ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ123ಪೇ ಅನ್ನು ಇತ್ತೀಚೆಗೆ ಪರಿಚಯಿಸಿದೆ. ಇದು ಯುಪಿಐ ಆಧಾರಿತ ಹೊಸ ಸೇವೆ. ಫೀಚರ್ ಫೋನ್​ನಲ್ಲಿ ಮತ್ತು ಇಂಟರ್​ನೆಟ್ ರಹಿತವಾಗಿ ಬಳಸುವುದಕ್ಕೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೂ ಮೊದಲು ಫೀಚರ್ ಫೋನ್​ನಲ್ಲಿ ಅನ್​ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವೀಸ್ ಡೇಟಾ (ಯುಎಸ್​ಎಸ್​ಡಿ) ಮೂಲಕ ಬ್ಯಾಂಕಿಂಗ್ ಸೇವೆ ಪಡೆಯಲಾಗುತ್ತಿತ್ತು.
ಏನಿದು ಹೊಸ ವ್ಯವಸ್ಥೆ?:ಇಂಟರ್​ನೆಟ್, ಕ್ಯಾಮರಾ ಮತ್ತು ಇತರೆ ಸೌಲಭ್ಯ ಬಳಸಿಕೊಂಡು ಸ್ಮಾರ್ಟ್​ಫೋನ್​ನಲ್ಲಿ ಯುಪಿಐ ಮೂಲಕ ಪಾವತಿ ಮಾಡಲಾಗುತ್ತದೆ. ಫೀಚರ್ ಫೋನ್​ಗಳಲ್ಲಿ ಈ ಸೌಲಭ್ಯ ಇಲ್ಲ. ಈ ಸಮಸ್ಯೆ ಬಗೆಹರಿಸಲು ಖಿಕಐ123ಕಚಢ (ಯುಪಿಐ123ಪೇ) ಎಂಬ ಸೇವೆಯನ್ನು ಆರ್​ಬಿಐ ಪರಿಚಯಿಸಿದೆ. ಇಂಟರ್ಯಾಕ್ಟಿವ್ ವಾಯ್್ಸ ರೆಸ್ಪಾನ್ಸ್ (ಐವಿಆರ್) ನಂಬರ್, ಫೀಚರ್ ಫೋನ್ ಆಪ್, ಮಿಸ್ಡ್ ಕಾಲ್ ಮತ್ತು ಧ್ವನಿ ಆಧಾರಿತ ವ್ಯವಸ್ಥೆಗಳ ಮೂಲಕ ಈ ಪಾವತಿ ಸೇವೆಯನ್ನು ಸಕ್ರಿಯಗೊಳಿಸಲಾಗಿದೆ. ಇದಕ್ಕೆ ಡಿಜಿಸಾಥಿ ಎಂಬ 24ಗಿ7 ಸಹಾಯವಾಣಿ ನೆರವನ್ನೂ ಜೋಡಿಸಲಾಗಿದೆ.
ಫೀಚರ್ ಫೋನ್ ಬಳಕೆದಾರರೆಷ್ಟು?:ಕೌಂಟರ್​ಪಾಯಿಂಟ್ ರಿಸರ್ಚ್​ನ 2021ರ ಆಗಸ್ಟ್ ತಿಂಗಳ ವರದಿ ಪ್ರಕಾರ, ಭಾರತದಲ್ಲಿ 32 ಕೋಟಿ ಫೀಚರ್ ಫೋನ್ ಬಳಕೆದಾರರಿದ್ದಾರೆ. ಡಿಲೋಯ್ಟೆಯ ಫೆಬ್ರವರಿ ತಿಂಗಳ ವರದಿ ಪ್ರಕಾರ ದೇಶದಲ್ಲಿ 120 ಕೋಟಿ ಮೊಬೈಲ್ ಫೋನ್ ಬಳಕೆದಾರರ ಪೈಕಿ 75 ಕೋಟಿ ಸ್ಮಾರ್ಟ್​ಫೋನ್ ಬಳಕೆದಾರರು.
ಫೀಚರ್ ಫೋನ್​ನಲ್ಲಿ ಯುಪಿಐ ಇತ್ತಾ?:ಫೀಚರ್ ಫೋನ್​ಗೆ ಯುಪಿಐ ಬಳಕೆ ಹೊಸದೇನಲ್ಲ. ಈ ಹಿಂದೆಯೂ ಇದನ್ನು ಬಳಸಲಾಗುತ್ತಿತ್ತು. ಹಿಂದೆ ಅನ್​ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವೀಸ್ ಡೇಟಾ (ಯುಎಸ್​ಎಸ್​ಡಿ)ದೊಂದಿಗೆ ಯುಪಿಐ ಬಳಸಲಾಗುತ್ತಿತ್ತು. ಆದರೆ ಇದು ಕ್ಯೂಆರ್ ಕೋಡ್ ಆಧಾರಿತ ಪಾವತಿಯಷ್ಟು ಬಳಕೆಗೆ ಬರಲಿಲ್ಲ. ಫೀಚರ್ ಫೋನ್ ಬಳಕೆದಾರರು *99 ಡಯಲ್ ಮಾಡಿ ಯುಪಿಐ ಪಾವತಿ ಮಾಡಬಹುದು. ಆದರೆ, ಇದು ಬಳಕೆದಾರ ಸ್ನೇಹಿ ಎನಿಸಿರಲಿಲ್ಲ.
ಧ್ವನಿ ಆಧಾರಿತ ಯುಪಿಐ:ಧ್ವನಿ ಆಧಾರಿತವಾದ ಯುಪಿಐ ಸೇವೆ ಕೂಡ ಹೊಸದಲ್ಲ. ಗೂಗಲ್ ತೇಜ್ ಆಪ್ ಮೂಲಕ ಮೊದಲ ಬಾರಿಗೆ 2017ರಲ್ಲಿ ಒದಗಿಸಿತ್ತು. ಗೂಗಲ್ ಇದನ್ನು ಕ್ಯಾಶ್ ಮೋಡ್ ಎಂದು ಕರೆದಿತ್ತು. ಬ್ಲೂಟೂತ್ ಮಾದರಿಯಲ್ಲಿ ಇದು ಕೆಲಸ ನಿರ್ವಹಿಸುತ್ತಿತ್ತು. ಟೋನ್ ಟ್ಯಾಗ್ ಎಂಬ ಕಂಪನಿ ಕೂಡ ಆಡಿಯೋ ಆಧಾರಿತ ಪಾಯಿಂಟ್ ಆಫ್ ಸೇಲ್ ಮಷಿನ್ ಅನ್ನು ಉತ್ಪಾದಿಸುತ್ತಿದೆ.
ಧ್ವನಿ ಆಧಾರಿತ ಸೇವೆ ಸುರಕ್ಷಿತವೇ?:ಧ್ವನಿ ತರಂಗಾಂತರ ಆಧಾರಿತ ಪಾವತಿ ಸ್ಪರ್ಶರಹಿತವಾದುದು. ಆದರೆ, ಇದಕ್ಕೆ ನಿಶ್ಚಿತ ಸಾಮೀಪ್ಯ ಅಗತ್ಯ. ಅಮೆರಿಕ ಮೂಲದ ನವೋದ್ಯಮ ಚಿರ್ಪ್ 2011ರಲ್ಲೇ ಇಂತಹ ಉಪಕರಣವನ್ನು ಪರಿಚಯಿಸಿತ್ತು. ಇವು ಎನ್ಕ್ರಿಪ್ಟೆಡ್ ಆಗಿದ್ದು, ಸ್ವೀಕೃತಿದಾರ ಡಿಕ್ರಿಪ್ಟ್ ಮಾಡಿಕೊಂಡು ಸಂದೇಶ ಪಡೆಯುವಂಥದ್ದಾಗಿದೆ. ಹೀಗಾಗಿ ಇದು ಸುರಕ್ಷಿತವಾದುದು.
ಕಾರ್ ಡೋರ್​ ತೆಗೆಯಲಾಗದೆ ಸಾವು!; ರಕ್ಷಿಸುವಷ್ಟರಲ್ಲಿ ಸ್ಫೋಟ, ಜೀವಂತ ಸುಟ್ಟುಹೋದ ಯುವಕ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 10 =
Remember me
