ನವದೆಹಲಿ:ಇಂದಿನಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರ್ಟಿಕಲ್​ 370, ಜಿಎಸ್​ಟಿ ಮತ್ತು ಒಂದು ಶ್ರೇಣಿ-ಒಂದು ಪಿಂಚಣಿ ಮಸೂದೆಗಳು ಸೇರಿದಂತೆ ತಮ್ಮ ಸರ್ಕಾರದ ಐತಿಹಾಸಿಕ ನಿರ್ಧಾರಗಳನ್ನು ಶ್ಲಾಘಿಸಿದರು.
ಸಂಸತ್ತಿನ ಹೊಸ ಭವನಕ್ಕೆ ಸ್ಥಳಾಂತರಗೊಳ್ಳುವ ವಿಶೇಷ ಅಧಿವೇಶನದ ಮೊದಲ ದಿನದ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ಸುದೀರ್ಘವಾಗಿ ಮಾತನಾಡಿದ ಪ್ರಧಾನಿ, ಮನಮೋಹನ್​ ಸಿಂಗ್​ ಅಧಿಕಾರದ ಅವಧಿಯಲ್ಲಿ ಹಣಕ್ಕಾಗಿ ಮತ ಹಗರಣವನ್ನು ನೆನಪಿಸಿ, ವಿಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭದಲ್ಲಿ 2001ರಲ್ಲಿ ನಡೆದ ಉಗ್ರರ ದಾಳಿಯೂ ಸೇರಿದಂತೆ ಹೊಸ ಸಂಸತ್​ ಭವನದ ಕಹಿ ಮತ್ತು ಸಿಹಿ ಕ್ಷಣಗಳನ್ನು ಮೋದಿ ಮೆಲಕು ಹಾಕಿದರು.
ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದು ಇದರಿಂದಲೇ ಸಾಧ್ಯವಾಯಿತು ಎಂದು ಸದನವು ಎಂದಿಗೂ ಹೆಮ್ಮೆಯಿಂದ ಹೇಳುತ್ತದೆ. ಜಿಎಸ್‌ಟಿ ಕೂಡ ಇಲ್ಲಿಯೇ ಜಾರಿಯಾಯಿತು. ಒಂದು ಶ್ರೇಣಿ-ಒಂದು ಪಿಂಚಣಿ ಮಸೂದೆಗೂ ಈ ಭವನ ಸಾಕ್ಷಿಯಾಗಿದೆ ಮತ್ತು ಆರ್ಥಿಕ ದುರ್ಬಲರಿಗೆ ಶೇ. 10 ರಷ್ಟು ಮೀಸಲಾತಿ ಬಿಲ್​ ವಿವಾದವಿಲ್ಲದೆ ಮೊದಲ ಬಾರಿಗೆ ಜಾರಿಗೆಯಾಗಿದೆ ಎನ್ನುವ ಮೂಲಕ ಹಳೇ ಸಂಸತ್​ ಭವನದ ಸ್ಮರಣೀಯ ಕ್ಷಣಗಳನ್ನು ನೆನೆದರು.
ಇದೀಗ ಈ ಕಟ್ಟಡಕ್ಕೆ ವಿದಾಯ ಹೇಳುವುದು ಒಂದು ಭಾವನಾತ್ಮಕ ಕ್ಷಣವಾಗಿದೆ. ಈ ಕಟ್ಟಡದೊಂದಿಗೆ ಅನೇಕ ಕಹಿ-ಸಿಹಿ ನೆನಪುಗಳು ಸೇರಿವೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳು ಇರಬಹುದು ಆದರೆ, ನಾವು ‘ಪರಿವಾರ ಭಾವ’ (‘ಕುಟುಂಬದ ಭಾವನೆ’)ಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಮೋದಿ ಹೇಳಿದಾಗ ಬಿಜೆಪಿ ಸಂಸದರು ಮೇಜು ತಟ್ಟಿ ಸಹಮತ ವ್ಯಕ್ತಪಡಿಸಿದರು.
ಇದನ್ನೂ ಓದಿ:ಯೂಟ್ಯೂಬರ್ ವಾಸನ್​ ಬೈಕ್​ ಅಪಘಾತ; ಈ ರೀತಿಯ ಸ್ಟಂಟ್​ಗಳನ್ನು ಬೆಂಬಲಿಸಬೇಡಿ: ರೈಟರ್ ರತ್ನ ಕುಮಾರ್
ಹಳೇ ಸಂಸತ್​ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ಇದು ಕಟ್ಟಡದ ಮೇಲಿನ ದಾಳಿಯಲ್ಲ, ಒಂದು ರೀತಿಯಲ್ಲಿ ಇದು ಪ್ರಜಾಪ್ರಭುತ್ವದ ಮಾತೆಯ ಮೇಲಿನ ದಾಳಿ… ನಮ್ಮ ಜೀವಂತ ಆತ್ಮದ ಮೇಲಿನ ದಾಳಿಯಾಗಿದೆ. ದೇಶವು ಎಂದಿಗೂ ಈ ಘಟನೆಯನ್ನು ಮರೆಯಲು ಸಾಧ್ಯವಿಲ್ಲ ಎನ್ನುವ ಮೂಲಕ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ನಾನು ಸಂಸದನಾಗಿ ಮೊದಲ ಬಾರಿಗೆ ಈ ಭವನವನ್ನು ಪ್ರವೇಶಿಸಿದಾಗ ಪ್ರಜಾಪ್ರಭುತ್ವದ ದೇವಾಲಯಕ್ಕೆ ನಮಸ್ಕರಿಸಿ ಗೌರವಿಸಿದೆ. ಅದೊಂದು ಭಾವನಾತ್ಮಕ ಕ್ಷಣ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ವಾಸಿಸುವ ಬಡ ಕುಟುಂಬದ ಮಗು ಸಂಸತ್ತಿಗೆ ಪ್ರವೇಶಿಸಬಹುದು ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನನಗೆ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ನಾವೆಲ್ಲರೂ ಈ ಐತಿಹಾಸಿಕ ಕಟ್ಟಡಕ್ಕೆ ವಿದಾಯ ಹೇಳುತ್ತಿದ್ದೇವೆ. ಸ್ವಾತಂತ್ರ್ಯದ ಮೊದಲು ಇದು ಸಾಮ್ರಾಜ್ಯಶಾಹಿ ವಿಧಾನ ಪರಿಷತ್ತಿನ ಸ್ಥಳವಾಗಿತ್ತು. ಸ್ವಾತಂತ್ರ್ಯದ ನಂತರ ಇದು ಸಂಸತ್ತಿನ ಗುರುತನ್ನು ಗಳಿಸಿತು. ಈ ಕಟ್ಟಡವನ್ನು ನಿರ್ಮಿಸುವ ನಿರ್ಧಾರವನ್ನು ವಿದೇಶಿ ದೊರೆಗಳು ತೆಗೆದುಕೊಂಡಿರುವುದು ನಿಜ ಆದರೆ, ನಿರ್ಮಾಣಕ್ಕೆ ವ್ಯಯಿಸಿದ ಶ್ರಮ ಮತ್ತು ಹಣ (ನಮ್ಮ) ದೇಶವಾಸಿಗಳದ್ದು ಎಂದು ನಾವು ಹೆಮ್ಮೆಯಿಂದ ಹೇಳಬಹುದು ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಚಂದ್ರಯಾನ-3 ಚಂದ್ರ ಯೋಜನೆಯ ಯಶಸ್ಸನ್ನು ಶ್ಲಾಘಿಸಿದರು. ಭಾರತವು ಜಗತ್ತನ್ನು ಹೆಮ್ಮೆಪಡುವಂತೆ ಮಾಡಿದೆ. ಭಾರತದ ಶಕ್ತಿಯ ಹೊಸ ರೂಪವನ್ನು ಎತ್ತಿ ತೋರಿಸಿದೆ ಎಂದು ಹೇಳಿದರು. G20 ಶೃಂಗಸಭೆಯ ಯಶಸ್ಸಿನ ಬಗ್ಗೆ ಮಾತನಾಡಿ, ಆ ಯಶಸ್ಸನ್ನು 140 ಕೋಟಿ ಜನತೆಗೆ ಅರ್ಪಿಸಿದರು. ನೀವು ಜಿ-20ಯ ಯಶಸ್ಸನ್ನು ಸರ್ವಾನುಮತದಿಂದ ಶ್ಲಾಘಿಸಿದ್ದೀರಿ. ನಾನು ನಿಮಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಜಿ-20 ಯಶಸ್ಸಿನ ಯಶಸ್ಸು ದೇಶದ 140 ಕೋಟಿ ನಾಗರಿಕರದ್ದು. ಇದು ಭಾರತದ ಯಶಸ್ಸೇ ಹೊರತು ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದಲ್ಲ ಎಂದರು.(ಏಜೆನ್ಸೀಸ್​)
‘ಜವಾನ್​’ ಸಕ್ಸಸ್​; ಈ ಚಿತ್ರರಂಗದಲ್ಲಿ ಹೆಚ್ಚಾಯ್ತು ‘ನಯನತಾರ’ಗೆ ಭಾರೀ ಬೇಡಿಕೆ!

ಅಕ್ರಮವಾಗಿ ವಿದೇಶದಿಂದ ಸಾಗಿಸುತ್ತಿದ್ದ ಇ-ಸಿಗರೇಟ್​ ವಶ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
