದರು, ಕ್ರಮೇಣ ಕರ್ನಾಟಕದವರಿಗೆ ಅವಕಾಶ ಕೊಡಿಸಲಾಯಿತು. ಗಲ್ಪ್ ಜತೆಗೆ ಲಾವೋಸ್, ಕಾಂಬೋಡಿಯಾದಂಥ ದೇಶಗಳಿಂದಲೂ ಕನ್ನಡಿಗರನ್ನು ಕರೆತರಲು 56 ಚಾರ್ಟರ್ಡ್ ವಿಮಾನಗಳಿಗೆ ಒಪ್ಪಿಗೆ ಪಡೆಯ ಲಾಯಿತು. ಇಲ್ಲಿವರೆಗೆ 65 ಸಾವಿರ ಜನರನ್ನು ವಿದೇಶಗಳಿಂದ ಕರೆತರಲು ಸಹಾಯ ಮಾಡಿದ್ದೇನೆ. ಇದರಲ್ಲಿ ಕರಾವಳಿಯವರೇ 40 ಸಾವಿರದಷ್ಟಿದ್ದಾರೆ. ವಿವಿಧ ದೇಶಗಳಲ್ಲಿ ರಾಯಭಾರ ಕಚೇರಿಗಳ ಸಂಪರ್ಕವಿದ್ದವರು ಅನಿವಾಸಿ ಭಾರತೀಯ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದರೆ ಈ ಕೆಲಸಗಳು ಮತ್ತಷ್ಟು ಸರಾಗವಾಗಿ ನಡೆಯುತ್ತಿದ್ದವು.
-ದೇಶದಲ್ಲಿ ಎನ್​ಆರ್​ಐಗಳ ಬಗ್ಗೆ ಹೆಚ್ಚು ಗಮನ ನೀಡಿರುವುದು ಕೇರಳದಲ್ಲಿ. ಅಲ್ಲಿ ಪ್ರತ್ಯೇಕ ಸಚಿವಾಲಯವೇ ಇದೆ. ಅಲ್ಲಿನ ಆರ್ಥಿಕತೆಗೂ ಎನ್​ಆರ್​ಐಗಳು ಗಮನಾರ್ಹ ಕೊಡುಗೆ ನೀಡುತ್ತಾರೆ. ಪಂಜಾಬ್, ತೆಲಂಗಾಣ, ಆಂಧ್ರ ಪ್ರದೇಶ, ರಾಜಸ್ಥಾನದಲ್ಲೂ ಪ್ರತ್ಯೇಕ ಇಲಾಖೆ ರೂಪಿಸಿದ್ದಾರೆ. ಪುದುಚೆರಿಯಲ್ಲಿ ಮೇಲುಸ್ತುವಾರಿಯಿದೆ. ಕರ್ನಾಟಕದಲ್ಲಿ ಎನ್​ಆರ್​ಐ ಫೋರಂ ಉಪಾಧ್ಯಕ್ಷರ ನೇಮಕ ಮಾಡಿ ಎಂದು ಇತ್ತೀಚೆಗೂ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆದಿದೆ. ರಾಜ್ಯದಲ್ಲಿ ಎನ್​ಆರ್​ಐಗಳ ಸಮಸ್ಯೆ ಬಗೆಹರಿಸಲು, ವಿದೇಶಾಂಗ ವ್ಯವಹಾರಗಳ ಅರಿವಿರುವವರನ್ನು ಉಪಾಧ್ಯಕ್ಷರಾಗಿ ನೇಮಿಸಬೇಕು. ಮುಂದಿನ ದಿನಗಳಲ್ಲಿ ಪ್ರತ್ಯೇಕ ಇಲಾಖೆ ರೂಪಿಸುವತ್ತ ಗಂಭೀರ ಚಿಂತನೆ ನಡೆಯಬೇಕು.
ದೂರ ಮೊದಲ ಸಮಸ್ಯೆ. ಗಲ್ಪ್ ದೇಶಗಳಿಗೆ ಹೋಲಿಸಿದಲ್ಲಿ ತುಂಬ ದೂರವಾಗುತ್ತದೆ. ಹೂಡಿಕೆ ಮಾಡಿದರೆ ಅದರ ಕುರಿತು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇಲ್ಲಿ ಉದ್ಯಮ ಸ್ಥಾಪನೆ ಅಷ್ಟು ಸುಲಭವಾಗಿಲ್ಲ. ಕಚೇರಿಗಳಿಗೆ ಅಲೆಯುವುದು, ಲಂಚಗುಳಿತನ, ವಿಳಂಬ ನೀತಿಗಳು ಬಾಧಿಸುತ್ತವೆ. ಈಸ್ ಆಫ್ ಡೂಯಿಂಗ್ ಬಿಜಿನೆಸ್ ಪರಿಣಾಮಕಾರಿಯಾಗಿ ಜಾರಿಯಾದರೆ ಈ ನಿಟ್ಟಿನಲ್ಲಿ ಪ್ರಯತ್ನಗಳು ಆಗಬಹುದು.
ಕೆಲವು ಏಜೆನ್ಸಿಗಳು ವಿದೇಶಗಳಿಗೆ ಕರೆದೊಯ್ದು ಅಕ್ರಮ ದಂಧೆಯಲ್ಲಿ ತೊಡಗಿಸುವ, ಹೆಚ್ಚು ಹಣ ಪಡೆದು ವಂಚಿಸುವ ಕೆಲಸ ಆಗುತ್ತಿವೆ. ವಂಚಕ ಏಜೆನ್ಸಿಗಳ ಸಮಸ್ಯೆ ಜತೆಗೆ, ಯಾವ ದೇಶಕ್ಕೆ ಯಾವ ರೀತಿ ಹೋಗಬೇಕು ಎಂಬ ಅರಿವಿನ ಕೊರತೆಯೂ ಸಮಸ್ಯೆ ಮೂಡಿಸುತ್ತದೆ. ಉದಾಹರಣೆಗೆ, ಭಾರತದಲ್ಲಿ ಬಳಸುವ ಕೆಲ ಔಷಧಗಳು ಗಲ್ಪ್ ದೇಶಗಳಲ್ಲಿ ನಿಷೇಧಿಸಲ್ಪಟ್ಟಿವೆ. ಈ ಔಷಧ ಪಡೆಯಬೇಕಾದವರು ವೈದ್ಯರಿಂದ ಸೂಕ್ತ ಪ್ರಮಾಣಪತ್ರ ಪಡೆದರೆ ಸರಿ, ಇಲ್ಲದಿದ್ದರೆ ಅರಬ್ ದೇಶಗಳಲ್ಲಿ ಜೈಲಿಗೇ ಹಾಕಿಬಿಡುತ್ತಾರೆ. ಸುಷ್ಮಾ ಸ್ವರಾಜ್ ವಿದೇಶಾಂಗ ಮಂತ್ರಿಯಾಗಿದ್ದಾಗ ಕರ್ನಾಟಕದಿಂದ ಸಭೆಗೆ ತೆರಳಿದ್ದೆ. ವಿವಿಧ ದೇಶಗಳಿಗೆ ಕರೆದೊಯ್ದು ವಂಚಿಸುವ ಏಜೆನ್ಸಿಗಳ ಕುರಿತು ಚರ್ಚೆ ನಡೆದಿತ್ತು. ನಂತರ ಕೇಂದ್ರ ಸರ್ಕಾರದಿಂದಲೇ ಕೆಲವು ಏಜೆನ್ಸಿಗಳನ್ನು ಕಪು್ಪಪಟ್ಟಿಗೆ ಸೇರಿಸಲು ಅಧಿಸೂಚನೆ ಹೊರಡಿಸಲಾಯಿತು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಕಲ್ಯಾಣ ಸಮಿತಿ ರಚನೆಗೆ ಚಾಲನೆ ನೀಡಲಾಯಿತು. ನಂತರದ ಸ್ಥಿತಿ ತಿಳಿದಿಲ್ಲ.
VIDEO | ಸೀರೆಯುಟ್ಟು ಪಲ್ಟಿ ಹೊಡೆದ ಮಹಿಳಾ ಜಿಮ್ನಾಸ್ಟ್, ವಿಡಿಯೋ ವೈರಲ್!

ಸನ್ನಿ ಲಿಯೋನ್​ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್​ ಯಂಗ್​ಮ್ಯಾನ್​ ಇವರೇ..

ಗರ್ಭಿಣಿ ಕರೀನಾ ಕಪೂರ್ ಈಗ ಮಿಸ್ ಮಾಡಿಕೊಳ್ಳುತ್ತಿರುವುದಾದರೂ ಏನು?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + twenty =
Remember me
