ದೇಶದ ಮೊದಲ ಸೇನಾ ಕಮಾಂಡರ್ ಆಗಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ 1948ರ ಜನವರಿ 15ರಂದು ಅಧಿಕಾರ ಸ್ವೀಕರಿಸಿದ ದಿನವನ್ನು ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಯಲ್ಲಿ ಶ್ರದ್ಧಾಂಜಲಿ ಅರ್ಪಿಸುವುದು, ಸೈನಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು ಕಾರ್ಯಕ್ರಮದ ಪ್ರಮುಖ ಆಚರಣೆಯಾಗಿದ್ದು, ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು ಪಾಲ್ಗೊಳ್ಳುತ್ತಾರೆ.
ಆಧುನಿಕ ತಂತ್ರಜ್ಞಾನ:ಚೀನಾ ಹಾಗೂ ಪಾಕಿಸ್ತಾನ ಗಡಿಯಲ್ಲಿ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಗಡಿಯಲ್ಲಿ ಸಂಭವನೀಯ ದಾಳಿಗಳನ್ನು ತಡೆಯಬಹುದಾಗಿದೆ.
ಮೇಕ್ ಇನ್ ಇಂಡಿಯಾಗೆ ಆದ್ಯತೆ:ಪ್ರಮುಖ ಯುದ್ಧೋಪಕರಣ ಆಮದಿನಲ್ಲಿ ವಿಳಂಬವಾಗುತ್ತಿರುವುದರಿಂದ ಟ್ಯಾಂಕ್ ಹಾಗೂ ಇತರ ಸೇನಾ ಉಪಕರಣಗಳ ಬಿಡಿ ಭಾಗಗಳನ್ನು ದೇಶಿಯವಾಗಿ ನಿರ್ವಿುಸುವ ಕಾರ್ಯಕ್ಕೆ ಭಾರತೀಯ ಸೇನೆ ವೇಗ ನೀಡಲು ನಿರ್ಧರಿಸಿದೆ. ಸೇನಾ ಉಪಕರಣದ ಶೇಕಡ 60ರಷ್ಟು ಬಿಡಿ ಭಾಗಗಳನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ದೇಶಿಯವಾಗಿ ಉತ್ಪಾದಿಸುವ ಕಾರ್ಯಕ್ಕೆ ವೇಗ ನೀಡುವ ಮೂಲಕ ಈ ಆಮದನ್ನು ಶೇಕಡ 30ಕ್ಕೆ ಇಳಿಸುವ ಗುರಿಯನ್ನು ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ ಹೊಂದಿದೆ.
2ನೇ ಅತಿ ದೊಡ್ಡ ಸೇನೆ:ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಸಂಖ್ಯೆಯ ಸೇನಾಪಡೆಯನ್ನು ಭಾರತ ಹೊಂದಿದ್ದು, ಹೆಚ್ಚಿನ ಪ್ರಮಾಣದ ಆಧುನಿಕ ಶಸ್ತ್ರಾಸ್ತ್ರಗಳ ಅಗತ್ಯವಿದೆ. ಜತೆಗೆ ಪಾಕಿಸ್ತಾನ ಮತ್ತು ಚೀನಾದಿಂದ ಪದೇಪದೆ ಗಡಿ ಸಮಸ್ಯೆ ಉಂಟಾಗುತ್ತಿದ್ದು, ಉಗ್ರರ ಉಪಟಳ ತಡೆಯಲು ಸೇನೆಗೆ ಶಸ್ತ್ರಾಸ್ತ್ರಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ -ಠಿ; 40 ಸಾವಿರ ಕೋಟಿ ವೆಚ್ಚದ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಒಪ್ಪಿಗೆ ನೀಡಿದೆ.
ಸೇನೆಗೆ ಕಾಯಕಲ್ಪ:ಸೇನೆಯ ಸಂಘಟನಾತ್ಮಕ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಮರುವಿನ್ಯಾಸ ಮಾಡಲಾಗುತ್ತಿದೆ. ಮರುವಿನ್ಯಾಸವು ಸೇನಾ ಸಿಬ್ಬಂದಿ ಕಡಿತ ಮತ್ತು ಸೇನಾ ವ್ಯವಸ್ಥೆಯಲ್ಲಿ ಬದಲಾವಣೆ ತರಲಿದೆ. ಭೂ ಸೇನೆಯಲ್ಲಿ ವಿವಿಧ ವಿಭಾಗಗಳಿದ್ದು, ಒಂದೇ ರೀತಿಯ ಕೆಲಸಗಳು ಬೇರೆ ಬೇರೆ ವಿಭಾಗದಲ್ಲಿ ನಡೆಯುತ್ತಿರುತ್ತವೆ. ಇದನ್ನು ತಪ್ಪಿಸಲು ಮಾರ್ಗೋಪಾಯ ರೂಪಿಸಲಾಗುತ್ತದೆ.
ಬಲ ತುಂಬಿದ ರಫೇಲ್:ಭಾರತೀಯ ವಾಯುಪಡೆಗೆ 2020ರಲ್ಲಿ ರಫೇಲ್ ಜೆಟ್​ಗಳು ಮೂರು ಕಂತುಗಳಲ್ಲಿ ಸೇರ್ಪಡೆಗೊಂಡವು. ಈ ಮೂಲಕ ಅತ್ಯಾಧುನಿಕ ಯುದ್ಧವಿಮಾನಗಳನ್ನು ಹೊಂದಿದ ಸೇನೆಗೆ ಭಾರತ ಸೇರ್ಪಡೆಯಾಗಿದ್ದು, ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನೆರವಾಗಲಿದೆ.
ಸ್ತ್ರೀಶಕ್ತಿ:ಭಾರತೀಯ ಭೂಸೇನೆಯಲ್ಲಿ ಮಹಿಳಾ ಅಧಿಕಾರಿಗಳ ಪೂರ್ಣಾವಧಿ ನೇಮಕಾತಿ (ಪರ್ಮನೆಂಟ್ ಕಮಿಷನ್) ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಸೇನೆಯ ಒಟ್ಟು 10 ವಿಭಾಗಗಳಿಗೆ ಮಹಿಳಾ ಅಧಿಕಾರಿಗಳ ಸೇವೆಯನ್ನು ಪೂರ್ಣಕಾಲಿಕವಾಗಿಸಲು ನಿರ್ಧರಿಸಲಾಗಿದೆ. ಮಹಿಳಾ ಅಧಿಕಾರಿಗಳ ಸೇವಾಜ್ಯೇಷ್ಠತೆ, ಅರ್ಹತೆ ಇನ್ನಿತರ ಮಾನದಂಡಗಳನ್ನು ಪರಿಗಣಿಸಿ ಅವರಿಗೆ ಈ ಹುದ್ದೆ ನೀಡಲಾಗುತ್ತದೆ. ಯುದ್ಧವಿಮಾನಗಳಿಗೆ ಮಹಿಳಾ ಪೈಲಟ್​ಗಳು ನೇಮಕಗೊಂಡಿರುವುದು ಗಮನಾರ್ಹ.
ದಿಟ್ಟ ಉತ್ತರ:ಜಮ್ಮು-ಕಾಶ್ಮೀರ ಗಡಿಯ ಮೂಲಕ ಭಾರತದೊಳಕ್ಕೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಭಯೋತ್ಪಾದಕರನ್ನು ಸದೆಬಡಿಯುವ ಮೂಲಕ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿತು. ಅಲ್ಲದೆ, 2020ರಲ್ಲೂ ಹಲವು ಎನ್​ಕೌಂಟರ್​ಗಳಲ್ಲಿ ಭಯೋತ್ಪಾದಕ ಸಂಘಟನೆಗಳ ಪ್ರಮುಖ ಕಮಾಂಡರ್​ಗಳು ಹತರಾದರು. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಯಿತು. ಗಡಿ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ಮಾಡಿದ ಪಾಕ್ ಸೇನೆಯ ಕುಕೃತ್ಯಕ್ಕೆ ಸಮರ್ಥ ಉತ್ತರ ನೀಡಲಾಯಿತು. ಅದೇ ರೀತಿ ಡೋಕ್ಲಾಂ ಬಿಕ್ಕಟ್ಟು ಭಾರಿ ತಲ್ಲಣವನ್ನು ಸೃಷ್ಟಿಸಿತ್ತು. ಸೇನಾಮಟ್ಟದ ಮಾತುಕತೆ ಮತ್ತು ರಾಜತಾಂತ್ರಿಕ ಚರ್ಚೆಗಳ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಲಡಾಖ್ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಸಿದ್ದ ಚೀನಿ ಸೇನೆಗೆ ಭಾರತ ದಿಟ್ಟ ಉತ್ತರ ನೀಡಿತು.
ಗಂಡನನ್ನು ಬಿಟ್ಟಿರಲಾಗದೆ ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿದಳು!

ಈ ವಿಷಯದಲ್ಲಿ ಬೆಂಗಳೂರು ದೇಶದಲ್ಲೇ 2ನೇ ಹಾಗೂ ಜಗತ್ತಿನಲ್ಲೇ 6ನೇ ಕೆಟ್ಟ ನಗರ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − eight =
Remember me
