ನವದೆಹಲಿ:ಹದಿನಾರನೇ ರಾಷ್ಟ್ರಪತಿ ಆಯ್ಕೆಗೆ ಸೋಮವಾರ (ಜು.18) ಮತದಾನ ನಡೆಯಲಿದ್ದು, ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಬಹುತೇಕ ಖಚಿತ ಎನಿಸಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ ಸಿನ್ಹಾ ಉಮೇದುವಾರಿಕೆ ಸ್ಪರ್ಧೆಗಷ್ಟೇ ಸೀಮಿತವಾಗಲಿದೆ. ಸಂಸದರು ಮತ್ತು ರಾಜ್ಯಗಳ ವಿಧಾನಸಭೆಯ ಸದಸ್ಯರು ಸೇರಿ ಅಂದಾಜು 4,800 ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ಶಾಸಕರು ಆಯಾ ರಾಜ್ಯಗಳ ವಿಧಾನಸಭೆಯಲ್ಲಿ ಮತ್ತು ಸಂಸದರು ತಮ್ಮ ರಾಜ್ಯಗಳ ಮತಕೇಂದ್ರ ಅಥವಾ ದೆಹಲಿಯ ಸಂಸತ್ ಭವನದಲ್ಲಿ ಮತದಾನ ಮಾಡಬಹುದಾಗಿದೆ. ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆ ಆಗಿರುವ ಕಾರಣ ಪ್ರತಿ ಸಂಸದರ ಮತಮೌಲ್ಯ 708ರಿಂದ 700ಕ್ಕೆ ಇಳಿದಿದೆ. ಶಾಸಕರ ಮತಮೌಲ್ಯವು ಆಯಾ ರಾಜ್ಯಗಳ ಜನಸಂಖ್ಯೆ ಅನುಗುಣವಾಗಿ ಇರಲಿದೆ. ಉದಾಹರಣೆಗೆ ಉತ್ತರಪ್ರದೇಶದ ಶಾಸಕರ ಮತಮೌಲ್ಯ 208 (ಗರಿಷ್ಠ) ಇದ್ದರೆ, ಸಿಕ್ಕಿಂನಲ್ಲಿ ಇದು ಏಳು (ಕನಿಷ್ಠ) ಆಗಿದೆ. ಮತಪತ್ರದಲ್ಲಿ ಪ್ರಾಶಸ್ಱವಾರು ಮತವನ್ನು ಗುರುತು ಮಾಡುವುದರ ಮೂಲಕ ಮತದಾರರು ತಮ್ಮ ಆಯ್ಕೆಯನ್ನು ಸೂಚಿಸಬಹುದು. ಮತ ಎಣಿಕೆ ಜುಲೈ 21ರಂದು ನಡೆಯಲಿದ್ದು, ಹೊಸ ರಾಷ್ಟ್ರಪತಿಗಳು 25ಕ್ಕೆ ಪದಗ್ರಹಣ ಮಾಡಲಿದ್ದಾರೆ.
ತೇಜಸ್ವಿ ಯಾದವ್ ವಿವಾದಾತ್ಮಕ ಹೇಳಿಕೆ:ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ ಸಿನ್ಹಾರನ್ನು ಹೋಲಿಕೆ ಮಾಡುವ ವೇಳೆ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ತೀಕ್ಷ್ಣ ಟೀಕಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಪ್ರತಿಮೆ ಪ್ರತಿಷ್ಠಾಪಿಸುವ ಚುನಾವಣೆಯಲ್ಲ. ನಾವು ರಾಷ್ಟ್ರಪತಿ ಭವನದಲ್ಲಿ ಯಾವುದೇ ಪ್ರತಿಮೆಯನ್ನು ಸ್ಥಾಪಿಸಲು ಬಯಸುವುದಿಲ್ಲ. ಕ್ರಿಯಾತ್ಮಕವಾಗಿರುವ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತೇವೆ. ಸಿನ್ಹಾರ ಅಭಿಪ್ರಾಯಗಳು ಸಾರ್ವಜನಿಕವಾಗಿ ಗಟ್ಟಿ ದನಿಯಲ್ಲಿ ಕೇಳುತ್ತವೆ. ಆದರೆ, ಆಡಳಿತ ಪಕ್ಷ ಬೆಂಬಲಿತ ಅಭ್ಯರ್ಥಿ ಧ್ವನಿಯನ್ನೇ ಕೇಳಿಲ್ಲ ಎಂದಿದ್ದಾರೆ.
ಈ ಚುನಾವಣೆ ಇಬ್ಬರು ಅಭ್ಯರ್ಥಿಗಳ ನಡುವಿನ ಹಣಾಹಣಿಯಲ್ಲ. ಇದು ಸೈದ್ಧಾಂತಿಕ ಹೋರಾಟ. ಎದುರಾಳಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವವರು ನಿತ್ಯ ಪ್ರಜಾತಂತ್ರದ ಮೇಲೆ ಸವಾರಿ ಮಾಡುತ್ತಿದ್ದಾರೆ. ಆದರೆ, ನಾನು ಜಾತ್ಯತೀತತೆ, ಸಂವಿಧಾನವನ್ನು ರಕ್ಷಿಸುವ ಕಾರ್ಯ ಮಾಡುವೆ.
|ಯಶವಂತ ಸಿನ್ಹಾವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ
ಮುರ್ಮುಗೆ ಶೇ. 60 ಬೆಂಬಲ:4,800 ಮತದಾರರ ಮತಮೌಲ್ಯವು 10,86,431 ಆಗಿದ್ದು, ಈ ಪೈಕಿ 6.67 ಲಕ್ಷ (ಶೇ. 60) ಮತಮೌಲ್ಯದ ಬೆಂಬಲ ಮಮು ಪರವಾಗಿ ವ್ಯಕ್ತವಾಗಿದೆ. ಬಿಜೆಪಿ ಮತ್ತು ಎನ್​ಡಿಎ ಮಿತ್ರಪಕ್ಷಗಳು, ಬಿಎಸ್​ಪಿ, ಒಡಿಶಾದ ಬಿಜೆಡಿ, ಆಂಧ್ರಪ್ರದೇಶದ ವೈಎಸ್​ಆರ್ ಕಾಂಗ್ರೆಸ್ ಪಕ್ಷ ಮತ್ತು ಟಿಡಿಪಿ, ತಮಿಳುನಾಡಿನ ಎಐಎಡಿಎಂಕೆ, ಕರ್ನಾಟಕದ ಜೆಡಿಎಸ್, ಪಂಜಾಬ್​ನ ಶಿರೋಮಣಿ ಅಕಾಲಿ ದಳ, ಮಹಾರಾಷ್ಟ್ರದ ಶಿವಸೇನೆ ಮತ್ತು ಜಾರ್ಖಂಡ್​ನ ಜೆಎಂಎಂ ಪಕ್ಷಗಳು ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮುಗೆ ಈಗಾಗಲೇ ಬೆಂಬಲ ಘೋಷಿಸಿವೆ.
ಸಿನ್ಹಾಗೆ ಬೆಂಬಲ:ಕಾಂಗ್ರೆಸ್ ಮತ್ತು ಯುಪಿಎ ಅಂಗಪಕ್ಷಗಳು, ಟಿಎಂಸಿ, ಎಸ್​ಪಿ, ಆರ್​ಜೆಡಿ, ನ್ಯಾಷನಲ್ ಕಾನ್ಪರೆನ್ಸ್, ಎನ್​ಸಿಪಿ, ಡಿಎಂಕೆ, ಎಡರಂಗ ಇನ್ನಿತರ ಪ್ರಾದೇಶಿಕ ಪಕ್ಷಗಳು ಯಶವಂತ ಸಿನ್ಹಾಗೆ ಬೆಂಬಲ ವ್ಯಕ್ತಪಡಿಸಿವೆ.
ಕರ್ನಾಟಕದ ಬಲಾಬಲ:ರಾಷ್ಟ್ರಪತಿ ಚುನಾವಣೆಗಾಗಿ ವಿಧಾನಸೌಧದಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 224 ಶಾಸಕರಲ್ಲಿ ಸ್ಪೀಕರ್, ತಲಾ ಒಬ್ಬ ಬಿಎಸ್ಪಿ, ಪಕ್ಷೇತರ ಸದಸ್ಯ ಪಕ್ಷದ ಸಹ ಸದಸ್ಯರಾಗಿರುವುದು ಸೇರಿ ಬಿಜೆಪಿ 122 ಸದಸ್ಯ ಬಲ ಹೊಂದಿದೆ. ಜೆಡಿಎಸ್ ಕೂಡ ಮುರ್ಮು ಬೆಂಬಲಲಿಸಿದ್ದು, ವಿಧಾನಸಭೆಯಲ್ಲಿ ಆ ಪಕ್ಷವು 32 ಸದಸ್ಯರ ಬಲ ಹೊಂದಿದೆ. ಪ್ರತಿಪಕ್ಷ ಕಾಂಗ್ರೆಸ್ 69 ಶಾಸಕರ ಜತೆಗೆ ಒಬ್ಬ ಪಕ್ಷೇತರ ಸಹ ಸದಸ್ಯರಾಗಿ ಗುರುತಿಸಿಕೊಂಡಿದ್ದು, ಒಟ್ಟು 70 ಸದಸ್ಯರ ಬಲ ಪಡೆದುಕೊಂಡಿದೆ.
ನವದೆಹಲಿ:ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವೆ ಮತ್ತು ರಾಜ್ಯಪಾಲೆ ಆಗಿದ್ದ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವ (77) ಆಯ್ಕೆ ಆಗಿದ್ದಾರೆ. ಅಭ್ಯರ್ಥಿಯ ಆಯ್ಕೆಗೆ ವಿರೋಧ ಪಕ್ಷಗಳ ಸಭೆ ಭಾನುವಾರ ನಡೆದ ನಂತರ ಆಳ್ವಾ ಹೆಸರನ್ನು ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು. ಎನ್​ಡಿಎಯಿಂದ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನ್ಕರ್ ಅಭ್ಯರ್ಥಿಯಾಗಿದ್ದು, ಆ.6ರಂದು ಮತದಾನ ನಡೆಯಲಿದೆ. ಐದು ಬಾರಿ ಸಂಸದರಾಗಿ, ಕೇಂದ್ರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿ, ನಾಲ್ಕು ರಾಜ್ಯಗಳ ರಾಜ್ಯಪಾಲರಾಗಿ ಅಪಾರ ಅನುಭವ ಹೊಂದಿರುವ ಆಳ್ವ ಅಭ್ಯರ್ಥಿಯಾಗಿರುವುದು ಸಮರ್ಥ ಆಯ್ಕೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗುವುದು ಗೌರವದ ವಿಷಯ. ವಿಶ್ವಾಸವಿರಿಸಿ ನನ್ನನ್ನು ಸಮರ್ಥ ಅಭ್ಯರ್ಥಿ ಎಂದು ಪರಿಗಣಿಸಿದ ಪ್ರತಿಪಕ್ಷಗಳ ಮುಖಂಡರಿಗೆ ಧನ್ಯವಾದ ಎಂದು ಮಾರ್ಗರೆಟ್ ಆಳ್ವ ಟ್ವೀಟ್ ಮಾಡಿದ್ದಾರೆ.
ಮೇಘಸ್ಫೋಟದ ಹಿಂದೆ ವಿದೇಶಿ ಕೈವಾಡ!; ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
